Oyorooms IN

Saturday, 22nd July, 2017 4:28 PM

BREAKING NEWS

ಜಿಲ್ಲಾ ಸುದ್ದಿಗಳು

ಮನೆಪಾಠ ದಂದೆ: ಎ.ಸಿ.ಬಿ ಗೆ ದೂರು ಸಲ್ಲಿಕೆ

ಮನೆಪಾಠ ದಂದೆ: ಎ.ಸಿ.ಬಿ ಗೆ ದೂರು ಸಲ್ಲಿಕೆ

ಮನೆಪಾಠ ದಂದೆ: ಎ.ಸಿ.ಬಿ ಗೆ ದೂರು ಸಲ್ಲಿಕೆ

ಚಾಮರಾಜನಗರ: ರಾಜ್ಯದಲ್ಲಿ ನಡೆಯುತ್ತಿರುವ ಅನದಿಕೃತ ಮನೆಪಾಠ ದಂದೆ ವಿರುದ್ದ ಭ್ರ್ಷಷ್ಟಾಚಾರ ನಿಗ್ರಹ ದಳ ಬೆಂಗಳೂರು ಎ.ಡಿ.ಜಿ.ಪಿ ಗೆ ಚಾಮರಾಜನಗರದ ನಿವಾಸಿಯೋರ್ವರು ಇದೇ ಮೊದಲ ಭಾರಿಗೆ ದೂರು ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಅನದಿಕೃತವಾಗಿ ಕೆಲವು2011ರ ಅಕ್ಟೋಬರ್ 4ರ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಿರುವ ಕರ್ನಾಟಕ ಶಿಕ್ಷಣ ಅಧಿನಿಯಮ 1983ರ ನಿಯಮ 4ರಲ್ಲಿ ಈ ಅಧಿನಿಯಮದ ಮೇರೆಗೆ ನೋಂದಾತಿಸಲಾದ ಅಥವಾ ನೊಂದಾಯಿಸಲಾಗಿದೆ ಎಂದು ಭಾವಿಸ ಲಾದ ಯಾವ ಸಂಸ್ಥೆಯೂ, ಈ ಅಧಿ ನಿಯಮದ ಪ್ರಾರಂಭದ ದಿನಾಂಕದಂದು ಮತ್ತು ಆ ತರುವಾಯ, ತನ್ನ ಯಾವುದೇ ನೌಕರನಿಗೆ ಖಾಸಗಿ ಪಾಠ ಹೇಳಿಕೊಡು ವುದಕ್ಕೆ ಅನುಮತಿಸತಕ್ಕದ್ದಲ್ಲ ಅಥವಾ ಅಂಥ ನೌಕರನೂ ಯಾವುದೇ ವ್ಯಕ್ತಿಗೆ ಹಾಗೆ ಖಾಸಗಿ ಪಾಠವನ್ನು ಹೇಳಿಕೊಡತಕ್ಕದ್ದಲ್ಲ. ಎಂದು ನಿರ್ಬಂಧಿಸಲಾಗಿದೆ. ಆಗಿದ್ದರೂ ಕೂಡ ಯಾವುದೇ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಅದಿಕಾರಿಗಳು ತಕರಾರು ಎತ್ತದೆ ಪರೋಕ್ಷವಾಗಿ ಕೈ ಜೋಡಿಸಿದ್ದಾರೆ ಎಂದೇ ಹೇಳಬಹುದಾಗಿದೆ.

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜುಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಅರಂಭದ ದಿನಗಳಲ್ಲೇ ತರಗತಿ ಬೋಧನೆಗೆ ನೀಡಿರುವ ಕಾಲಾವಧಿ ಸಾಕಾಗುವುದಲ್ಲವೆಂಬಂತೆ ನಡೆದು ಕೊಳ್ಳುವ ಬೋಧಕರು ಟ್ಯೂಷನ್ ಅನಿವಾರ್ಯವೆಂಬ ಆತಂಕದ ವಾತಾವರಣ ಸೃಷ್ಟಿಸಿ ದಂದೆಗೆ ಇಳಿದಿದ್ದು ಇದನ್ನು ತಡೆಗಟ್ಟಬೇಕಾದ ಅದಿಕಾರಿಗಳು ನಿದ್ರೆಗೆ ಜಾರಿದ್ದಾರೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ, ನಿಯಂತ್ರಣ, ಪಾಠ ಕ್ರಮವಿಧಿ ಮತ್ತಿತರ) ನಿಯಮಾವಳಿ 1995 ರ ನಿಯಮ 16ರಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಏಳು ಮಂದಿ ಸದಸ್ಯರುಗಳನ್ನೊಳಗೊಂಡ ಜಿಲ್ಲಾ ಮಟ್ಟದ ಶಿಕ್ಷಣ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವ ಅವಕಾಶ ಕಲ್ಪಿಸಲಾಗಿದೆ.
ನಿಯಮಾವಳಿಗೆ 199 ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ತಿದ್ದುಪಡಿಯ ನಿಯಮ 15(2)ರಂತೆ ನಿಯಮಾವಳಿಗಳಲ್ಲಿನ ಉಲ್ಲಂಘನೆ ಪ್ರಕರಣಗಳನ್ನು ಸ್ವಯಂಪ್ರೇರಿತ ಅಥವಾ ದೂರಿನ ಮೇಲೆ ದಾಖಲಿಸಿಕೊಳ್ಳುವ ಅಧಿಕಾರವನ್ನು ಜಿಲ್ಲಾ ಮಟ್ಟದ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ನೀಡಲಾಗಿದೆ. ಹಾಗಿದ್ದರೂ ಇದುವರೆಗೂ ಕ್ರಮ ಕೈಗೊಳ್ಳದೇ ಇದ್ದು ಸದರಿ ಸಂಬಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಜಿಲ್ಲಾದಿಕಾರಿಗಳು, ಸಾರ್ವಜನಿಕ ಉಪನಿರ್ದೇಶಕರು, ಪದವಿಪೂರ್ವ ಉಪನಿರ್ದೇಶಕರನ್ನು ತಪ್ಪಿತಸ್ಥರು ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲು ಭ್ರ್ಷಷ್ಟಾಚಾರ ನಿಗ್ರಹ ದಳ ಬೆಂಗಳೂರು ಎ.ಡಿ.ಜಿ.ಪಿ ಗೆ ದೂರು ಸಲ್ಲಿಸಿದ್ದಾರೆ.

ಪ್ರಮುಖವಾಗಿ ಜಿಲ್ಲಾದಿಕಾರಿಗಳು, ಸಾರ್ವಜನಿಕ ಉಪನಿರ್ದೇಶಕರು, ಪದವಿಪೂರ್ವ ಉಪನಿರ್ದೇಶಕರ ಪಾತ್ರವಿದ್ದರೂ ಇದುವರೆಗೂ ಎಲ್ಲೂ ದಾಳಿ ನಡೆದಿಲ್ಲ ಹಾಗೂ ಬಹುತೇಕವಾಗಿ ಅನದಿಕೃತವಾಗಿ ನಡೆಯುತ್ತಿದ್ದು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿಲಾಗಿದೆ ಎಷ್ಟರ ಮಟ್ಟಿಗೆ ದೂರು ದಾಖಲಸಿಕೊಂಡು ಎ.ಸಿ.ಬಿ ಕಾರ್ಯನಿರ್ವಹಿಸುತ್ತದೆಯೋ ಅಥವಾ ಇವರೂ ನಿಷ್ಕ್ರೀಯರಾಗುತ್ತಾರೋ ಕಾದು ನೋಡಬೇಕಾಗಿದೆ.

ಜಿಲ್ಲಾ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...