Oyorooms IN

Monday, 26th June, 2017 4:06 PM

BREAKING NEWS

ಪ್ರಮುಖ ಸುದ್ದಿಗಳು

ಕುಳ್ಳ ನಾನು.. ಕುಳ್ಳಿ ಅವಳು.. ಒಲವೇ ನಮ್ಮ ಬದುಕು…

SAMALLEST LOVERS

ಪ್ರೀತ್ಸೋರಿಗೆ ಕಣ್ಣಿಲ್ಲ ಅನ್ನೋದು ಹಳೆ ಮಾತು ಆದರೂ ಇದು ಸತ್ಯ ಅನ್ನೋದಕ್ಕೆ ಈ ಪ್ರೇಮಿಗಳು ಉದಾಹರಣೆ ಆಗಬಹುದು ಅನ್ಸುತ್ತೆ, ನಿಜವಾದ ಪ್ರೀತಿಗೆ ಯಾವುದು ಮುಖ್ಯ ಅಲ್ಲ ಸಂಗಾತಿಯೊಬ್ಬಳೇ ಮುಖ್ಯ ಅನ್ನೋದು ಪ್ರತಿ ಹೇಳೋದು ನಿಜ.

ಬ್ರೆಜಿಲ್ ನ ಈತನ ಹೆಸರ ಪೌಲ್ ಗ್ಯಾಬ್ರಿಯಾ, ಎತ್ತರ  3.4 ಇಂಚು, ಲೀಗಲ್ ಅಡ್ವೆಸರ್ ಆಗಿ ಕೆಲಸ ಮಾಡುವ ಪೌಲ್ಗೆ, ಬ್ಯೂಟಿ ಸೆಲ್ಯೂನ್ ನಡೆಸುವ  ಕಟ್ಯೂಷಿಯಾ ಎತ್ತರ 35.2 ಇಂಚು, ಎಲ್ಲರ ಪ್ರೇಮ ಕಥೆಯಂತೆ ಇವರ ಪ್ರೇಮ ಕಥೆಯಲ್ಲಿಯೂ ಮುನಿಸು, ಜಗಳ, ಕೋಪ ಎಲ್ಲವೂ ಇದೆ.

ಇವರ ಪ್ರೇಮ ಕಥೆ ಆರಂಭವಾಗಿದ್ದು 10 ವರ್ಷದ ಹಿಂದೆ, ಆಗಿನ್ನೂ ಅಷ್ಟೊಂದು ಆ್ಯಪ್ ಗಳು ಇರಲಿಲ್ಲ, ಇದ್ದಿದ್ದು ಒಂದೇ ಎಂಎಸ್ ಎನ್  ಮೇಸೇಜರ್ ಅದರ ಮೂಲಕವೇ ನಾನು ಕಟ್ಯೂಷಿಯಾ ಚಾಟ್ ಮಾಡ್ತಾ ಇದ್ವಿ, ಈಕೆಯನ್ನು ನೋಡಿ ತಕ್ಷಣ ಮರುಳಾಗಿದ್ದು ನಾನೇ ಅನ್ನುತ್ತಾನೆ ಪೌಲ್.

ಇಂಟರ್ನೆಟ್ ಮೂಲಕ ಚಾಟ್ ಮಾಡುತ್ತಿದ್ದ ಪೌಲ್, ನನ್ನೊಂದಿಗೆ ಫ್ಲರ್ಟ್ ಮಾಡುತ್ತಿದ್ದಾನೆ ಅನ್ನಿಸತೊಡಗಿತ್ತು ಅದಕ್ಕೆ ಅವನನ್ನು ಬ್ಲಾಕ್ ಮಾಡ್ದೆ, ಒಂದೂವರೆ ವರ್ಷವಾದ್ಮೇಲೆ ಯಾವುದೋ ಬೇಸರದಲ್ಲಿ ಪೌಲ್ನನ್ನು ಅನ್ ಬ್ಲಾಕ್ ಮಾಡ್ದೆ ಅನ್ನುತ್ತಾಳೆ ಕಟ್ಯೂಷಿಯಾ.

ಒಂದೂವರೆ ವರ್ಷದ ನಂತರ ಕಟ್ಯೂಷಿಯಾ ಅನ್ ಬ್ಲಾಕ್ ಮಾಡಿದ ಎರಡು, ಮೂರು ನಿಮಿಷದಲ್ಲೇ ಪೌಲ್, ಕಟ್ಯೂಷಿಯಾಗೆ ಹಾಯ್ ಅಂತ ಮೇಸೇಜ್ ಕಳುಹಿಸುತ್ತಾನೆ, ಹೀಗೆ ಒಂದೂವರೆ ವರ್ಷದ ನಂತರ ಇಬ್ಬರೂ ಚಾಟಿಂಗ್ ಮಾಡಲು ಆರಂಭಿಸುತ್ತಾರೆ.

