Oyorooms IN

Sunday, 20th August, 2017 10:52 PM

BREAKING NEWS

ಪ್ರಮುಖ ಸುದ್ದಿಗಳು

6 ತಿಂಗಳಿಂದ ಹೊರಗೆ ಬಾರದ ಗುಟ್ಟು..! 2000 ನೋಟು ಪ್ರಿಂಟಾಗಿದ್ದು ಇಲ್ಲಿಯೇ !!!

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸುವವರೆಗೆ ನೋಟು ರದ್ದುಗೊಳಿಸುತ್ತಿರುವ ವಿಷಯವನ್ನಾಗಲಿ, ಹೊಸ ನೋಟುಗಳ ಪ್ರಿಟಿಂಗ್ ನಡೆಯುತ್ತಿದೆ ಎನ್ನುವುದಾಗಲಿ ಯಾರಿಗೂ ಗೊತ್ತಿರಲಿಲ್ಲ, ಆದ್ರೆ ಹೊಸ ನೋಟುಗಳನ್ನು ಸರಬರಾಜು ಮಾಡುವುದಕ್ಕಾಗಿ ಮೈಸೂರು ವಿಮಾನ ನಿಲ್ದಾಣ 6 ತಿಂಗಳಿಂದ ಸೈಲೆಂಟಾಗಿಯೇ ಕೆಲಸ ನಿರ್ವಹಿಸಿದೆ.

ಪ್ರತ್ಯೇಕ ವಿಮಾನವೊಂದರಲ್ಲಿ ಗುಟ್ಟನ್ನು ಕಾಪಾಡಿಕೊಂಡು ಮೈಸೂರಿನ ನೋಟು ಮುದ್ರಣಾಲಯದಿಂದ ನವದೆಹಲಿಯಲ್ಲಿರುವ ಆರ್ ಬಿಐ ಕೇಂದ್ರ ಕಚೇರಿಗೆ 2000 ನೋಟುಗಳನ್ನು ಕಳುಹಿಸಲಾಗುತ್ತಿತ್ತಂತೆ, 6 ತಿಂಗಳಿಂದ ಬೆಂಗಳೂರು ಸೇರಿದಂತೆ ದೇಶದಲ್ಲಿರುವ ಆರ್ ಬಿಐ ಕಚೇರಿಗಳಿಗೆ ಹೊಸ ನೋಟುಗಳನ್ನು ಡಿಪಾಜಿಟ್ ಮಾಡಲಾಗಿದೆ, ಗುಟ್ಟಾಗಿ ಖಾಸಗಿ ವಿಮಾನವೊಂದು ದೇಶದ ಬೇರೆ ಬೇರೆ ನಗರಕ್ಕೆ ಹೋಗಿ ಬರುತ್ತಿದ್ದರು ಈ ಬಗ್ಗೆ ಯಾರಿಗೂ ಅನುಮಾನ ಬಂದಿಲ್ಲ.

modi

2000 ನೋಟುಗಳನ್ನು ಸಾಗಾಣೆ ಮಾಡುವುದಕ್ಕಾಗಿಯೇ ಪ್ರತ್ಯೇಕವಾದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, ಹಾಗೂ ಆರ್ ಬಿಐ ಬ್ರಾಂಚ್ ಆಫೀಸ್ ಗಳಲ್ಲಿ ಸಾಕಷ್ಟು 2000 ನೋಟುಗಳು ಸಂಗ್ರಹಿಸಿದ ನಂತರವೇ ಪ್ರಧಾನಿ ಮೋದಿ ನೋಟು ರದ್ದುಗೊಳಿಸುತ್ತಿರುವುದನ್ನು ಅಧಿಕೃತವಾಗಿ ಪ್ರಕಟಿಸಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರೀ ಭದ್ರತೆ ಮಧ್ಯೆ ಪ್ರತ್ಯೇಕವಾಹನದಲ್ಲಿ 2000 ನೋಟುಗಳನ್ನು ಗುರುವಾರ ಜನರಿಗೆ ನೀಡಲು ಬ್ಯಾಂಕ್ ಗಳಿಗೆ ನೀಡಲಾಗುತ್ತಿದ್ದು, ಒಂದೊಂದು ಬ್ಯಾಂಕ್ ಬ್ರಾಂಚ್ ಗಳಿಗೆ 2 ಲಕ್ಷದಿಂದ 2 ಕೋಟಿವರೆಗೂ ನೀಡಲಾಗಿದೆಯಂತೆ, ಮೈಸೂರಿನಿಂದ ಹೊಸ ನೋಟುಗಳನ್ನು ಸಾಗಿಸುವುದಕ್ಕಾಗಿ ವಿಮಾನವನ್ನು ಬಾಡಿಗೆ ಪಡೆಯಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು, ವಿಮಾನದ ಬಾಡಿಗೆಗಾಗಿ ಆರ್ ಬಿಐ 73,42 ಲಕ್ಷ ರೂಪಾಯಿ ನೀಡಿದೆ.

ಪ್ರಪಂಚದಲ್ಲಿಯೇ ಅತ್ಯುತ್ತಮ ನೋಟು ಮುದ್ರಣಾಲಯ ಎಂದು ಹೆಸರು ಪಡೆದಿರುವ ಮೈಸೂರು ಮುದ್ರಣಾಲಯದಲ್ಲಿ ಹೈ ಸೆಕ್ಯೂರಿಟಿ ಜೋನ್ ಇದೆ, ಪ್ರತ್ಯೇಕ ರೈಲ್ವೆ ಮಾರ್ಗ, ನೀರು ಸರಬರಾಜು ಸಹ ಿಲ್ಲಿ ಮಾಡಲಾಗಿದ್ದು, 2 ದಶಕಗಳಿಂದ ನೋಟು ಮುದ್ರಿಸುವ ಕಾರ್ಯ ಇಲ್ಲಿ ನಡೆಯುತ್ತಿದ್ದು, ನೋಟು ಮುದ್ರಣಕ್ಕೆ ಬೇಕಾಗುವ ಕಾಗದವನ್ನು ಇಲ್ಲಿಯೇ ತಯಾರಿಸಿಕೊಳ್ಳಲಾಗುತ್ತದೆ.

ಕಳೆದ 6 ತಿಂಗಳಿಂದ ಹೊಸ ನೋಟುಗಳ ಮುದ್ರಣ ಕಾರ್ಯ ಆರಂಭವಾದರು ಅದರ ವಾಸನೆ ಹೊರಗೆ ಬರದಂತೆ ಇಲ್ಲಿನ ಭದ್ರತಾ ಸಿಬ್ಬಂದಿ ಜಾಗೃತಿವಹಿಸಿದ್ದು, ಇಲ್ಲಿರುವ ಭದ್ರತಾ ವ್ಯವಸ್ಥೆಗೆ ಹೇಗಿದೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

English summary:  new 2000 notes printed in Mysore, for notes supply RBI take flight rent

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...