Oyorooms IN

Saturday, 22nd July, 2017 4:27 PM

BREAKING NEWS

ಕಥೆ

 ಬದುಕಿನ ವಿಫಲ ಪ್ರೇಮದ ನೆನಪಿನ ಪುಟಗಳಲ್ಲೊಂದು ಸುತ್ತು

232

ಬೆಂಗಳೂರು ಎಂಬ ಮಾಯಾ ಲೋಕದಿಂದ ಹೊರ ಬಿದ್ದು ಇಂದಿಗೆ 3 ವಸಂತಗಳು ಸಂದಿಸಿವೆ. ಅಂದಿನ ಮನಸ್ಥಿತಿ ಅಲ್ಲಿ ಅನುಭವಿಸಿದ ಯಾತನೆ, ನೋವು, ಪ್ರೀತಿ ಎಂಬ ಮಹಾ ಕ್ರೂರಿಯಲ್ಲಿ ಸಿಕ್ಕು ನಲುಗಿದ ಮನಸ್ಸು, ಇಂದು ಸುಭ್ರಗೊಂಡರು ನೆನಪುಗಳ ದಾಳಿ ಮುಂದುವರಿಯುತ್ತಲೇ ಇದೆ. ಬಿ.ಜಿ.ಎಸ್ ಗ್ಲೊಬಲ್ ಅಸ್ಪೇಟಲ್ ನಲ್ಲಿ ಕಳೆ ಆ ದಿನಗಳು, ಕೆಂಗೇರಿ, ಉತ್ತರ ಹಳ್ಳಿ, ವಿಷ್ಣುವರ್ಧನ್ ರವರ ಸಮಾಧಿ, ದಿನ ಸಂಜೆ ಗೆಳೆಯರ ಜೊತೆ ಸೇರಿ ಕೊಡಿಪಾಳ್ಯಕ್ಕೆ ನಡೆದುಕೊಂಡು ಹೋಡಾಡಿದ ದಿನಗಳು ಅವಳನ್ನು ನೊಡಲೆಂದು ಮಧ್ಯರಾತ್ರಿ ಎನ್ನದೆ ನೆನೆದಾಗಲೆಲ್ಲ ಅವಳ ಮನೆಯಮುಂದೆ ಹಾಜರಾಗುತ್ತಿದ್ದ ಆ ದಿನಗಳು, ಎಷ್ಟೊಂದು ನೆನಪುಗಳು ಸಾಗರದಂತೆ ದುಮ್ಮಿಕ್ಕಿಬಿಟ್ಟಾಗ ಮನಸು ಭಗ್ನಗೊಳ್ಳದೆ ಇರುವುದೇ?

ಆ ಜಾಗವನ್ನು ಮರೆತರು ಪುಟ್ಟಗೌರಿ ಮದುವೆ ಧಾರವಾಹಿ ನೋಡುತ್ತಿದ್ದಾಗ ಅಲ್ಲಿನ ಕೆಲವು ಸ್ಥಳಗಳು ಕಣ್ಣಿಗೆ ಬೀಳುತ್ತಿರುತ್ತವೆ, ಮತ್ತದೆ ಅಳೆಯ ನೆನಪುಗಳಿಗೆ ಮನಸು ಜಾರುತ್ತಿರುತ್ತದೆ.

