Oyorooms IN

Thursday, 17th August, 2017 5:12 PM

BREAKING NEWS

ಚಾಮರಾಜನಗರ

ಅರಣ್ಯಕ್ಕೆ ಕಂಟಕವಾದ ಲಂಟನಾ(ಪಾರ್ಥೇನಿಯಂ)

par-1

ಚಾಮರಾಜನಗರ: ಇತ್ತೀಚೆಗಿನ ವರ್ಷಗಳಲ್ಲಿ ಅರಣ್ಯಗಳಲ್ಲಿ ಬೆಳೆದು ನಿಂತಿದ್ದ ಬಿದಿರು ಮೆಳೆಗಳು ಹೂ ಬಿಟ್ಟು ನಾಶವಾದ ಕಾರಣ ಅಲ್ಲಿ ಯಥೇಚ್ಛವಾಗಿ ಲಂಟನಾ, ಪಾರ್ಥೇನಿಯಂ ಬೆಳೆದಿರುವುದರಿಂದ ಸಸ್ಯಹಾರಿ ವನ್ಯ ಪ್ರಾಣಿಗಳಿಗೆ ಆಹಾರದ ಸಮಸ್ಯೆ ಎದುರಾಗಿದ್ದು ನಾಡಿನತ್ತ ಮುಖಮಾಡುತ್ತಿವೆ.

ಲಂಟನಾ ಮತ್ತು ಪಾರ್ಥೇನಿಯಂ ಇಡೀ ಅರಣ್ಯವನ್ನು ಅಕ್ರಮಿಸಿ ಬೆಳೆಯುವುದರಿಂದಾಗಿ ಹುಲ್ಲು ಸೇರಿದಂತೆ ಯಾವ ಸಸ್ಯವೂ ಅಲ್ಲಿ ಬೆಳೆಯಲಾರದ ಸ್ಥಿತಿ ನಿರ್ಮಾಣವಾಗಿದೆ. ಲಂಟನಾ ಹಬ್ಬಿ ಬೆಳೆಯುತ್ತಿರುವುದರಿಂದ ಇದು ಯಾವುದೇ ಸಸ್ಯಗಳನ್ನು ಬೆಳೆಯಲು ಬಿಡುವುದಿಲ್ಲ. ಅಷ್ಟೇ ಅಲ್ಲ ಪೊದೆಯಂತೆ ಹಬ್ಬಿ ಬೆಳೆಯುವುದರಿಂದ ಇದರೊಳಗೆ ಸಿಕ್ಕಿ ಕೊಳ್ಳುವ ಗಿಡ, ಮರ, ಗಾಳಿ ಬೆಳಕಿಲ್ಲದೆ ಬೆಳವಣಿಗೆ ಕುಂಠಿತಗೊಂಡು ಸಾಯುತ್ತವೆ. ಇದರಿಂದಾಗಿಯೇ ಮೇವು ಸಿಗದೆ ಪ್ರಾಣಿಗಳು ರೈತರ ಜಮೀನಿಗೆ ನುಗ್ಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿ ಮಳೆ ಸುರಿದಿದ್ದರಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಬಹುತೇಕ ಕೆರೆಕಟ್ಟೆಗಳು ತುಂಬಿವೆ. ಪರಿಣಾಮ ಅರಣ್ಯದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದು. ಆದರೆ ಮೇವಿಗೆ ಮಾತ್ರ ಲಂಟನಾದಿಂದಾಗಿ ತೊಂದರೆ ತಪ್ಪಿದಲ್ಲ.

ಕೆಲವೇ ಕೆಲವು ಭಾಗದಲ್ಲಿದ್ದ ಲಂಟನಾ ಮತ್ತು ಪಾರ್ಥೇನಿಯಂ ಬಹುತೇಕ ಅರಣ್ಯವನ್ನು ವ್ಯಾಪಿಸಿದೆ. ಬಂಡೀಪುರಕ್ಕೆ ಬರುವ ಪ್ರವಾಸಿಗರನ್ನು ಅರಣ್ಯ ಪ್ರದೇಶದೊಳಕ್ಕೆ ಸಫಾರಿಗೆ ಕರೆದೊಯ್ಯುವ ವಾಹನಗಳ ಚಕ್ರಕ್ಕೆ ಅಂಟಿಕೊಂಡು ಒಂದೆಡೆಯಿಂದ ಮತ್ತೊಂದೆಡೆಗೆ ಬೀಜ ಪ್ರಸಾರವಾಗಿ ಇದು ಇಡೀ ಅರಣ್ಯವನ್ನು ವ್ಯಾಪಿಸಿಕೊಳ್ಳುತ್ತಿದೆ.

