Oyorooms IN

Saturday, 19th August, 2017 4:42 PM

BREAKING NEWS

ಪ್ರಮುಖ ಸುದ್ದಿಗಳು

ಇಸ್ರೋದಲ್ಲಿ ಪಾಕ್ ಗೂಢಚಾರ, 20 ವರ್ಷಗಳಿಂದ ಪಾಕ್ ಗೆ ಮಾಹಿತಿ

ನವದೆಹಲಿ: ಭಾರತದ ವಿವಿಧೆಡೆ ಪಾಕಿಸ್ತಾನ ಗೂಢಚಾರ ಸಂಸ್ಥೆಯ ಗೂಢಚಾರರು  ಹಲವು ತಿಂಗಳಿನಿಂದ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ. ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ಅಧಿಕಾರಿಯೊಬ್ಬರೂ ಈ ಜಾಲದಲ್ಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಈಗಾಗಲೇ ನಿಯೋಜಿವಾಗಿರುವ ಪಾಕಿಸ್ತಾನದ ಈ ಏಜೆಂಟರು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು ಎನ್ನಲಾಗಿದ್ದು, ಮುಂಬೈ ದಾಳಿ ಮಾದರಿಯಲ್ಲಿ ಮತ್ತೆ ದಾಳಿ ನಡೆಸಲು ವ್ಯವಸ್ಥಿತ ಸಂಚು ರೂಪಿಸಿದ್ದರು.

ಪಾಕಿಸ್ತಾನ ಹೈಕಮಿಷನರ್ ಕಚೇರಿ ಅಧಿಕಾರಿ ಮೆಹಮೂದ್ ಅಖ್ತರ್ ಗೂಢಚರ್ಯೆ ಆರೋಪದಲ್ಲಿ ಬಂಧಿನಾಗಿ, ಭಾರತ ಬಿಡುವ ಮುನ್ನ ದೆಹಲಿಯಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಐಎಸ್ಐನ 10 ಮಂದಿ ಅಧಿಕಾರಿ ಮತ್ತು ಸಿಬ್ಬಂದಿ ಹೆಸರನ್ನು ಬಹಿರಂಗಗೊಳಿಸಿದ್ದು, ಕರ್ನಲ್ ಸಯ್ಯದ್ ಫಾರೂಖ್, ಆತನ ಸಹಾಯಕ ಅಧಿಕಾರಿ ಖದೀಮ್ ಹುಸೇನ್, ಮೇಜರ್ ಸಹೀದ್ ಇಕ್ಬಾಲ್ ಮತ್ತು ಉಪ ನಿರ್ದೇಶಕ ಡಾ. ಮುದಾಸಿರ್ ಇಕ್ಬಾಲ್ ಮೊದಲಾದ ಐಎಸ್ಐ ಸದಸ್ಯರ ಹೆಸರು ಮತ್ತು ಅವರ ಮಾಹಿತಿಗಳನ್ನು ಅಖ್ತರ್ ನೀಡಿದ್ದಾನೆ ಎನ್ನಲಾಗಿದೆ.

pak-spy

ಬೇಹುಗಾರಿಕೆ ಜಾಲ ಭೇದಿಸಲು ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಪೊಲೀಸರು ಹಲವು ತಿಂಗಳುಗಳಿಂದ ಐಎಸ್ಐ ಮತ್ತು ಪಾಕಿಸ್ತಾನಿ ಸೇನೆ ಎರಡಕ್ಕೂ ಕಾರ್ಯನಿರ್ವಹಿಸುತ್ತಾ ಭಾರತದ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗೆ ಸೇರಿದ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ್ದಾರೆ. ಸಂದರ್ಭಕ್ಕೆ ಅನುಗುಣವಾಗಿ ಅಗಾಗ ಗೂಢಚರ್ಯೆ ಕಾರ್ಯಗಳು ಬದಲಾಗುತ್ತಿರುತ್ತವೆ ಎಂಬ ಸ್ಫೋಟಕ ಮಾಹಿತಿಯನ್ನೂ ಅತ ಬಾಯ್ಬಿಟ್ಟಿದ್ದಾನೆ.

ಅಖ್ತರ್ ಐಎಸ್ಐಗಾಗಿ ಅತ್ಯಂತ ವ್ಯವಸ್ಥಿತ ಬೇಹುಗಾರಿಕೆ ಜಾಲವೊಂದನ್ನು ನಡೆಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಭಾರತ-ಪಾಕ್ ಗಡಿಯಲ್ಲಿ ಬಿಎಸ್ಎಫ್ ಯೋಧರ ನಿಯೋಜನೆಗೆ ಸಂಬಂಧಿಸಿದಂತೆ ದಾಖಲೆಗಳು ಸೇರಿದಂತೆ ಹಲವು ಗೋಪ್ಯ ಮಾಹಿತಿಗಳನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ.

ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ಅಧಿಕಾರಿಯೊಬ್ಬರ ಮೂಲಕ ಆಖ್ತರ್ ಅತ್ಯಂತ ಸೂಕ್ಷ್ಮ ಮಾಹಿತಿ ಕಲೆ ಹಾಕಿ ಪಾಕ್ಗೆ ರವಾನಿಸುತ್ತಿದ್ದ ಎಂಬ ಆತಂಕಕಾರಿ ಸಂಗತಿಯೂ ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ಅಧಿಕಾರಿಯನ್ನು ವಶಕ್ಕೆ ತೆಗೆದುಕೊಂಡು ತೀವ್ರ ತನಿಖೆಗೆ ಒಳಪಡಿಸಲಾಗಿದೆ.

ಸಂಸತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕದ್ದು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಸಮಾಜವಾದಿ ಪಕ್ಷದ ಸಂಸದ ಮುನ್ನಾವರ್ ಸಲೀಂ ಆಪ್ತ ಕಾರ್ಯದರ್ಶಿ ಫರಾತ್ ಕಳೆದ 20 ವರ್ಷಗಳಿಂದಲೂ ಬೇಹುಗಾರಿಕೆ ನಡೆಸುತ್ತಿದ್ದ ಸಂಗತಿ ವಿಚಾರಣೆ ವೇಳೆ ತಿಳಿದುಬಂದಿದೆ. ಕಳೆದ  ಒಂದು ವರ್ಷದಿಂದ  ಫರಾತ್ ನನ್ನ ಬಳಿ ಕೆಲಸ ಮಾಡುತ್ತಿದ್ದ. ಆತನನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಕ್ಕೆ ಮೊದಲು ಪಾರ್ಲಿಮೆಂಟ್ ಮತ್ತು ಸರ್ಕಾರಕ್ಕೆ ಮಾಹಿತಿ ನೀಡಿ ಪರಿಶೀಲನೆ ನಡೆಸಲಾಗಿತ್ತು ಎಂದು ಸಂಸದ ಮುನ್ನಾವರ್ ಸಲೀಂ ಹೇಳಿದ್ದಾರೆ.

English summary:  Pakistan spy akhtar names top isi officers in high commission before returning home

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...