Oyorooms IN

Friday, 24th February, 2017 11:20 AM

BREAKING NEWS

ಬೆಂಗಳೂರು ಗ್ರಾಮಂತರ

ಮರ್ಮಾಂಗಕ್ಕೆ ಒದ್ದು ಸಾಯಿಸಿದ ಮಹಿಳೆ..!

1

ಗೌರಿಬಿದನೂರು: ಹೊಲದಲ್ಲಿ ಹುಲ್ಲು ಕೊಯ್ಯುತ್ತಿದ್ದ ಮಹಿಳೆ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಮರ್ಮಾಂಗಕ್ಕೆ ಒದ್ದು ಸಾಯಿಸಿರುವ ಘಟನೆ ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಚೇನಹಳ್ಳಿ ಹೋಬಳಿ ಕುಂಟಚಿಕ್ಕನಹಳ್ಳಿ ಗ್ರಾಮದ ನಿವಾಸಿ ಮದನಗೋಪಾಲ್‌ರೆಡ್ಡಿ (36) ಸಾವನ್ನಪ್ಪಿದ ವ್ಯಕ್ತಿ. ಇದೇ ಗ್ರಾಮದಲ್ಲಿ ವಾಸವಾಗಿರುವ ಮಹಿಳೆಯ ಹಿಂದೆ ಬಿದ್ದಿದ್ದ ಮದನಗೋಪಾಲರೆಡ್ಡಿ ಪದೇ ಪದೇ ಈಕೆಯನ್ನು ಚುಡಾಯಿಸುತ್ತಿದ್ದನು ಎನ್ನಲಾಗಿದ್ದು, ಈ ಸಂಬಂಧ ಕಳೆದ ಆರು ತಿಂಗಳ ಹಿಂದೆ ಆಕೆ ಮಂಚೇನಹಳ್ಳಿ ಪೊಲೀಸರಿಗೂ ಈತನ ವಿರುದ್ಧ ದೂರು ನೀಡಿದ್ದಳು.
ಪೊಲೀಸರು ಆತನನ್ನು ಕರೆದು ರಾಜಿ-ಪಂಚಾಯ್ತಿ ಮಾಡಿ ಬುದ್ಧಿ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ. ಆದರೂ ತನ್ನ ಚಾಳಿ ಮುಂದುವರಿಸಿದ್ದ ಮದನ್‌ಗೋಪಾಲರೆಡ್ಡಿ ನಿನ್ನೆ ಸಂಜೆ ೫.೩೦ರಲ್ಲಿ ಈ ಮಹಿಳೆ ತನ್ನ ಜಮೀನಿನಲ್ಲಿ ಹಸುಗಳಿಗಾಗಿ ಹುಲ್ಲು ಕೊಯ್ಯುತ್ತಿದ್ದಾಗ ಈತ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ.

ಈ ವೇಳೆ ಮಹಿಳೆ ತನ್ನ ರಕ್ಷಣೆಗಾಗಿ ಆತನ ಮರ್ಮಾಂಗಕ್ಕೆ ಒದ್ದಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದ ಡಿವೈಎಸ್‌ಪಿ ಪುರುಷೋತ್ತಮ್, ವೃತ್ತ ನಿರೀಕ್ಷಕ ಶೇಷಾದ್ರಿ, ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್, ನಯಾಜ್ ಬೇಗ್, ಅವಿನಾಶ್ ಸ್ಥಳಕ್ಕಾಗಮಿಸಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಬೆಂಗಳೂರು ಗ್ರಾಮಂತರ ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...