par

ಮಳೆಬಿದ್ದಾಗ ಗರಿಕೆಹುಲ್ಲು ಸೇರಿದಂತೆ ಹಲವು ಜಾತಿಯ ಸಣ್ಣಪುಟ್ಟ ಸಸ್ಯಗಳು ಬೆಳೆಯುತ್ತವೆ. ಇವುಗಳನ್ನು ತಿಂದು ಪ್ರಾಣಿಗಳು ಬದುಕುತ್ತವೆ. ಆದರೆ ಲಂಟನಾ ಮತ್ತು ಪಾರ್ಥೇನಿಯಂ ಯಥೇಚ್ಛವಾಗಿ ಬೆಳೆಯುತ್ತಿರುವುದರಿಂದ ಮೇವಿಗೂ ಕೊರತೆಯಾಗಿ ಅರಣ್ಯದಿಂದ ಹೊರಗೆ ಬರಬೇಕಾದ ಸ್ಥಿತಿ ಒದಗಿ ಬಂದಿದೆ. ಭಾರೀ ಪ್ರಮಾಣದಲ್ಲಿ ಬೆಳೆದಿರುವ ಲಂಟಾನ ತೆರವು ಅಷ್ಟು ಸುಲಭದ ಕೆಲಸವಲ್ಲ. ಹಲವು ವರ್ಷಗಳಿಂದ ಅವುಗಳ ತೆರವು ಕಾರ್ಯ ನಡೆಸುತ್ತಾ ಬಂದಿದ್ದರೂ ತಡೆಯಲು ಸಾಧ್ಯವಾಗಿಲ್ಲ. ಅವುಗಳನ್ನು ತೆರವುಗೊಳಿಸಬೇಕಾದರೆ ಕೊಟ್ಯಂತರ ಹಣದ ಅವಶ್ಯಕತೆಯಿದೆ.

ಲಂಟಾನವನ್ನು ಬೇರು ಸಹಿತ ಕಿತ್ತು ತೆಗೆದು ಅರಣ್ಯದಿಂದ ಹೊರಕ್ಕೆ ಸಾಗಿಸಿ ನಾಶ ಮಾಡಬೇಕಿದೆ. ಇದೆಲ್ಲ ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರು ಬೇಕು. ಜತೆಗೆ ಕೋಟ್ಯಂತರ ರೂ. ಅನುದಾನ ಬೇಕು.

ಲಂಟಾನದಿಂದ ಬುಟ್ಟಿ, ಟೀಪಾಯಿ, ಪೆನ್ನು ಮುಂತಾದ ಆಕರ್ಷಕ ವಸ್ತುಗಳನ್ನು ತಯಾರಿಸಬಹುದಾದರೂ, ಅರಣ್ಯದಿಂದ ಹೊರಗೆ ಕೊಂಡೊಯ್ಯಲು ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಹೀಗಾಗಿ ತೆರವುಗೊಳಿಸಿದ ಲಂಟಾನವನ್ನು ರಾಶಿ ಮಾಡಲಾಗಿರುವ ಪ್ರದೇಶದಲ್ಲಿಯೇ ಸುಟ್ಟು ಹಾಕಬೇಕಾಗುತ್ತದೆ. ಬೀಜ ಪ್ರಸಾರ ಬಹುಬೇಗನೇ ನಡೆಯುವುದರಿಂದ ಮಳೆಗಾಲದಲ್ಲಿ ಮತ್ತೆ ಹುಟ್ಟಿಕೊಂಡರೂ ಅಚ್ಚರಿಪಡಬೇಕಾಗಿಲ್ಲ. ಆದರೂ ಎಚ್ಚೆತ್ತುಕೊಂಡು ಇವುಗಳಿಗೆ ಮುಕ್ತಿ ತೋರಿಸದಿದ್ದಲ್ಲಿ ಇತರೆ ಗಿಡಮರಗಳ ನಾಶ ತಪ್ಪಿದಲ್ಲ.

ಚಾಮರಾಜನಗರ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...