Oyorooms IN

Monday, 20th February, 2017 4:18 AM

BREAKING NEWS

ಧಾರವಾಡ

ಹುಬ್ಬಳ್ಳಿಯಲ್ಲಿ ಸಿಕ್ಕ 60 ಲಕ್ಷಕ್ಕೂ  ಗಾಲಿ ಜನಾರ್ದನ ರೆಡ್ಡಿಗೂ ಸಂಬಂಧ?

gali-janardhan-reddy

ಹುಬ್ಬಳ್ಳಿ: ಹೊಸಪೇಟೆಯಿಂದ ಬರುತ್ತಿದ್ದ ಕಾರೊಂದರಲ್ಲಿ ಸಿಕ್ಕಿರುವ 60 ಲಕ್ಷ ಹಣ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸೇರಿದ್ದು ಎನ್ನುವ ಸುದ್ದಿ ಹರದಾಡುತ್ತಿದ್ದು, ಕಾರಿನಲ್ಲಿ ಸಾಗುತ್ತಿದ್ದ ಹಣವನ್ನು ಕೇಶ್ವಾಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹೊಸಪೇಟೆಯ ಪ್ರವೀಣ್ ಜೈನ್ ಹಾಗೂ ಶ್ರೀನಿವಾಸಮೂರ್ತಿ ಅವರು ಹಣವನ್ನು ವಿನಿಮಯ ಮಾಡಿಕೊಳ್ಳುವ ಸಲುವಾಗಿ ಹೊಸಪೇಟೆಯಿಂದ ಹುಬ್ಬಳ್ಳಿಗೆ ಹೋಗುತ್ತಿರಬೇಕಾದ್ರೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದ್ದು, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ತಮ್ಮ ಮಗಳ ಮದುವೆಗಾಗಿಯೇ ಈ ಹಣ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ 40 ಪರ್ಸೆಂಟ್ ಬದಲಿ ಹಣ ನೀಡುವುದಾಗಿ ಯಾರೋ ಹೇಳಿದ್ದರಿಂದ ಪ್ರವೀಣ್ ಜೈನ್ ಹಣವನ್ನು ತೆಗೆದುಕೊಂಡು ಹುಬ್ಬಳ್ಳಿಗೆ ಹೋಗಿ ವಾಪಾಸ್ ಹೊಸಪೇಟೆಗೆ ಬರುತ್ತಿದ್ದಾಗ ಸ್ಕಾರ್ಪಿಯೋ ಕಾರಿನಲ್ಲಿದ್ದ ಹಣದೊಂದಿಗೆ ಪ್ರವೀಣ್ ಜೈನ್, ಶ್ರೀನಿವಾಸಮೂರ್ತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಕಾರಿನಲ್ಲಿ 500, 1000 ಬೆಲೆಯ ಲಕ್ಷ ಹಣವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

English summary: police seized 60 lakh amount linked with janaradhan reddy

ಧಾರವಾಡ ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...