Oyorooms IN

Saturday, 22nd July, 2017 4:26 PM

BREAKING NEWS

ಪ್ರಮುಖ ಸುದ್ದಿಗಳು

ಮಾಸ್ತಿಗುಡಿ ಕ್ಲೈಮ್ಯಾಕ್ಸ್ ನಲ್ಲಿ ಅವಘಡ, ಕೆರೆಗೆ ಬಿದ್ದ ಖಳನಾಯಕರು ನಿಧನ

masti-gudi

ರಾಮನಗರ: ರಾಮನಗರದ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ‘ಮಾಸ್ತಿಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದ್ದು, ನಾಯಕ ಹಾಗೂ ಖಳನಾಯಕರ ನಡುವಿನ ಸಾಹಸದೃಶ್ಯಗಳನ್ನು ಹೆಲಿಕಾಪ್ಟರ್ ಮೂಲಕ ಶೂಟ್ ಮಾಡುತ್ತಿದ್ದಾಗ, ನೀರಿಗೆ ಬಿದ್ದ ಖಳನಾಯಕರಾದ ಅನಿಲ್ ಹಾಗೂ ಉದಯ್ ಸಾವನ್ನಪ್ಪಿದ್ದಾರೆ

ಹೆಲಿಕಾಪ್ಟರ್ ನಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದ ಖಳನಾಯಕರನ್ನು ಬೆನ್ನತ್ತಿದ್ದ ನಾಯಕ ದುನಿಯಾ ವಿಜಯ್ ಹಾಗೂ ಖಳನಾಯಕರು ಹೆಲಿಕಾಪ್ಟರ್ ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕುತ್ತಾರೆ, ನೀರಿಗೆ ಬಿದ್ದ ಮೂವರಲ್ಲಿ ದುನಿಯಾ ವಿಜಯ್ ಮಾತ್ರ ನೀರಿನಿಂದ ಮೇಲೆದ್ದು ಬಂದರೆ, ಉಳಿದ ಇಬ್ಬರು ನೀರಿನಲ್ಲಿಯೇ ಮುಳುಗಿದ್ದಾರೆ ಎನ್ನಲಾಗಿದೆ.

ನೀರಿಗೆ ಬಿದ್ದು ನಿಮಿಷಗಳು ಕಳೆದರು ಅನಿಲ್ ಹಾಗೂ ಉದಯ್ ಇಬ್ಬರು ಮೇಲೆ ಬರದೆ ಇದ್ದಾಗ, ದುನಿಯಾ ವಿಜಯ್ ಅವರ ಕೂಗಿಕೊಂಡಿದ್ದು. ಅಮೇಲೆ ಚಿತ್ರತಂಡದವರು ಬೋಟಿನಲ್ಲಿ ಹೋಗಿ ವಿಜಯ್ ಅವರನ್ನ ದಡಕ್ಕೆ ಕರೆತರಲಾಗಿದೆ. ಸದ್ಯ, ಚಿತ್ರತಂಡ ಸೇರಿದಂತೆ, ಅಕ್ಕ ಪಕ್ಕದ ಊರಿನ ಜನರು ಸೇರಿ ಬೋಟಿನ ಮೂಲಕ ಅನಿಲ್ ಹಾಗೂ ಉದಯ್ ಗಾಗಿ ಹುಡುಕಾಟ ನಡೆಸಿದರು.

English summary:  mishap at tippagondanahalli back water during maasti gudi climax shoot

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...