Oyorooms IN

Wednesday, 29th March, 2017 10:52 AM

BREAKING NEWS

ಪ್ರಮುಖ ಸುದ್ದಿಗಳು

ಲಕ್ಷ ಲಕ್ಷ ನುಂಗಿದವರು 4 ಸಾವಿರಕ್ಕಾಗಿ ಕ್ಯೂ ನಿಲ್ಲಬೇಕಾಯಿತು: ಪ್ರಧಾನಿ ಮೋದಿ

modi-in-kle-belagavi

ಬೆಳಗಾವಿ: ಕಲ್ಲಿದ್ದಲು ಹಗರಣ, 2ಜಿ ಹಗರಣದಲ್ಲಿ ಲಕ್ಷ ಲಕ್ಷ ಕೋಟಿ ನುಂಗಿದವರು 4000 ಸಾವಿರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು, ಕಾಂಗ್ರೆಸ್ ಅಧಿಕಾರವಧಿಯಲ್ಲಿ ನಿಷೇಧಮಾಡಿದ್ದು ಬಡವನಿಗೆ ಸಂಬಂಧಿಸಿದ 25 ಪೈಸೆಯನ್ನು ನಾವು ರದ್ದುಗೊಳಿಸಿದ್ದು ಶ್ರೀಮಂತನ 500, 1000 ರೂಪಾಯಿ ನೋಟುಗಳನ್ನು, ಇದರಿಂದ ಬಡವರು ಚೆನ್ನಾಗಿ ನಿದ್ದೆ ಮಾಡಿದರೆ, ಕಪ್ಪುಹಣ ಹೊಂದಿರುವವರ ನಿದ್ದೆ ಮಾಯಾವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಬೆಳಗಾವಿಯ ಕೆಎಲ್ಇ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ವಿಶ್ವದ 100 ಟಾಪ್ ವಿವಿಗಳ ಸಾಲಿನಲ್ಲಿ  ಭಾರತವಿಲ್ಲ, ನಮ್ಮ ದೇಶದ ಖಾಸಗಿ ವಿವಿಗಳು, ಸರಕಾರಿ ವಿವಿಗಳು ವಿಶ್ವದ ಶ್ರೇಷ್ಠ ವಿವಿಗಳ ಸಾಲಿಗೆ ಸೇರಬೇಕು ಇದು ನಮ್ಮ ಗುರಿಯಾಗಬೇಕು ಎಂದು ಅಭಿಪ್ರಾಯಪಟ್ಟರು, ಕೆಎಲ್ಇ 100 ವರ್ಷಗಳಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವ ಮೂಲಕ ಮಹತ್ವದ ಕಾರ್ಯವನ್ನು ಮಾಡಿದೆ ಎಂದರು.

1000 ವರ್ಷಗಳ ಹಿಂದೆಯ ತಳ ಮಟ್ಟದ ಜನರನ್ನು ತಲುಪುವ ಪ್ರಯತ್ನಗಳನ್ನು ಬಸವೇಶ್ವರರು ನಡೆಸಿದರು ಎಂದು ಬಸವಣ್ಣನವರನ್ನು ಸ್ಮರಿಸಿದ ಪ್ರಧಾನಿ,  2020  ಟೊಕಿಯೋ ದ ಒಲಿಂಪಿಕ್ ನಲ್ಲಿ ಭಾರತಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಕೆಎಲ್ಇ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಗೆದ್ದು ತರಬೇಕೆಂದು ನಿಮ್ಮಲ್ಲಿ ನಾನು ಬೇಡಿಕೊಳ್ಳುವುದಾಗಿ ಹೇಳಿದ ಪ್ರಧಾನಿ. ನೋಟು ರದ್ದಿನಿಂದ ಹಗಲಿರುಳು ಕೆಲಸ ನಿರ್ವಹಿಸುತ್ತಿರುವ ಬ್ಯಾಂಕ್ ಸಿಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

modi-in-kle-belagavi_

70 ವರ್ಷ ದೇಶವನ್ನು ಭಾರೀ ಲೂಟಿ ಮಾಡಿದ್ದಾರೆ,ನನಗೆ 70 ತಿಂಗಳು ಕೋಡಿ ಲೂಟಿ ಮಾಡಿರುವುದನ್ನುಸ್ವಚ್ಛ ಮಾಡಿ ತೋರಿಸುತ್ತೇನೆ.ನನ್ನ ಪ್ರಾಮಾಣಿಕತೆಯ ಮೇಲೆ ನಂಬಿಕೆ ನಿಮಗಿದ್ದರೆ ನನಗೆ ಎದ್ದು ನಿಂತು ಆಶೀರ್ವಾದ ಮಾಡುವಂತೆ ಕೋರಿದರು, ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳು, ಜನರು ಎದ್ದು ನಿಂತು ಮೋದಿ ಅವರ ಮಾತಿಗೆ ಬೆಂಬಲ ಸೂಚಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ ಸೇರಿದಂತೆ ಹಲವರು ಸಮಾರಭದಲ್ಲಿ ಉಪಸ್ಥಿತರಿದ್ದರು.

English summary: pm narendra modi inaugurate  kle function at belagavi

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...