Oyorooms IN

Thursday, 17th August, 2017 5:12 PM

BREAKING NEWS

ಪ್ರಮುಖ ಸುದ್ದಿಗಳು

“ಮಾಸ್ತಿಗುಡಿ” ಅವಗಡ, ಖಳನಟರ ಮೃತ ದೇಹಕ್ಕೆ ಹುಡುಕಾಟ, ಸಾವಿಗೆ ಹೊಣೆ ಯಾರು..?

masti-gudi

ರಾಮನಗರ:  ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ದುರಂತ ನಡೆದು, ಇಬ್ಬರು ಉದಯೋನ್ಮುಖ ಖಳನಟರು ಜೀವನ ಜಲಸಮಾಧಿಯಾಗಿದೆ. ಅಪಾಯಕಾರಿ ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೆ ಇಂತಹ ದುರಂತ ನಡೆಯುತ್ತಿರಲಿಲ್ಲ.

ಮಾಸ್ತಿಗುಡಿ ಸಿನಿಮಾದ ಈ ಚಿತ್ರೀಕರಣದಲ್ಲಿ ಹೀರೋ ದುನಿಯಾ ವಿಜಯ್  ಹೆಲಿಕಾಪ್ಟರ್ನಲ್ಲಿ ಕೂತು ವಿಲನ್ಗಳಾದ ಅನಿಲ್ ಮತ್ತು ಉದಯ್ ಅವರನ್ನು ಕೆಳಗೆ ತಳ್ಳುವ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು, ಅನಿಲ್ ಮತ್ತು ಉದಯ್ ಧುಮುಕಿದ ನಂತರ  ನಟ ದುನಿಯಾ ವಿಜಯ್ ಕೆಳಕ್ಕೆ ಜಿಗಿಯುತ್ತಾರೆ. ಚಿತ್ರೀಕರಣದ ವೇಳೆ  ದುನಿಯಾ ವಿಜಯ್ ಅವರಿಗೆ ಮಾತ್ರ ಲೈಫ್ ಜಾಕೆಟ್ ಹಾಕಿಕೊಂಡಿದ್ದರು.

ಹೆಲಿಕಾಪ್ಟರ್ನಲ್ಲಿದ್ದ ಮೂವರು ತಿಪ್ಪಗೊಂಡನಹಳ್ಳಿ ಜಲಾಶಯಕ್ಕ ಬೀಳ್ತಿದ್ದಂತೆ ಉದಯ್ ಮತ್ತು ಅನಿಲ್ ಈಜಲು ಬಾರದೆ ಮುಳುಗ್ತಿದ್ರೆ ದುನಿಯಾ ವಿಜಯ್ ಮಾತ್ರ ಲೈಫ್  ಜಾಕೆಟ್ ಇದ್ದಿದ್ದರಿಂದ ಸೇಫ್ ಆಗಿ ಈಜುತ್ತ ದಡ ಸೇರಿದರು. ಲೈಫ್ ಜಾಕೆಟ್ ಇಲ್ಲದೇ ಚಿತ್ರಕರಣದಲ್ಲಿ ಪಾಲ್ಗೊಂಡಿದ್ದ ಉದಯ್ ಹಾಗೂ ಅನಿಲ್ ಈಜಲಾರದೇ ಮುಳುಗಿ ಸಾವನ್ನಪ್ಪುತ್ತಿದ್ದರೆ, ರಕ್ಷಿಸಬೇಕಾದ ಬೋಟ್ ಕೆಟ್ಟು ನಿಂತಿತ್ತು.

ಬೋಟ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಲಾರದಷ್ಟು ನಿರ್ಲಕ್ಷ್ಯವನ್ನು ನಿರ್ದೇಶಕ, ನಿರ್ಮಾಪಕ, ಸಾಹಸ ನಿರ್ದೇಶಕರು ವಹಿಸಿದ್ದರೆ, ಈಜಲು ಬರದ ನಟರನ್ನು ಕನಿಷ್ಠ ಲೈಫ್ ಜಾಕೆಟ್ ಇಲ್ಲದೇ ಯಾವ ಧೈರ್ಯದ ಮೇಲೆ ನೀರಿಗೆ ಬಿಳುವಂತೆ ಮಾಡಿದರು ಎನ್ನುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ.

masthigudi_dead

ನಿನ್ನೆ ಮಧ್ಯರಾತ್ರಿಯವರೆಗೂ ಅನಿಲ್ ಹಾಗೂ ಉದಯ್ ಗಾಗಿ ಕಾರ್ಯಾಚರಣೆ ನಡೆಸಲಾಯಿತಾದರೂ, ಕತ್ತಲಾದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು, ಎನ್ ಡಿಆರ್ ಎಫ್ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭವಾಗಿದ್ದು, ನಟ ದುನಿಯಾ ವಿಜಯ್ ಬೆಳಿಗ್ಗೆಯಿಂದಲೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.  ಘಟನೆ ಸಂಬಂಧ  ನಟ ದುನಿಯಾ ವಿಜಿ, ಚಿತ್ರದ ನಿರ್ಮಾಪಕರು, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶ ರವಿವರ್ಮಾ ಹಾಗೂ ಹೆಲಿಕ್ಯಾಪ್ಟರ್ ಮಾಲೀಕ ಹಾಗೂ ಪೈಲೆಟ್ ಸೇರಿದಂತೆ ಹಲವರ ಮೇಲೆ ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.

ನಿಯಮಗಳನ್ನು ಉಲ್ಲಂಘಿಸಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಬೇಜವಾಬ್ದಾರಿತನದಿಂದ ಚಿತ್ರಕರಣ ನಡೆಸಿದ್ದರು, ನಿಷೇಧಿತ ಪ್ರದೇಶದಲ್ಲಿ ಹೆಲಿಕಾಪ್ಟರ್ ಬಳಸಿ ಚಿತ್ರೀಕರಣ ಮಾಡುವಂತಿಲ್ಲ ಎಂಬುದನ್ನು ಮಾಸ್ತಿಗುಡಿ ಚಿತ್ರ ತಂಡ ಗಾಳಿಗೆ ತೂರಿದೆ.

English summary:  mastigudi mishap police complaint registered against actor, producer and stunt director

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...