Oyorooms IN

Wednesday, 29th March, 2017 10:56 AM

BREAKING NEWS

ಜಿಲ್ಲಾ ಸುದ್ದಿಗಳು

ಭಾಷಣದ ವೇಳೆ ಸಚಿವ ಕಾಗೋಡು ಅಸ್ವಸ್ಥ: ಆಸ್ಪತ್ರೆಗೆ ದಾಖಲು, ಚಿಕಿತ್ಸೆ

ಭಾಷಣದ ವೇಳೆ ಸಚಿವ ಕಾಗೋಡು  ಅಸ್ವಸ್ಥ: ಆಸ್ಪತ್ರೆಗೆ ದಾಖಲು ಚಿಕಿತ್ಸೆ

ಶಿವಮೊಗ್ಗ : ಸ್ವಾತಂತ್ರ್ಯೋತ್ಸವದ ಸಮಾರಂಭದ ಭಾಷಣ ಮಾಡುವ ವೇಳೆ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆ ನಡೆದಿದೆ.
70ನೇ ಸ್ವಾತಂತ್ರ್ಯೋತ್ಸ ದಿವಸದ ಅಂಗವಾಗಿ ಶಿವಮೊಗ್ಗದದಲ್ಲಿರುವ ಪೊಲೀಸ್ ಮೈದಾನದಲ್ಲಿ ಏರ್ಪಡಿಸಿದ ಕಾರ್ಯಕ್ರಮದ ಧ್ವಜಾರೋಹಣ ಮಾಡಿ ಭಾಷಣ ಪ್ರಾರಂಭಿಸಿದ 15ನಿಮಿಷದಲ್ಲಿ ಕಾಗೋಡು ತಿಮ್ಮಪ್ಪ ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆ ನಡೆಯಿತು.

ತಕ್ಷಣ ಅವರನ್ನು ಆಂಬ್ಯುಲೆನ್ಸ್‌ ಮೂಲಕ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ನನಗೇನು ಆಗಿಲ್ಲ ಮತ್ತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸಚಿವ ಕಾಗೋಡು ತಿಮ್ಮಪ್ಪ ಭಾಷಣ ಮಾಡುವ ವೇದಿಕೆಯಲ್ಲಿ ಶಾಮಿಯಾನ ಸಹ ಇರಲಿಲ್ಲ, ಜೊತೆಗೆ ಬಿಸಿಲಿನ ಝಳ ಹೆಚ್ಚಿದ್ದರಿಂದ ಮಕ್ಕಳು ಹಾಗೂ ಅತಿಥಿಗಳು ಹೈರಾಣಾಗಿದ್ದರು ಎಂದು ಜಿಲ್ಲಾಡಳಿತದ ಬೇಜವಬ್ದಾರಿ ತನಕ್ಕೆ ಪೋಷಕರು ಹಾಗೂ ಜನರು ಹಿಡಿ ಶಾಪ ಹಾಕುತ್ತಿದ್ದ ಸನ್ನಿವೇಶ ಕಂಡು ಬಂತು.

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...