Oyorooms IN

Friday, 24th February, 2017 6:48 AM

BREAKING NEWS

ಪ್ರಮುಖ ಸುದ್ದಿಗಳು

ಮತದಾರರಿಗೆ ಸಾಲದ ನೆಪದಲ್ಲಿ ಹಣ ಹಂಚಿಕೆ….!

ಮೈಸೂರು: ನಂಜನಗೂಡು ಬೈ ಎಲೆಕ್ಷನ್​ ರಾಜ್ಯ ಸರ್ಕಾರಕ್ಕೆ ಪ್ರತಿಷ್ಟೆಯ ಪಣವಾಗಿ ಬಿಟ್ಟಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಾಂಗವಾಗಿ ತೊಡೆ ತಟ್ಟಿ ಹೊರ ಬಂದ ಮಾಜಿ ಸಚಿವ ವಿ.ಶ್ರೀನಿವಾಸ್​ ಪ್ರಸಾದ್​ ಅವರನ್ನ ಹೇಗಾದರೂ ಸರಿ ಬಗ್ಗು ಬಡಿಯಬೇಕು ಅಂತ ಸಿಎಂ ನಿಂತಿದ್ದಾರೆ. ಹಳೆಯ ಗಿಮಿಕ್​ ಒಂದನ್ನು ಮತ್ತೆ ಚಲಾವಣೆ ಮಾಡುತ್ತಿರುವ ರಾಜ್ಯ ಸರ್ಕಾರ, ಚುನಾವಣೆ ನಿಗಧಿಗೂ ಮುನ್ನ ಮತದಾರರನ್ನು ಸೆಳೆಯಲು ನಡೆಸಿರುವ ಕಾರ್ಯತಂತ್ರ ಗೊತ್ತಾಗುತ್ತಿದೆ

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕಿರು ಸಾಲ ಯೋಜನೆಯಡಿ. 15 ಸಾವಿರ ಸಾಲ ಅದರಲ್ಲಿ 5 ಸಾವಿರ ಸಬ್ಸಿಡಿ. ಹೀಗಿದ್ದ ಮೇಲೆ ಜನ ಬಿಡುತ್ತಾರಾ? ಮುಗಿಬಿದ್ದಿದ್ದಾರೆ. ನಂಜನಗೂಡು ಕ್ಷೇತ್ರದ ಉಪ ಚುನಾವಣೆ ಘೋಷಣೆಗೂ ಮುನ್ನವೇ ಮತದಾರರ ಓಲೈಕೆಗೆ ಕಸರತ್ತು ಇದು.

ಅರ್ಜಿ ಸ್ವೀಕರಿಸುತ್ತಿರುವ ಕೇಂದ್ರದಲ್ಲಿ ನಾಮಫಲಕವಾಗಲಿ. ಯಾವ ಯೋಜನೆಯಡಿ, ಯಾವ ಇಲಾಖೆ ಕಾರ್ಯಕ್ರಮ ಎನ್ನುವ ಸಣ್ಣ ಸುಳಿವೂ ಇಲ್ಲ. 10 ವರ್ಷಗಳ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದ ಬೈ ಎಲೆಕ್ಷನ್​ನಲ್ಲಿ ಸಿದ್ದರಾಮಯ್ಯ ಮಣಿಸಲು ಎಚ್​ಡಿಕೆ ಈ ತಂತ್ರ ಮಾಡಿದ್ದರು. ಶ್ರೀನಿವಾಸ್ ಪ್ರಸಾದ್ ಮಣಿಸಲು ಇದೀಗ ಸಿದ್ದರಾಮಯ್ಯ ಈ ತಂತ್ರ ಅನುಸರಿಸುತ್ತಿದ್ದಾರೆ. ಇದೆಲ್ಲಾ ಉಪಯೋಗವಾಗುತ್ತಾ ಕಾದು ನೋಡಬೇಕಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...