Oyorooms IN

Wednesday, 29th March, 2017 10:53 AM

BREAKING NEWS

ಚಾಮರಾಜನಗರ

ತಾಯಿ ಸಮಾಧಿ ಬಳಿಯೇ ಮಣ್ಣಾದ ಮಹದೇವಪ್ರಸಾದ್

ಚಾಮರಾಜನಗರ: ಸಹಕಾರಿ, ಸಕ್ಕರೆ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ಗುಂಡ್ಲುಪೇಟೆಯ, ಹಾಲಹಳ್ಳಿಯಲ್ಲಿರುವ ಫಾರ್ಮ್ ಹೌಸಿನಲ್ಲಿ ನೆರವೇರಿಸಲಾಯಿತು.
ಬೆಳಗ್ಗೆಯಿಂದಲೇ ಮಹದೇವ ಪ್ರಸಾದ್ ಅವರ ಅಂತಿಮ ದರ್ಶನವವನ್ನು ಸಾರ್ವಜನಿಕರು ಪಡೆದರು, ಪಾರ್ಥೀವ ಶರೀರಕ್ಕೆ ವೀರಶೈವ ಸಂಪ್ರದಾಯದಂತೆ  ಅಂತಿಮ ಧಾರ್ಮಿಕ ವಿಧಿ ವಿಧಾನವನ್ನು ಪುತ್ರ ಗಣೇಶ್ ಪ್ರಸಾದ್ ನಡೆಸಿದರು.

ಮಹದೇವಪ್ರಸಾದ್ ಅವರ ತಾಯಿ ಸಮಾಧಿ ಪಕ್ಕದಲ್ಲಿಯೇ ಮಹದೇವಪ್ರಸಾದ್ ಅವರ ಅಂತ್ಯ ಕ್ರಿಯೆ ನಡೆಸಲಾಗಿದ್ದು, ಸರ್ಕಾರಿ ಗೌರವವಾಗಿ ಮೂರು ಸುತ್ತು ಕುಶಾಲ ತೋಪು ಹಾರಿಸಲಾಯಿತು,   ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ಹಾಜರಿದ್ದರು. ಅಂತಿಮ ಸಂಸ್ಕಾರದ ವೇಳೆ ಹಾಜರಿದ್ದರು.

ಮಂಗಳವಾರ ಸಂಜೆಯೇ ಪಾರ್ಥಿವ ಶರೀರವನ್ನು ಚಾಮರಾಜನಗರದ ಗುಂಡ್ಲುಪೇಟೆಯ ದೇವರಾಜ ಅರಸು ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಅನೇಕ ಬೆಂಬಲಿಗರು, ಕಾರ್ಯಕರ್ತರು ಅಂತಿಮ ದರ್ಶನ ಪಡೆದರು. ಅಲ್ಲಿಂದ ಮಹದೇವ ಪ್ರಸಾದ್ ಸ್ವಗ್ರಾಮ ಹಾಲಹಳ್ಳಿಗೆ ಪಾರ್ಥೀವ ಶರೀರವನ್ನು ಅವರ ಮನೆಯ ಬಳಿ ಸಾರ್ವತ್ರಿಕ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

English summary:  Mahadeva Prasad funeral at chamarajanagara

ಚಾಮರಾಜನಗರ ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...