Oyorooms IN

Monday, 24th July, 2017 10:01 PM

BREAKING NEWS

ಪ್ರಮುಖ ಸುದ್ದಿಗಳು

ಎಲ್ಲರು ನೋಡುವವರೇ.. ರಕ್ಷಣೆಗೆ ಯಾರು ಬರಲಿಲ್ಲ.!!

ಗುರುಗ್ರಾಮ: ಪ್ರಸ್ತುತ ಸಮಾಜದ ಪರಿಸ್ಥಿತಿ ಹೇಗಿದೆ ಎನ್ನುವುದಕ್ಕೆ ಹಿಡದ ಕನ್ನಡಿಯಂತಿದೆ ಈ ಘಟನೆ, ಎಲ್ಲರು ನೋಡುತ್ತಾರೆ ಹೊರತು, ಅಪಾಯದಲ್ಲಿರುವ ಯುವತಿಯನ್ನು ಕಾಪಾಡುವುದಕ್ಕೆ ಯಾರೊಬ್ಬರು ಮುಂದೆ ಬರಲಿಲ್ಲ, ತನಗೆ ನಡೆದ ಅವಮಾನಕ್ಕಿಂತ ಕಷ್ಟದಲ್ಲಿರುವವರನ್ನು ಕಾಪಾಡಬೇಕೆಂದ ಸಾಮಾಜಿಕ ಪ್ರಜ್ಞೆ ಯಾರಲ್ಲಿಯೂ ಇಲ್ಲದೇ ಇರುವುದು ಆಕೆ ಮತ್ತಷ್ಟು ಆಘಾತಕ್ಕೆ ಒಳಗಾಗುವಂತೆ ಮಾಡಿದೆ. ಈ ವಿಚಾರವಾಗಿ ಬಹಳಷ್ಟು ದಿನ ನೋವುಂಡ ಆಕೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.

ರಾಜಸ್ತಾನ ಮೂಲದ 26 ವರ್ಷದ ಯುವತಿ ದೆಹಲಿಯ ಗುರುಗ್ರಾಮ ಸೈಬರ್ ಸಿಟಿ ಐಟಿ ಸಂಸ್ಥೆಯಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾಳೆ, ಇತ್ತಿಚೆಗೆ ತನ್ನ ಸ್ವಂತ ಊರಿಗೆ ಹೋಗಿದ್ದ ಆಕೆ ರಾತ್ರಿ 7 ಗಂಟೆಗೆ ವಾಪಾಸ್ ಗುರುಗ್ರಾಮಕ್ಕೆ ಬಂದಿದ್ದಾಳೆ, ವೊಲ್ವೋ ಬಸ್ ನಲ್ಲಿ ಬಂದ ಆಕೆ ಕ್ಯಾಬ್ ಗಾಗಿ ಪ್ರಯತ್ನಿಸಿದ್ದಾಳೆ, ಆದರೆ ತಡವಾಗಿದ್ದರಿಂದ, ಕತ್ತಲಾಗುತ್ತಿದ್ದರಿಂದ ಬಸ್ ನಲ್ಲಿ ಮನೆಗೆ ಹೋಗಲು ಬಸ್ ಸ್ಟಾಪ್ ಗೆ ಹೋಗಿದ್ದಾಳೆ.

ಬಸ್ ಸ್ಟಾಪ್ ನಲ್ಲಿ ಬಹಳಷ್ಟು ಜನರು ಇದ್ದು, ಆಫೀಸ್ ನಿಂದ ಮನೆಗೆ ಹೋಗುವವರ ಸಂಖ್ಯೆ ಹೆಚ್ಚಾಗಿತ್ತು, ಅಷ್ಟರಲ್ಲಿ ಅಲ್ಲಿಗೆ ಬಂದ ಸ್ಕಾರ್ಪಿಯೋದಲ್ಲಿ ಬಂದ ಕೆಲವರು ಆಕೆಯನ್ನು ಕಾರಿನೊಳಗೆ ಎಳೆಯಲು ಯತ್ನಿಸಿದ್ದಾರೆ, ಆಕೆ ಕಿರುಚಿಕೊಂಡರು ಯಾರು ಆಕೆಯ ಸಹಾಯಕ್ಕೆ ಬಾರದೇ ಇದ್ದಿದ್ದರಿಂದ, ತನ್ನನ್ನು ತಾನೇ ಕಾಪಾಡಿಕೊಳ್ಳಬೇಕೆಂದು ಕೊಂಡ ಆಕೆ, ಕಾರ್ ಡೋರ್ ಅನ್ನು ಒದ್ದು ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾಳೆ.

ಅಷ್ಟರಲ್ಲಿ ಟ್ರಾಫಿಕ್ ಸಿಗ್ನಲ್ ಬಿದ್ದಿದ್ದರಿಂದ ಕಾರಿನಲ್ಲಿ ಇದ್ದವರು ಆಕೆಯನ್ನು ರಸ್ತೆ ಮೇಳೆ ತಳ್ಳಿ ಪರಾರಿಯಾಗಿದ್ದಾರೆ, ಅಷ್ಟೊಂದು ಜನರಿದ್ದರು, ಆ ಯುವತಿಯನ್ನು ರಕ್ಷಿಸಲು ಯಾರು ಮುಂದೆ ಬರಲಿಲ್ಲ, ಈ ಬಗ್ಗೆ ಯಾರಿಗೆ ಹೇಳ್ಬೇಕು ಗೊತ್ತಾಗದೇ ಮಾನಸಿಕ ಹಿಂಸೆ ಅನುಭವಿಸಿದ ಆಕೆಗೆ ವಾಹನದ ನಂಬರ್ ಗೊತ್ತಿಲ್ಲದೇ ಇದ್ದಿದ್ದರಿಂದ ಪೊಲೀಸರಿಗೆ ದೂರು ನೀಡಲು ಆಗಿಲ್ಲ, ಕೊನಗೆ ತನ್ನ ನೋವನ್ನು ಫೇಸ್ಬುಕ್ ನಲ್ಲಿ ಹೊರಹಾಕಿದ್ದಾಳೆ.

English summary:  no one help me young girl  sexual harassment

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...