Oyorooms IN

Tuesday, 17th January, 2017 10:17 AM

BREAKING NEWS

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!! , ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ ,

ಚಿಕ್ಕಬಳ್ಳಾಪುರ

ಪ್ರಜೆಗಳ ಹಕ್ಕುಗಳನ್ನು ಮೊಟಕುಗೊಳಿಸಲು ಕೇಂದ್ರ ಸರಕಾರದ ಹುನ್ನಾರ: ಮಾಜಿ ಸಚಿವ ವಿ.ಮುನಿಯಪ್ಪ

2

ಶಿಡ್ಲಘಟ್ಟ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳಿಗಿರುವ ಹಕ್ಕುಗಳನ್ನು ಮೊಟಕುಗೊಳಿಸಲು ಕೇಂದ್ರ ಸರಕಾರ ಹುನ್ನಾರ ನಡೆಸಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ಆರೋಪಿಸಿದರು.
ಕ್ಷೇತ್ರದ ಕೋರ್‍ಲಪರ್ತಿಯಲ್ಲಿ ಯುವ ಕಾಂಗ್ರೆಸ್ ಸಮಿತಿಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು ದೇಶದಲ್ಲಿ ಐದು ನೂರು ಮತ್ತು ಒಂದು ಸಾವಿರ ರೂಗಳ ನೋಟುಗಳನ್ನು ನಿಷೇಧಿಸುವ ಭರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಲಿ ಕಾರ್ಮಿಕರು,ರೈತರು ಹಾಗೂ ಬಡವರನ್ನು ಬ್ಯಾಂಕ್ ಮುಂದೆ ನಿಲ್ಲಿಸಿ ತಮ್ಮ ಹಣವನ್ನು ಪಡೆಯಲು ಷರತು ವಿಧಿಸುವ ಮೂಲಕ ಜನರ ನೆಮ್ಮದಿಯನ್ನು ಭಂಗ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿದೇಶ ಪ್ರವಾಸ ಮಾಡಿದ್ದೆ ಸಾಧನೆ: ಯು.ಪಿ.ಎ ಸರಕಾರದಲ್ಲಿ ಕೈಗೊಂಡಿರುವ ಯೋಜನೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದುವರೆಸಿದ್ದಾರೆ ವಿನಃ ಹೊಸ ಯೋಜನೆಗಳನ್ನು ಜಾರಿಗಳಿಸಲು ಸಂಪೂರ್ಣವಾಗಿ ವಿಫಲರಾಗಿದ್ದು ಕೇವಲ ಭಾಷಣಗಳ ಮೂಲಕ ಜನರನ್ನು ಮರಳು ಮಾಡುತ್ತಿರುವ ಪ್ರಧಾನಮಂತ್ರಿಗಳು ವಿದೇಶ ಪ್ರವಾಸ ಮಾಡಿದ್ದೆ ದೊಡ್ಡ ಸಾಧನೆ ಎಂದು ಲೇವಡಿ ಮಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಇತಿಹಾಸವಿದೆ ದೇಶಕ್ಕಾಗಿ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ,ರಾಜೀವ್‌ಗಾಂಧಿ ಪ್ರಾಣತ್ಯಾಗ ಮಾಡಿದ್ದಾರೆ ಬಿಜೆಪಿ ಮತ್ತು ಜೆ.ಡಿ.ಎಸ್ ಪಕ್ಷಗಳು ಏನು ತ್ಯಾಗ ಮಾಡಿದ್ದಾರೆ ಎಂದು ಪ್ರಶ್ನಸಿದ ಮಾಜಿ ಸಚಿವರು ಕುಟುಂಬ ಪಕ್ಷ ಜೆ.ಡಿ.ಎಸ್ ಹಾಗೂ ಸಮಾಜದಲ್ಲಿ ಜಾತಿಯ ವಿಷಬೀಜ ಬಿತ್ತನೆ ಮಾಡುವ ಬಿಜೆಪಿ ಪಕ್ಷದಿಂದ ದೂರ ಉಳಿದು ಸರ್ವ ಜನಾಂಗ ದ ಅಭಿವೃಧ್ದಿಯನ್ನು ಬಯಸುವ ಜಾತ್ಯತೀತ ಕಾಂಗ್ರೆಸ್ ಪಕ್ಷಕ್ಕೆ ಸೇರಿ ರಾಷ್ಟ್ರದ ಅಭಿವೃಧ್ದಿಗೆ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಪ್ರಶ್ನಿಸುವ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಚಿವರು ಯು.ಪಿ.ಎ ಸರಕಾರದ ಅವಧಿಯಲ್ಲಿ ರೈತರ 79 ಸಾವಿರ ಕೋಟಿ ಸಾಲ ಮನ್ನಾ,ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಸ್ವಚ್ಛಭಾರತ ಅಭಿಯಾನ, ರಾಷ್ಟ್ರೀಯ ತೋಟಗಾರಿಕೆ ಮಿಷನ್,ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಮತ್ತಿತರರ ಯೋಜನೆಗಳ ಮೂಲಕ ದೇಶದ ಸ್ವರೂಪವನ್ನು ಬದಲಿಸಿದ ಕಾಂಗ್ರೆಸ್ ಪಕ್ಷದ ಕೊಡುಗೆ ಏನೆಂದು ಪ್ರಶ್ನಿಸುವರಿಗೆ ಕಾಮಾಲೆ ರೋಗ ಬಂದಿದೆ ಅನಿಸುತ್ತದೆ ಎಂದು ಲೇವಡಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ವಿ.ಸುಭ್ರಮಣಿ, ಪಿಕಾರ್ಡ್ ಬ್ಯಾಂಕಿನ ಉಪಾಧ್ಯಕ್ಷ ಮಾದೇನಹಳ್ಳಿ ರವಿ, ಕೋರ್‍ಲಪರ್ತಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಟಿ.ವೆಂಕಟರಾಯಪ್ಪ, ಸದಸ್ಯ ಕೆ.ವಿ.ವೆಂಕಟನಾರಾಯಣ,ಮುಖಂಡರಾದ ಕೃಷ್ಣರೆಡ್ಡಿ, ಟಿ.ವಿ.ವೇಣುಗೋಪಾಲ, ಕೆ.ವಿ.ಮಂಜುನಾಥ್, ಮದ್ದರೆಡ್ಡಿ ಕೆ.ಆರ್.ಪ್ರಭಾಕರ್,ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಇನ್ನಷ್ಟು

ಪ್ರಮುಖ ಸುದ್ದಿಗಳು

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!!

ಕರ್ನೂಲ್: ತನಗಿಂತ ವಯಸ್ಸಿನಲ್ಲಿ ದೊಡ್ಡವಳು,...ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ

ತುಮಕೂರು: ಚಲಿಸುವ ವಾಹನದಲ್ಲಿಯೇ ಮಾನಸಿಕ ಅಸ್ವಸ್ಥ...