SAMALLEST LOVERS_Poul

ಚಾಟಿಂಗ್  ಆರಂಭವಾದ ನಾಲ್ಕು ವರ್ಷದ ನಂತರ ಕಟ್ಯೂಷಿಯಾಳನ್ನು ಭೇಟಿ ಮಾಡೋದಕ್ಕೆ ಅಂತಾ 186 ಮೈಲಿ ದೂರದ ಊರಿಗೆ ಹೋಗುತ್ತಾನೆ, ಅಲ್ಲಿ ಪೌಲ್ ಬರುತ್ತಾನೆ ಅಂತಾ ಕಟ್ಯೂಷಿಯಾ ಕಾಯ್ತಾ ನಿಂತಿರೋದಿಲ್ಲ, ಅವಳ ಪಾಡಿಗೆ ಕೆಲಸದಲ್ಲಿ ನಿರತಗಳಾಗಿರುತ್ತಾಳೆ, ಕಟ್ಯೂಷಿಯಾಳನ್ನು ನೋಡಿದ ತಕ್ಷಣ ಪ್ರೀತಿಯಲ್ಲಿ ಬೀಳೋ ಪೌಲ್ ಪ್ರಫೋಸ್ ಮಾಡ್ತಾನೆ.

ಆದರೆ ಕಟ್ಯೂಷಿಯಾ ಮಾತ್ರ ಪೌಲ್ ಪ್ರೀತಿಯನ್ನು ಒಪ್ಪಿಕೊಳ್ಳುವುದೇ ಇಲ್ಲ, ಕಟ್ಯೂಷಿಯಾ ಒಪ್ಪಿಕೊಳ್ಳುವವರೆಗೂ ಪೌಲ್ ಬಿಡಲೇ ಇಲ್ಲ, ಹಿಂದೆ ಹಿಂದೆ ಹೋಗಿ ಅವಳ ಮನಸ್ಸನ್ನು ಗೆದ್ದು, ಮದುವೆಯಾದ, ಈಗ ಪ್ರಪಂಚದ ಅತಿ ಚಿಕ್ಕ ದಂಪತಿಯನ್ನು ಗಿನ್ನಿಸ್ ರೆಕಾರ್ಡ್ ಸಹ ಮಾಡಿದ್ದಾರೆ.

ಮದುವೆಯಾದ ನಂತರವೂ ಕಟ್ಯೂಷಿಯಾ ಬ್ಯೂಟಿ ಸೆಲ್ಯೂನ್ ನಡೆಸುತ್ತಿದ್ದಾಳೆ, ಪೌಲ್ ಸ್ಪೆಷಲ್ ಕಾರನ್ನು ಚಲಾಯಿಸುತ್ತಾ ಆಫೀಸ್ಗೆ ಹೋಗ್ತಾನೆ, ಆ ಸಿಟಿಗೆ ಮೇಯರ್ ಆಗ್ಬೇಕು, ಕುಳ್ಳ ಅನ್ನೋ ಕಾರಣಕ್ಕೆ ನನಗೆ ಯಾರು ಮರ್ಯಾದೆ ಕೊಡೋದಿಲ್ಲ, ಮೇಯರ್ ಆದ್ಮೇಲೆ ಎಲ್ಲರ ಕೈಯಲ್ಲು ಸಲಾಂ ಮಾಡಿಸಿಕೊಳ್ಳಬೇಕೆಂಬ ಗುರಿ ಪೌಲ್ ಹೊಂದಿದ್ದಾನೆ.

ನನ್ನ ಲೈಫ್ನಲ್ಲಿ ಇಂಥ ಬದಲಾವಣೆ ಆಗುತ್ತೇ ಅಂಥ ನಾನು ಅಂದುಕೊಂಡಿರಲಿಲ್ಲ, ನನಗೆ ಸಿಟ್ಟು ಜಾಸ್ತಿ, ಸಿಟ್ಟಲ್ನಲ್ಲಿ ಆ ತಕ್ಷಣಕ್ಕೆ ಏನಾದ್ರೂ ಮಾಡ್ತೀನಿ, ಆದ್ರೆ  ಪೌಲ್ ಆಗಲ್ಲ ಅವನು ಸಿಟ್ಟು ಮಾಡಿಕೊಳ್ಳೋದೇ ಕಡಿಮೆ, ಇಬ್ಬರಿಗೂ ಮಕ್ಕಳೆಂದರೆ ಇಷ್ಟ ಆದ್ರೆ ನನ್ನ ಎತ್ತರದ ಕಾರಣದಿಂದ ಮಕ್ಕಳನ್ನು ಪಡೆಯೋದಕ್ಕೆ ಸಾಹಸ ಮಾಡಬೇಕು ಅನ್ನುತ್ತಾಳೆ ಕಟ್ಯೂಷಿಯಾ.

SAMALLEST LOVERS_

ಎಲ್ಲ ಗಂಡ ಹೆಂಡತಿಯರು ಹೇಗಿದ್ದಾರೋ ನಾವು ಹಾಗೆ ಇದ್ದೇವೆ, ಸಿಟ್ಟು, ಕೋಪ, ಜಗಳ, ಮುನಿಸು, ಸಂತೋಷ ಎಲ್ಲವನ್ನು ನಾವು ಅನುಭವಿಸುತ್ತೇವೆ, ಆದ್ರೆ ಬೇರೆಯವರಿಗಿಂತ ಜಾಸ್ತಿ ಕುಳ್ಳರಿದ್ದೇವೆ ಅಷ್ಟೇ ಅಂತ ನಗುತ್ತಾರೆ, ಪೌಲ್-ಕಟ್ಯೂಷಿಯಾ

                                                                       -ಎಎನ್ನಾರ್

English summary: Paula Gabriel and katyucia have made a happy life together and say they chat and fight like anyone else does with their partner.

 

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...