Oyorooms IN

Saturday, 21st January, 2017 7:33 AM

BREAKING NEWS

ತುಮಕೂರು

ಕಾನೂನು ಮಿತಿ ಮೀರಿದರೆ ಸಹಿಸೋದಿಲ್ಲ: ಎಸ್ಪಿ ಇಶಾ ಪಂತ ಖಡಕ್ ಎಚ್ಚರಿಕೆ

ತುಮಕೂರು: ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ಆಗಮಿಸಿರುವ ಇಶಾಪಂತ್, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾನೂನು ಪಾಲಿಸುವುದು ಅವಶ್ಯಕವಾಗಿದ್ದು, ಕಾನೂನಿನ ಮಿತಿ ಮೀರಿದರೆ ಸುಮ್ಮನೆ ಇರುವುದಿಲ್ಲ ಎಂಬ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಟಫ್ ಪೊಲೀಸ್ ಆಫೀಸರ್ ಎಂದೇ ಹೆಸರಾಗಿರುವ ಇಶಾ ಪಂತ್, ತುಮಕೂರು ಜಿಲ್ಲೆಯನ್ನು ಕಾಡುತ್ತಿರುವ ಮರಳು ದಂಧೆ, ಮಟ್ಕಾ ದಂಧೆ, ಮಾನವ ಕಳ್ಳಸಾಗಣೆ, ಟ್ರಾಫಿಕ್ ಸಮಸ್ಯೆ ಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುವುದು, ಮಹಿಳೆಯರ ಸುರಕ್ಷತೆಗಾಗಿಯೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜಕೀಯ ಒತ್ತಡದೊಂದಿಗೆ ಕೆಲಸ ಮಾಡುವುದು ಅನಿವಾರ್ಯವಾಗಿದ್ದು, ಕಾನೂನಿನ ಪರಿಧಿಯನ್ನು ಮೀರಿದರೆ ಯಾವುದೇ ಒತ್ತಡಕ್ಕೂ ಮಣಿಯದೇ ಕೆಲಸ ನಿರ್ವಹಿಸುವುದಾಗಿ ಹೇಳಿದ ಇಶಾ ಪಂತ್ ಅವರು, ತುಮಕೂರು ನಗರದಲ್ಲಿರುವ ಟ್ರಾಫಿಕ್ ಸಮಸ್ಯೆಯನ್ನು ಬಗಹರಿಸುವ ನಿಟ್ಟಿನಲ್ಲಿ, ಒಂದು ವಾರದೊಳಗೆ ನಿಯಮಗಳನ್ನು ರೂಪಿಸಲಾಗುವುದು, ಸಂಚಾರದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಜಿಲ್ಲೆಯಲ್ಲಿ ಅವ್ಯಾಹವತವಾಗಿರುವ ಮರಳುದಂಧೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಚೆಕ್ ಪೋಸ್ಟ್ ಹಾಕುವ ಬಗ್ಗೆ ತೀರ್ಮಾನಿಸಲಾಗುವುದು ಎಂದ ಅವರು ಮಹಿಳೆಯರ ರಕ್ಷಣೆ ಕುರಿತು ಯೋಜನೆಯೊಂದನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು. ತುಮಕೂರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯುವುದಿಲ್ಲ, ನಾಲ್ಕು ತಿಂಗಳ ಬಳಿಕ ಏನೆಲ್ಲಾ ಬದಲಾಗಿರುತ್ತದೆ ಎನ್ನುವುದನ್ನು ಕಾದು ನೋಡಿ ಎಂದಿದ್ದಾರೆ.

ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜನರೊಂದಿಗೆ ನಿಕಟ ಸಂಪರ್ಕ ಹೊಂದುವುದು ಅಗತ್ಯ, ನನ್ನ ಕಚೇರಿಗೆ ಜನರು ಮುಕ್ತವಾಗಿ ಬರಬಹುದು, ಜನರ ಸೇವೆ ಮಾಡಲು ನಾನಿರುವುದು ಎಂದು, ಜನರು ಯಾವುದೇ ವೇಳೆಯಲ್ಲಿ ಆದರೂ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ ನೂತನ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್.

English summary: people friendly police administration, I am not care about political pleasure

ತುಮಕೂರು ಇನ್ನಷ್ಟು

ಪ್ರಮುಖ ಸುದ್ದಿಗಳು