Oyorooms IN

Tuesday, 25th April, 2017 3:46 AM

BREAKING NEWS

ಕ್ರೀಡೆ

ಬಾಂಗ್ಲಾ ಎದುರು ಇಂಗ್ಲೆಂಡ್ ಪೆವಿಲಿಯನ್ ಪರೇಡ್, ಬಾಂಗ್ಲಾಗೆ ಐತಿಹಾಸಿಕ ಜಯ

ಮೀರ್’ಪುರ್ : ಇಂಗ್ಲೆಂಡ್ ವಿರುದ್ಧ  ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 108 ರನ್’ಗಳ ಐತಿಹಾಸಿಕ ಜಯ ಸಾಧಿಸಿದೆ. ಮೂರೇ ದಿನದಲ್ಲಿ ಅಂತ್ಯಗೊಂಡ ಪಂದ್ಯ  ಅನೇಕ ರೋಚಕ ಕ್ಷಣಗಳಿಗೆ ಕಾರಣವಾಯಿತು. ಗೆಲ್ಲಲು 273 ರನ್ ಗುರಿ ಪಡೆದ ಇಂಗ್ಲೆಂಡ್ ಟೀ ವಿರಾಮದ ವೇಳೆ ವಿಕೆಟ್ ನಷ್ಟವಿಲ್ಲದೇ 100 ರನ್ ಗಳಿಸಿ ಸುಲಭ ಗೆಲುವಿನ ಕುರುಹು ನೀಡಿತ್ತು. ಆದರೆ ಕೊನೆಯ ಸೆಷನ್ ನಲ್ಲಿ ಆಂಗ್ಲರು ಸರ್ವಪತನವನ್ನು ಕಂಡರು.

ಕೇವಲ 22 ಓವರ್ ಅಂತರದಲ್ಲಿ ಇಂಗ್ಲೆಂಡ್’ನ ಎಲ್ಲ 10 ವಿಕೆಟ್’ಗಳು ಉರುಳಿಬಿದ್ದವು. ಮೆಹೆದಿ ಹಸನ್ ಮಿರಾಜ್ ಮತ್ತು ಶಾಕಿಬ್ ಅಲ್ ಹಸನ್ ಬೌಲಿಂಗ್’ಗೆ ಆಂಗ್ಲರು ವಿಕೆಟ್ ಕಾಯ್ದುಕೊಳ್ಳಲು ಪರದಾಡಿದರು.ಇಂಗ್ಲೆಂಡ್’ನ ಎರಡನೇ ಇನ್ನಿಂಗ್ಸ್ ಕೇವಲ 164 ರನ್ನಿಗೆ ಅಂತ್ಯಗೊಂಡಿತು. ಅಲಸ್ಟೇರ್ ಕುಕ್ ಮತ್ತು ಬೆನ್ ಡುಕೆಟ್ ಮೊದಲ ವಿಕೆಟ್’ಗೆ 100 ರನ್ ಜೊತೆಯಾಟ ಹೊರತುಪಡಿಸಿದರೆ, ಉಳಿದವರು ಎರಂಡಕಿಯನ್ನು ದಾಟಲು ತಿಣುಕಾಡಿದರು.

bangla

ಬಾಂಗ್ಲಾದೇಶದ ಆಫ್ ಸ್ಪಿನ್ನರ್ ಮೆಹೆದಿ ಹಸನ್ ಮಿರಾಜ್ ಎರಡೂ ಇನ್ನಿಂಗ್ಸಲ್ಲಿ ತಲಾ 6 ವಿಕೆಟ್ ಪಡೆದು ಈ ಐತಿಹಾಸಿಕ ಗೆಲುವಿನ ಸೂತ್ರಧಾರರೆನಿಸಿದರು. ಅವರ ಈ ಸಾಧನೆಗಾಗಿ ಅವರಿಗೆ ಪಂದ್ಯಪುರುಷೋತ್ತಮ ಗೌರವ ಪ್ರಾಪ್ತಿಯಾಯಿತು. ಈ ಪಂದ್ಯದೊಂದಿಗೆ ಇಂಗ್ಲೆಂಡ್ ಬಾಂಗ್ಲಾ ಪ್ರವಾಸವನ್ನು ಕೊನೆಗಳಿದೆ. ಏಕದಿನ ಸರಣಿಯನ್ನು ಇಂಗ್ಲೆಂಡ್ ಜಯಿಸಿದರೆ, ಟೆಸ್ಟ್ ಸರಣಿ ಡ್ರಾಗೊಂಡಿದೆ.

ಸ್ಕೋರು ವಿವರ: ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 63.5 ಓವರ್ 220 ರನ್ ಆಲೌಟ್
(ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 81.3 ಓವರ್ 244 ರನ್ ಆಲೌಟ್
ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ 66.5 ಓವರ್ 296 ರನ್ ಆಲೌಟ್
(ಇಮ್ರುಲ್ ಕಾಯೆಸ್ 78, ಮಹಮುದುಲ್ಲಾ 47, ಶಾಕಿಬ್ ಅಲ್ ಹಸನ್ 41, ತಮೀಮ್ ಇಕ್ಬಾಲ್ 40 ರನ್ – ಅದಿಲ್ ರಷೀದ್ 52/4, ಬೆನ್ ಸ್ಟೋಕ್ಸ್ 52/3, ಜಾಫರ್ ಅನ್ಸಾರಿ 76/2)
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 45.3 ಓವರ್ 164 ರನ್ ಆಲೌಟ್
(ಅಲಸ್ಟೇರ್ ಕುಕ್ 59, ಬೆನ್ ಡುಕೆಟ್ 56, ಬೆನ್ ಸ್ಟೋಕ್ಸ್ 25 ರನ್ – ಮೆಹೆದಿ ಹಸನ್ 77/6, ಶಾಕಿಬ್ ಅಲ್ ಹಸನ್ 49/4)

English summary:  mehedi’s 12 seals historic win over england

ಕ್ರೀಡೆ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...