Oyorooms IN

Thursday, 29th June, 2017 4:19 PM

BREAKING NEWS

ಧಾರವಾಡ

ಲೈಂಗಿಕ ಕಿರುಕುಳಕ್ಕೆ ಯುವತಿಯರೇ ಕಾರಣ: ಮಾತೆ ಮಹಾದೇವಿ

ಧಾರವಾಡ: ಬೆಂಗಳೂರಿನಲ್ಲಿ ಹೊಸವರ್ಷದ ಸಂಭ್ರಮಾಚರಣೆ ವೇಳೆ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಯುವತಿಯರು ತೊಟ್ಟಿದ್ದ ಉಡುಗೆಯೇ ಕಾರಣ ಎಂದಿರುವ ಮಾತೆ ಮಹಾದೇವಿ ಅವರು, ರಾತ್ರಿ 12 ಗಂಟೆಯ ನಂತರ ಬೀದಿಯಲ್ಲಿ ಕಾಮುಕರಿಗೆ ಪ್ರಚೋದನೆ ನೀಡುತ್ತಾ ಹೆಣ್ಣು ಮಕ್ಕಳು ಓಡಾಡುತ್ತಿರುವುದರಿಂದ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.

ಹೆಣ್ಣುಮಕ್ಕಳು ಹೊಸ ವರ್ಷದ ಹೆಸರಿನಲ್ಲಿ ಸ್ವೇಚ್ಛಾಚಾರದ ವರ್ತನೆ ತೋರುವುದು ಅವಮಾನಕರ, ಇಂತ ಪ್ರಕರಣಗಳು ನಿಲ್ಲಬೇಕಾದರೆ ಹೆಣ್ಣುಮಕ್ಕಳು ಮೈ ತುಂಬಾ ಬಟ್ಟೆ ಧರಿಸಬೇಕು,  ಅತ್ಯಾಚಾರ ಹೆಚ್ಚಾಗಲು ಹೆಣ್ಣು ಮಕ್ಕಳದ್ದೇ ಅರ್ಧ ತಪ್ಪು, ಇನ್ನರ್ಧ ಸಮಾಜದ್ದು, ಸರ್ಕಾರ ವಸ್ತ್ರ ಸಂಹಿತೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

ರಾತ್ರಿ 12 ಗಂಟೆಯ ನಂತರ ಯುವತಿಯರಾಗಲಿ, ಮಹಿಳೆಯರಾಗಲಿ ಮನೆ ಬಿಟ್ಟು ಹೋಗಬಾರದು ಅಷ್ಟೇ ಅಲ್ಲ, ಹೆಣ್ಣು ಮಕ್ಕಳ ಉಡುಗೆ ತೊಡುಗೆ ಸಹ ಉದ್ರೇಕಿಸುವಂತೆ ಇರಬಾರದು, ಇವುಗಳಿಗೆಲ್ಲಾ ಕಡಿವಾಣ ಹಾಕಬೇಕಿದ್ದು, ಅರಬ್ ದೇಶದಲ್ಲಿರುವಂತಹ ಕಠಿಣ ಕಾನೂನು ಹಾಗೂ ವಸ್ತ್ರ ಸಂಹಿತೆ ನಮ್ಮ ದೇಶದಲ್ಲಿಯೂ ಜಾರಿಯಾಗಬೇಕು, ಸಿನಿಮಾ ಮತ್ತು ದೃಶ್ಯ ಮಾಧ್ಯಮದ ಪ್ರಭಾವದಿಂದಲೇ ಇಂತಹ ಘಟನೆ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

English summary:   mathe mahadevi comment on bengaluru  mass molestation

ಧಾರವಾಡ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...