ಬಿ.ಎ. 2ನೇ ವರ್ಷದ ಅಂತಿಮದಲ್ಲಿ ಬೆಂಗಳೂರು ಎಂಬ ಮಾಯಲೋಕ ಕೈ ಬಿಸಿ ಕರೆದಾಗ ಮನೆಯವರಿಗೂ ಹೇಳದೆ ಕಾಲ್ಕಿತ್ತಿದ್ದೆ. ಎಷ್ಟೊಂದು ಕನಸುಗಳನ್ನು ಕಟ್ಟಿಕೊಂಡು ಬೆಂಗಳೂರಿಗೆ ಓಡಿಹೊದೇನೊ ಅಷ್ಟೇ ನೋವುಗಳನ್ನನುಭವಿಸಿದೆ. ಗೆಳೆಯನೊಬ್ಬ ಆಸ್ಪೇಟಲ್ನಲ್ಲಿ ಕಂಪ್ಯೂಟರ್ ಕೆಲಸ ಇದೆ ಬಾ ಎಂದ. ತಡ ಮಾಡದೆ ಹೊರಟವನಿಗೆ ವಾರವಾದರು ಕೆಲಸ ಸಿಗಲೆ ಇಲ್ಲ. ಬೇರೆ ವಿಧಿ ಇಲ್ಲದೆ ಕಾಲೇಜಿನ ಹಾಸ್ಟಲ್ ನಲ್ಲಿ ಚಪಾತಿ ಮಾಡುವ ಕೆಲಸಕ್ಕೆ ಸೇರಿಕೊಂಡೆ. ದಿನಕಳೆದಂತೆ ಚಪಾತಿ ಮಾಡುವದರಿಂದ ಆರಂಭವಾದ ಕೆಲಸ ಮುಖ್ಯ ಅಡಿಗೆ ಬಟನಾಗುವವರೆಗು ಸಾಗಿತ್ತು. ಇಂಜಿನಿಯರ್ ಲೇಡೀಸ್ ಹಾಸ್ಟಲ್ ಮತ್ತು ನರ್ಸಿಂಗ್ ಲೇಡೀಸ್ ಹಾಸ್ಟಲ್ ಗಳಲ್ಲಿ ಮುಖ್ಯ ಬಟನಾಗಿ ಕೇಲಸಮಾಡಿದ್ದು ಈಗ ನೆನಪು ಮಾತ್ರ.

ಈಗೆ ಕೆಲಸ ಮುಗಿಸಿಕೊಂಡು ಬಿ.ಜಿ.ಎಸ್ ನರ್ಸಿಂಗ್ ಹಾಸ್ಟಲ್ ನಿಂದ ಹೊರ ಬಿದ್ದು ಸಂಜೆ ನಾನು ಉಳಿದುಕೊಂಡಿದ್ದ ಹಾಸ್ಟಲ್ಗೆ ಹೊಗವಾಗ ಅಸ್ಪೇಟಲ್ ನ ಆ ಇಳಿಜಾರಿನಲ್ಲಿ ಕಂಡವಳೆ ಆ ನೀಲಿ ಸೀರೆಯ ನೆರೆಗೆಯ ಹುಡುಗಿ. ಆಗ ತಾನೆ ಅವಳು ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದಳು. ಅದೇಕೊ ನನ್ನ ಕಣ್ಣಿಗೆ ಬಿದ್ದಳೊ ಹಾಗೆ ಅವಳ ಕಣ್ಣುಗಳಿ ನಾನು ಬಿದ್ದೆ ಮೊದಲ ದಿನವೇ ನಯನಗಳು ಕಲೆತಾಗಿತ್ತು. ತಿಂಗಳು ಮುಗಿಯುವ ಹೊತ್ತಿಗೆ ನಮ್ಮಿಬ್ಬರ ಪ್ರೇಮ ಇಬ್ಬರಿಗೂ ಗೊತ್ತಾಗಿತ್ತು. ನಮ್ಮಿಬ್ಬರಿಗೂ ನಮ್ಮ ನಮ್ಮ ಆಸೆ ಅಭಿಲಾಷೆಗಳು ಸಮ್ಮಿಲನಗೊಂಡಿದ್ದವು. ಅವಳದು ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದಿಹಾಳ. ನಾನು ಪ್ರತಿ ದೀನ ಬೆಟಿ ಹಾಗುತ್ತಲೆ ಇದ್ದೆವು. ಇದು ದಿನ ಕಳೆದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಜೊತೆಯವರಿಗೂ ತಿಳಿದು ನಮ್ಮ ಮೆಲಾಧಿಕಾರಿಗಳಿಗು ವಿಷಯ ಗೊತ್ತಾಗಿತ್ತು. ಅಲ್ಲಿಗೆ ನಮ್ಮ ಪ್ರೇಮದ ಮೊದಲ ಯುದ್ಧ ಶುರುವಾಯಿತು.

