Oyorooms IN

Monday, 16th January, 2017 8:35 PM

BREAKING NEWS

ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ , ದೀಪಿಕಾ ಅಂಗ ಪ್ರದರ್ಶನ ನೋಡಿದ್ರೆ ಶಾಕ್ ಆಗ್ಲೇಬೇಕು..! ,

ಪ್ರಮುಖ ಸುದ್ದಿಗಳು

ಕಪ್ಪು ಕುಬೇರರಿಗೆ ರಾಜಕೀಯ ನಾಯಕನ ಬಂಪರ್ ಆಫರ್..!!

ಆಂಧ್ರಪ್ರದೇಶ: ರಾಜ್ಯದ ನೆಲ್ಲೂರು ಜಿಲ್ಲೆಯ ಬ್ಲ್ಯಾಕ್ ಮನಿಶೂರರಿಗೆ ರಾಜಕೀಯ ಮುಖಂಡನೊಬ್ಬ ಬಂಪರ್ ಆಫರ್ ನೀಡಿದ್ದಾರೆ, ಬಡ್ಡಿ ಇಲ್ಲದಂತೆ ಹಳೆ ನೋಟುಗಳನ್ನು ಸಾಲವನ್ನಾಗಿ ಸ್ವೀಕರಿಸಿ, ಎರಡು ವರ್ಷದ ನಂತರ ವಾಪಾಸ್ ನೀಡುತ್ತೇನೆ ಎಂದು ಪ್ರಕಟಿಸಿದ್ದರಿಂದ ಆ ನಾಯಕನ ಮನೆ ಮುಂದೆ ಜನರ ದಂಡು ನೆರೆದಿದೆಯಂತೆ.

ಉದ್ಯಮಿಗಳು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಕಪ್ಪುಕುಬೇರರು ಹಣದೊಂದಿಗೆ ಆತನ ಮನೆ ಮುಂದೆ ನಿಂತಿದ್ದಾರಂತೆ, ಈ ರೀತಿ ಸಾಲ ಪಡೆದುಕೊಳ್ಳುವುದಾಗಿ ಪ್ರಕಟಿಸಿದ ನಂತರ ಸುಮಾರು 100 ಕೋಟಿಗಿಂತಲೂ ಹೆಚ್ಚು ಹಣವನ್ನು ಸಾಲವನ್ನಾಗಿ ಪಡೆದುಕೊಂಡಿದ್ದಾರೆ ಎನ್ನುವ ಸಮಾಚಾರ ಆಂಧ್ರದಲ್ಲಿ ಭಾರೀ ಸದ್ದು ಮಾಡುತ್ತಿದೆ.

balck-money

ಈ ರೀತಿ ಸಾಲವನ್ನು ಪಡೆಯುತ್ತೇನೆ ಎಂದು ಹೇಳಿರುವ ನಾಯಕ ಯಾರು, ಯಾವ ಪಕ್ಷ ಎನ್ನುವುದು ತಿಳಿದುಬಂದಿಲ್ಲ, ಆದರೆ ಕಳೆದ 10 ದಿನಗಳಿಂದ ಈ ವ್ಯವಹಾರ ನಡೆಯುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ಆ ರಾಜಕೀಯ ಮುಖಂಡ ರೂಪಾಯಿ ಬಡ್ಡಿಗೆ ಹಣವನ್ನು ಸಾಲ ಪಡೆದುಕೊಳ್ಳುತ್ತಿದ್ದರಂತೆ.

ನೋಟು ರದ್ದು ಎಫೆಕ್ಟ್ ನಿಂದ ಸೋಮವಾರ ಸಂಜೆಯಿಂದ ಬಡ್ಡಿ ಇಲ್ಲದಂತೆ ಹಳೆನೋಟುಗಳನ್ನು ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದು, ಆ ಮುಖಂಡನ ಮನೆ ನೆಲ್ಲೂರಿನಿಂದ 7 ದೂರದಲ್ಲಿ, ಮುತುಕೂರು ರಸ್ತೆಯಲ್ಲಿದೆ ಎಂದು ಆಂಧ್ರದ ಮಾಧ್ಯಮಗಳು ವರದಿ ಮಾಡಿದೆ.

ಕೆಲವು ಆಡಿಟರ್ ಗಳು ಹೊಸ ದಂಧೆ ಶುರು ಮಾಡಿದ್ದು, ಪ್ರೈವೇಟ್ ಬ್ಯಾಂಕ್ ಮ್ಯಾನೇಜರ್ ಗಳೊಂದಿಗೆ ಮಾತನಾಡಿ ಹಳೇನೋಟು, ಕಪ್ಪಹಣವನ್ನು ವೈಟ್ ಆಗಿ ಬದಲಾಯಿಸುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದು, 30 % ಕಮೀಷನ್ ನೀಡಬೇಕೆಂದು ಡಿಮ್ಯಾಂಡ್ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಬ್ಯಾಂಕ್ ಸಿಬ್ಬಂದಿಗೆ 20%, ಆಡಿಟರ್ ಗೆ 5% ಉಳಿದ 5% ಅನ್ನು ಖರ್ಚಿಗೆ ಎಂದು ಆಡಿಟರ್ ಹೇಳುತ್ತಿದ್ದಾರಂತೆ.

English summary: political leader  open offer for black money holders

ಪ್ರಮುಖ ಸುದ್ದಿಗಳು ಇನ್ನಷ್ಟು