Oyorooms IN

Wednesday, 24th May, 2017 7:46 AM

BREAKING NEWS

ಪ್ರಮುಖ ಸುದ್ದಿಗಳು

ವಿಲಾಸಿ ಜೀವನ ನಡೆಸಲು ಮೂರು ಕೊಲೆ ಮಾಡಿದ ಎಂಜಿಯರಿಂಗ್ ವಿದ್ಯಾರ್ಥಿನಿ

murder_hasan_kon

ಹಾಸನ: ಐಷಾರಾಮಿ ಜೀವನ ನಡೆಸಲು, ಒಂಟಿ ಮಹಿಳೆಯರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚುತ್ತಿದ್ದ ಒಂದೇ ಕುಟುಂಬದ ಆರು ಮಹಿಳೆಯರನ್ನು ಹಾಸನ ಪೊಲೀಸರು ಬಂಧಿಸಿದ್ದು, ಬಂಧಿತರಲ್ಲಿ ಎಂಜನಿಯರ್ ಹಾಗೂ ಬಿಎಸ್ಎಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಇದ್ದಾರೆ.

ಸಣ್ಣಮ್ಮ, ವತ್ಸಲಾ ಹಾಗೂ ಅಕ್ಸರ್ ಉನ್ನೀಸಾ ಕೊಲೆ ಪ್ರಕರಣದ ಬೆನ್ನುಹತ್ತಿದ್ದ ಪೊಲೀಸರಿಗೆ ಒಂದೇ ರೀತಿ ಕೊಲೆಯಾಗುತ್ತಿರುವ ಅಂಶ ಗಮನಕ್ಕೆ ಬಂದಿದ್ದು, ಕೊಲೆಯಾದ ಮಹಿಳೆಯರೆಲ್ಲರೂ ಒಬ್ಬಂಟಿಯಾಗಿರುತ್ತಿದ್ದರು ಹಾಗೂ ಕೊಲೆಯಾದ ಮಹಿಳೆಯರ ಚಿನ್ನಾಭರಣ ದೋಚುತ್ತಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ಹೊಸಕೊಪ್ಪಲು ಗ್ರಾಮದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರೂಪಾ, ಪಾರ್ವತಮ್ಮ, ಲತಾ ಹಾಗೂ ಲತಾ ಮಗಳು ಶ್ವೇತಾ, ಪಾರ್ವತಮ್ಮ ಮಕ್ಕಳಾದ ಶ್ರೀನಿಧಿ, ದಿವ್ಯಾ ಎಂಬುವರನ್ನು ಬಂಧಿಸಿದ್ದು, ಶ್ರೀನಿಧಿ ಎಂಜಿನಿಯರ್, ಹಾಗೂ ದಿವ್ಯಾ ಬಿಎಸ್ಎಸಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.

ಬಂಧಿತರಿಂದ 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ಇವರು, ತಂಪುಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಲೆ ಮಾಡುತ್ತಿದ್ದರು. ಕೊಲೆಯ ನಂತರ ಶವವನ್ನು ಚೀಲದಲ್ಲಿ ಕಟ್ಟಿ ಸ್ಕೂಟಿ ಅಲ್ಲಿ ಸಾಗಿಸುತ್ತಿದ್ದರು. ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯೊಬ್ಬರ ಕೊಲೆಗೂ ಆರೋಪಿಗಳು ಸಂಚು ರೂಪಿಸಿದ್ದರು ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

English summary:  murder case busted in hasan, 6 women’s arrested.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...