Oyorooms IN

Friday, 23rd June, 2017 12:15 PM

BREAKING NEWS

ಉತ್ತರ ಕನ್ನಡ

ದೇಶದೆಲ್ಲೆಡೆ ನೋಟಿನ ಹವಾ,, ಈ ಊರಲ್ಲಿ ಮಾತ್ರ ಏನು ಇಲ್ಲ,,!!

note

ಹಳಿಯಾಲ: ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ನೋಟು ರದ್ದು ನಿರ್ಣಯದಿಂದ ಜನಸಾಮಾನ್ಯರು ಆರ್ಥಿಕ ಮುಗ್ಗಟ್ಟಿನಿಂದ ಪರದಾಡುತ್ತಿದ್ದಾರೆ,  ಕೆಲಸ ಕಾರ್ಯಗಳನ್ನು ಬಿಟ್ಟು ಬ್ಯಾಂಕ್ ಗಳ ಮುಂದೆ ಕ್ಯೂ ನಿಂತುಕೊಂಡು ಕಷ್ಟವನ್ನು ಅನುಭವಿಸುತ್ತಿದ್ದಾರೆ, ಆದರೆ ಈ ಊರಲ್ಲಿ ಮಾತ್ರ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಲದಿಂದ 10 ಕಿಲೋ ಮೀಟರ್ ದೂರದಲ್ಲಿರುವ ಟಿನಿ ಅನ್ನುವ ಗ್ರಾಮದಲ್ಲಿ ಮೋದಿ ಅವರು ತೆಗೆದುಕೊಂಡಿರುವ ನಿರ್ಣಯದಿಂದ ಗ್ರಾಮಸ್ಥರಿಗೆ ಯಾವುದೇ ನಷ್ಟ ಆಗಿಲ್ಲ, ಈ ಗ್ರಾಮದಲ್ಲಿರುವ ಜನರು 2 ವಾರಕ್ಕೆ 500 ರೂಪಾಯಿ ಖರ್ಚು ಮಾಡುತ್ತಾರೆ, ಬಡತನದಿಂದಲ್ಲ ಗ್ರಾಮಸ್ಥರು ಟೌನ್ ಗೆ ಹೋಗಬೇಕು ಎಂದರೆ ಮೂರು ಕಿಲೋ ಮೀಟರ್ ದೂರದಲ್ಲಿರುವ ಬೇರೆ ಊರಿಗೆ ನಡೆದುಕೊಂಡು ಹೋಗಿ ಬಸ್ ಹತ್ತಬೇಕಿದೆ.

ದಿನಕ್ಕೆ 2 ಬಾರಿ ಮಾತ್ರ ಬಸ್ ಇಲ್ಲಿಗೆ ಬರುವುದರಿಂದ ಬಸ್ ಮಿಸ್ ಆದ್ರೆ ನಿರಾಸೆಯಿಂದ ಮರಳಿ 3 ಕಿಲೋ ಮೀಟರ್ ನಡೆದುಕೊಂಡು ಹಿಂತಿರುಗಬೇಕಿದೆ ಏಕಂದರೆ ಈ ಗ್ರಾಮ ಅಭಿವೃದ್ಧಿಯಲ್ಲಿ ಅಷ್ಟು ಹಿಂದುಳಿದಿದೆ, ಈ ಊರಿನ ಜನಸಂಖ್ಯೆ 1000ಕ್ಕೂ ಹೆಚ್ಚಿದ್ದು, ಇವರಲ್ಲಿ ಬಹಳಷ್ಟು ಮಂದಿ ವ್ಯವಸಾಯ ಕೂಲಿಕಾರರಾಗಿ ಜೀವನ ನಡೆಸುತ್ತಿದ್ದಾರೆ.

ಈ ಊರಿನಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರುವವರ ಸಂಖ್ಯೆ ಕಡಿಮೆಯೇ, ಬೆಳಿಗ್ಗೆ 8 ಗಂಟೆಗೆ ಹೊಲಕ್ಕೆ ಹೋದರೆ ವಾಪಸ್ ಬರುವುದೇ ಸಂಜೆಗೆ, ದಿನಕ್ಕೆ 150 ರೂಪಾಯಿ ಕೂಲಿಗೆ ದಿನವಿಡೀ ಕೆಲಸ ಮಾಡುವವರಿಗೆ ನೋಟು ರದ್ದುಗೊಂಡಿರುವುದರಿಂದ ಕೂಲಿ ಹಣವನ್ನು ನೀಡುತ್ತಿಲ್ಲವಂತೆ, ಕೊಟ್ಟರು ಎಲ್ಲಾ ಹಳೆಯ ನೋಟುಗಳೇ,  ಒಂದು ವಾರದಿಂದ ಯಾರು ಕೂಲಿ ಹಣವನ್ನು ಕೊಟ್ಟಿಲ್ಲ, ಹಳೆ ನೋಟುಗಳನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎನ್ನುವುದು ಗ್ರಾಮಸ್ಥರಿಗೂ ಗೊತ್ತಿಲ್ಲ.

ದೇಶಾದ್ಯಂತ ಚಿಲ್ಲರೆ ಹಣಕ್ಕಾಗಿ ಬ್ಯಾಂಕ್ ಮುಂದೆ ಜನರು ಕ್ಯೂ ನಿಲ್ಲುತ್ತಿದ್ದರೆ, ಈ ಊರಿನ ಜನರು ಮಾತ್ರ ಇರುವ ಚಿಲ್ಲರೆ ಹಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ.

English summary:  no tension for note exchange here

ಉತ್ತರ ಕನ್ನಡ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...