Oyorooms IN

Tuesday, 25th April, 2017 4:08 PM

BREAKING NEWS

ಕಥೆ

‘ತಿಂಗಳ ಸಂಬಳ’

village_dreams
ತಮ್ಮದೇ ಭೂಮಿ ಹಳ್ಳಿಯೊಂದರಲ್ಲಿ. ಕೆಲಸಕ್ಕಾಗಿ ಕೂಲಿಯವರನ್ನ ಹುಡುಕಾಡುತಿದ್ದರೆ.., ಕಂಡ-ಕಂಡವರನ್ನೆಲ್ಲ ಕೇಳಿ ಸಾಕಾಗಿ ತಾನೇ ಕೈಲಾದಷ್ಟು ಸಿಕ್ಕಂತಹ ಒಬ್ಬಿಬ್ಬರ ಜೊತೆಲಿ ಕೆಲಸಮಾಡಿ ಧಣಿದು ಮನೆಗೆ ಬಂದು ಹಾಯಾಗಿ ಮಲಗಿ ಮಗನ ಚಿಂತೆ ಮಾಡುತಿದ್ದರು.

ಹತ್ತಾರು ಜನರು ಹಗಲಿರುಳು ಮಾಡಿದರು ಸಾಲದು ಈ ನಮ್ಮ ಭೂಮಿಯಲ್ಲಿ ಅಷ್ಟೊಂದು ಕೆಲಸಕಾರ್ಯಗಳು. ಜೊತೆಗೆ ಕೈ ಜೋಡಿಸಿದರೆ ಸಾಕು ಬೆಳೆದುನಿಂತಿರುವ ನನ್ನ ಮಗ ಎನ್ನುವ ತಂದೆ. ತಕ್ಕಮಟ್ಟಿಗೆ ಓದಿದ ಮಗ ಯಾರದೊ ಕೈ ಕೆಳಗೆ ತಿಂಗಳ ಸಂಬಳ ಎನ್ನುವ ಕೂಲಿ ಕೆಲಸ ಮಾಡಲು ತನ್ನ ತಂದೆಯ ಮಾತನು ಜರಿದು ಹೋಗಿರುವವನಿಗೆ ಅಪ್ಪನ ಅಂಬಲ ಅರ್ಥವಾಗುವುದಾದರು ಎಂದು..?

ಒಮ್ಮೆ ಯಾವುದೊ ಹಬ್ಬದ ರಜೆ ಸಿಕ್ಕಿ ಊರಿಗೆ ಬಂದಾಗ, ಕೆಲಸದವರಿಗೆ ಅವರ ಅಪ್ಪ ನೋಟುಗಳನ್ನು ಎಣಿಸಿ-ಎಣಿಸಿ ಕೈ ಎತ್ತಿ ಕೊಡುತಿದ್ದ ದೃಶ್ಯ ಕಂಡಾಗ ಕೈ ಚಾಚಿ ತೆಗೆದುಕೊಂಡ ತಿಂಗಳ ಸಂಬಳ ಛೇ.., ಎನಿಸಿಬಿಟ್ಟಿತು. ತಂದೆಯ ಚಟುವಟಿಕೆಗಳ ಕಂಡು ಮನಸಿನ ಯಾವುದೊ ಮೂಲೆಯೊಂದರಲ್ಲಿ ಕುಸಿದು ಹೋಗಿಬಿಟ್ಟ ಮಗ. ಅದೇ ಸಮಯಕ್ಕೆ ಸರಿಯಾಗಿ, ಕೂಲಿಯೊಬ್ಬ ಬಂದು ಇವನ ತಂದೆಗೆ ಹೇಳುತಿದ್ದ; ದಣಿ ನಾಳೆಯಿಂದ ಒಂದು ವಾರದ ಮಟ್ಟಿಗೆ ನಾನು ಕೆಲಸಕ್ಕೆ ಬರುತ್ತಿಲ್ಲ.., ಬೇರೆ ಯಾರನ್ನಾದರೂ ನೋಡಿಕೊಳ್ಳಿ ಎಂದು ಹೇಳಿ ಹೊರಟುಹೋದ.

ರೈತನ ಮಗನಿಗೆ ಆ ಒಂದು ಕ್ಷಣ ನೆನಪಿಗೆ ಬಂದದ್ದು.; ವಾರದ ರಜೆ ಹಾಳಾಗಿ ಹೋಗಲಿ, ಎರಡು/ಮೂರು ದಿನಗಳ ರಜೆಗಾಗಿ ಎಷ್ಟೆಲ್ಲಾ ಬೇಡಿಕೊಳ್ಳಬೇಕು ನಾನಲ್ಲಿ..?.! ಅಷ್ಟೆಲ್ಲಾ ಬೇಡಿಕೊಂಡರು ಅದೃಷ್ಟ ಇದ್ದರೆ ಕೊಡುವರು ಇಲ್ಲವಾದರೆ ಅದೂ ಇಲ್ಲ..! ಛೇ..ಛೇ.
ಎಂದೆಲ್ಲಾ ಯೋಚಿಸುತ್ತ, ಮಲಗಿ ಎದ್ದವನು ಮುಂದಿನ ತಿಂಗಳಿಂದಲೆ ಅಪ್ಪನೊಂದಿಗೆ ರೈತನಾಗಿ ದುಡಿಯತೊಡಗಿದ. ಎಲ್ಲೋ ಮಾಡುತಿದ್ದ ಕೆಲಸದಲ್ಲಿ ಬರುತಿದ್ದ ತಿಂಗಳ ಸಂಬಳದಲೆಲ್ಲೂ ಇಲ್ಲದ ಶಾಂತಿ, ನೆಮ್ಮದಿ ದಿನಗೂಲಿ ಮಾಡಿದರು ಹೆತ್ತವರ ಜೊತೆ ಇರುವುದರಲ್ಲಿನ ಸತ್ಯ ಸಂಗತಿ ತಿಳಿದವನು ಹೇಳಿದ ಅಪ್ಪ ನೀವು ಹೇಳಿದ್ದೆ ಸರಿ ಎಂದು ಮಗ ಮಹರಾಯ.

ನಾಗಭೂಷಣ ಬಿ.ಕೆ. ಚಂದ್ರಶೇಖರಪುರ
ನಾಗಭೂಷಣ ಬಿ.ಕೆ.
ಚಂದ್ರಶೇಖರಪುರ

ಕಥೆ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...