ನಮ್ಮ ಮೇಲಾಧಿಕಾರಿಗಳು ನಮ್ಮಿಬ್ಬರನ್ನು ದೂರ ಇಡುವ ಪ್ರಯತ್ನದಲ್ಲಿ ವಿಫಲರಾದಗ ಅವಳ ಮನೆಯವರಿಗೆ ವಿಷಯ ಮುಟ್ಟಿಸಿದರು. ಅಲ್ಲಿಗೆ ನಮ್ಮ ಪ್ರೇಮಕ್ಕೆ ನಿಜವಾದ ಯುದ್ಧ ಶುರುವಾಯಿತು. ನಾನು ನಮ್ಮ ಮನೆಯಲ್ಲಿ ವಿಷಯ ತಿಳಿಸಿದೆ ಮೊದಲು ಒಪ್ಪದವರು ಕ್ರಮೇಣ ಒಪ್ಪಿಕೊಂಡರು. ಆದರೆ ಅವರ ಮನೆಯವರು ಇದಕ್ಕೆ ಒಪ್ಪಲೇ ಇಲ್ಲ. ನನಗೆ ಕೊಲೆ ಬೆದರಿಕೆ ಬಂದವು. ಜೊತೆ ಕೆಲಸ ಮಾಡುವವರು ನನ್ನನ್ನು ಕೆಲಸದಿಂದ ಕಿತ್ತೊಗೆಯಬೆಕೆಂದು ಹೊಂಚು ಹಾಕಿ ಕುಳಿತಿದ್ದರು. ಆದರೆ ಅದಕ್ಕಾವುದಕ್ಕು ತಲೆಕೆಡಿಸಿಕೊಳ್ಳದ ನಾವು ನಮ್ಮ ಪ್ರಯತ್ನ ಮಾಡುತ್ತಲೇ ಇದ್ದೆವು. ಕೊನೆಗೊಂದು ದಿನ ಮದುವೆಯ ಪ್ರಸ್ತಾಪವನ್ನಿಟ್ಟವಳು ಮರುದಿನವೇ ಮೆಜೆಸ್ಟ್ರಿಕ್ ನಲ್ಲಿ ಸಿಕ್ಕಳು ನಾವು ಮೊದಲು ಅವರ ಊರು ನಂದಿಹಾಳಕ್ಕೆ ಪ್ರಯಾಣ ಬೆಳಸಿ ಅಲ್ಲಿದ್ದ ಅವರ ಸಹೊದರರ ಮನ ಒಲಿಸಲು ಪ್ರಯತ್ನಿಸಿ ಯಶಸ್ವಿಯುತವಾಗಿ ಹಿಂತಿರುಗಿದ್ದೆವು. ಮತ್ತೆ ಬಂದು ತಾವರೆಕೆರೆಯ ಅತ್ತಿರವಿರುವ ಸೂಲಿಕೆರೆಯಲ್ಲಿ ನಮ್ಮ ಸಂಬಂಧಿಕರ ಮನೆಯಲ್ಲಿರಿಸಿ ನಾನು ಮೊದಲ ದಿನ ಕೆಲಸಕ್ಕೆ ಹೋದಾಗ ಅವರ ಅಣ್ಣ ಮತ್ತು ಗೆಳೆಯರು ಬಂದು ಅವಳನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದರು. ಸಂಜೆ ಬಂದವನಿಗೆ ಅವಳಿಲ್ಲವೆಂದು ತಿಳಿದಾಗ ಅವಳಿಗೆ ಪೋನ್ ಮಾಡಿದೆ ವಾರದೊಳಗೆ ಬರುವೆ ಎಂದವಳು ತಿಂಗಳಾದರು ಬೆಲೆ ಇಲ್ಲ. ನಾನು ನಾಲ್ಕಾರು ಬಾರಿ ಅವಳಿದ್ದಲ್ಲಿ ಹೋಗಿ ಕರೆದು ಬಂದೆ ಕೊನೆಗೊಂದು ದೀನ ಅವಳಣ್ಣ ಇದ್ದಾಗ ಹೋಗಿ ಕೇಳಿದರೆ ನಮ್ಮಿಬ್ಬರಿಗೂ ಜಗಳ ಆರಂಭವಾಯಿತು. ಏನಾದರಾಗಲಿ ಕರೆದುಕೊಂಡು ಹೋಗಬೆಕೆಂದವನ ಕಿವಿಗಳಿಗೆ “ನಾನು ಬರುವುದಿಲ್ಲ ಹೊರಟು ಹೋಗು” ಎಂಬ ಮಾತು ಕಿವಿಗೆ ಬಿಳುತ್ತಿದ್ದಂತೆ ಒಮ್ಮೆ ತಟಸ್ಥನಾದೆ.

