Oyorooms IN

Thursday, 17th August, 2017 5:07 PM

BREAKING NEWS

ಪ್ರಮುಖ ಸುದ್ದಿಗಳು

ಆಷಾಡದಲ್ಲಿ ಮದುವೆಯಾಗಿ ಗೊಡ್ಡು ಸಂಪ್ರದಾಯಕ್ಕೆ ಗೋಲಿ ಹೊಡೆದ ಪ್ರೇಮಿಗಳು

ಆಷಾಡದಲ್ಲಿ ಮದುವೆಯಾದ್ರೂ, ಗೊಡ್ಡು ಸಂಪ್ರಾದಯಕ್ಕೆ ಗೋಲಿ ಹೊಡೆದ ಪ್ರೇಮಿಗಳು

ರಾಮನಗರ: ನಮ್ಮಲ್ಲಿ ಷಾಡದ ಸಮಯದಲ್ಲಿ ಮದುವೆ ಸೇರಿದಂತೆ ಯಾವುದೇ ಶುಭಕಾರ್ಯಗಳನ್ನು ಮಾಡುವುದಿಲ್ಲ, ಒಂದು ವೇಳೆ ಮಾಡಿದರೆ ಅದು ಏಳಿಗೆಯಾಗುವುದಿಲ್ಲ ಎನ್ನುವುದು ನಮ್ಮಲ್ಲಿರುವ ನಂಬಿಕೆ. ಅಂತೆ, ಕಂತೆ.  ಇಲ್ಲೊಂದು ನವ ಜೋಡಿಗಳು ಇವೆಲ್ಲ ಅಂತೆ, ಕಂತೆ ಗಳಿಗೆ ಟಾಟಾ ಮಾಡಿ ಆಷಾಡದಲ್ಲಿ ಮದುವೆಯಾಗಿದ್ದಾರೆ. ಅದು ಕೂಡ ಪ್ರೀತಿಸಿ.

ಅಂದ ಹಾಗೇ ಈ ಮದುವೆ ನಡೆದಿರುವುದು ರಾಮನಗರದಲ್ಲಿ. ಬೆಂಗಳೂರಿನ ಶಾಲೆಯೊಂದರಲ್ಲಿ ಆಂಗ್ಲ ಭಾಷೆಯ ಶಿಕ್ಷಕಿಯಾಗಿ ಸೇವೆ ಮಾಡುತ್ತಿರುವ ಕಲಬುರಗಿ ಮೂಲದ ಮಂಜುಳ ಎನ್ನುವವರ ಅದೇ ಶಾಲೆಯ ಬಸ್ಸುನ ಚಾಲಕನ ಸಿದ್ದರಾಜು ಎನ್ನುವರ ಜೊತೆ ಮಕ್ಕಳನ್ನು ಶಾಲೆಗೆ ಕರೆ ತರುವ ಪರಸ್ಪರ ಇಷ್ಟಪಟ್ಟಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣದವರಾದ ಸಿದ್ದರಾಜು ಹಿಂದುಳಿದ ವರ್ಗಕ್ಕೆ ಸೇರಿದ್ದರೆ. ಮಂಜುಳಾ ಅವರು ಮೇಲ್ವರ್ಗದ ಯುವತಿಯಾಗಿದ್ದಾರೆ. ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡಿಯಾಗಲಿಲ್ಲ. ಮನೆಯವರನ್ನು ಒಪ್ಪಿಸಿ ಕಳೆದ ಭಾನುವಾರ ರಾಮನಗರದ ಮಂಡಿಪೇಟೆಯ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯದಲ್ಲಿ ಅರ್ಚಕರ ಸಮ್ಮುಖದಲ್ಲಿ ಸತಿಪತಿಗಳಾಗಿದ್ದಾರೆ.

ಆಷಾಡದಲ್ಲಿ ಮದುವೆಯಾಗುವುದು ಸರಿಯಲ್ಲ ಎಂದು ಹೇಳುವವರ ಮುಂದೆ ಇವರು ಆ‌ದರ್ಶಪ್ರಾಯರಾಗಿದ್ದಾರೆ. ಈ ದಂಪತಿಗಳು ನೂರು ಕಾಲು ಸುಖವಾಗಿ ಬಾಳಲಿ ಎನ್ನುವುದು ನಮ್ಮ ಆಶಯ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...