ಯಾರು ಹೇಳಿದರಿಮಾತನ್ನು ಎಂದು ಯೋಚಿಸ ಬೇಕಾಗಿದ್ದಿಲ್ಲ ಅವಳೆ ಹೇಳಿದ್ದಳು. ಪರಿಪರಿಯಾಗಿ ಬೆಡಿಕೊಂಡರು ಕರಗಲಿಲ್ಲ. ಯಾಕೆಂದು ಇವತ್ತಿಗೂ ತಿಳಿದಿಲ್ಲ. ಅಲ್ಲಿಂದ ಹೊರ ಬಿದ್ದವನು ಮತ್ತೆ ಮನಸು ಬದಲಿಸಿಯಾಳೇನೊ ಎಂದು ಒಂದು ತಿಂಗಳು ಕಾದು ಕುಳಿತೆ ನೋ ಅಂತಲ್ಲಿಂದ ಯಾವ ಪ್ರತಿಕ್ರಿಯೆಗಳು ಬಾರದಿದ್ದಾಗಲೆ, ಬದುಕು ಹಾಯ್ ಎಂದು ನನ್ನ ಮುಂದೆ ನಿಂತಿತ್ತು. ಅವಳು ಬರುವೆ ಎಂದಿದ್ದರೆ ಇವತ್ತಿನವರೆಗೂ ಕಾಯುತ್ತಿದ್ದೆನೇನೊ ಆದರೆ ಅವಳು ಬರುವುದಿಲ್ಲವೆಂದು ನನ್ನನ್ನು, ನನ್ನ ಬದುಕನ್ನು ಸಂಪೂರ್ಣವಾಗಿ ಕೊಂದು ಸಮಾದಿಮಾಡಿದ್ದಳು.

ಕತ್ತಲು ಮನೆಯ ಹಿತ್ತಲಿನಲ್ಲಿ ನೋವಿನ ನೆನಪುಗಳಲ್ಲಿ ದಿನ ದೂಡುತ್ತಿದ್ದವನನ್ನ ಕೈ ಹಿಡಿದು ನಡೆಸಲೆಂದು ಬದುಕು ಎಷ್ಟೇ ಪ್ರಯತ್ನಿಸಿದರು ವಿಫಲವಾಗಿ ನನ್ನ ನೋವಿನ ಮುಂದೆ ಬದುಕೇ ಸೋತು ಬಳಲಿ ಸುಮ್ಮನಾಗಿತ್ತು. ಇನ್ನು ಒಂದು ವಾರ ಕಳೆದಿದ್ದರೆ ನಾನು ಏನಾಗುತಿದ್ದೆನೋ ತಿಳಿಯದು. ನಮ್ಮ ಸಂಬಂಧಿಕರ ನೆರವಿನಿಂದ ನನ್ನ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಒಂದು ಮುಂಜಾವಿಗೆ ನಮ್ಮ ಅಪ್ಪ ನನ್ನ ಮುಂದೆ ಬಂದು ನಿಂತಿದ್ದ. ಅವನು ಬಂದಿದ್ದು ಅದೆ ಮೊದಲ ಬಾರಿ ಬೆಂಗಳೂರಿಗೆ ಅದೇಗೆ ಹುಡಿಕೊಂಡು ಬಂದನೊ ಆಶ್ಚರ್ಯ. ಇಷ್ಟೆಲ್ಲಾ ನೊಂದಿದ್ದ ನಾನು ಒಮ್ಮೆಯು ಸಾಯುವ ಪ್ರಯತ್ನ ಮಾಡಲಿಲ್ಲ. ಕುಡಿತಕ್ಕೆ ದಾಸನಾಗಲಿಲ್ಲ. ಅವಳನ್ನು ಎಂದು ಬೈಯ್ಯಲೆ ಇಲ್ಲ. ನಿಂದಿಸಲೆ ಇಲ್ಲ. ಇಂದಿಗು ಅವಳು ನನ್ನೊಳಗೆ ಸುಭ್ರ, ಸ್ವಚ್ಛ ಮನಸ್ಸಿನ ಸುಂದರ ಹುಡುಗಿ. ಅದ್ಯಾವ ಪರಿಸ್ಥಿತಿಯಲ್ಲಿ ಆ ಮಾತು ನುಡಿದಳೊ ತಿಳಿಯದು. ಅಂತು ಎಲ್ಲವು ನನ್ನನ್ನು ಕೈ ಬಿಟ್ಟಾಗ ಕೈ ಹಿಡಿದವನೆ ಅಪ್ಪ my God father.

ಅವನನ್ನ ಕಂಡಾಗ ಸೋಲಿಗೆ ಶರಣಾಗಿದ್ದ ನನ್ನ ಕಂಗಳಲ್ಲಿ ನೀರು ತನಗರಿವಿಲ್ಲದೆ ಜಾರಿದ್ದವು. ಅವನನ್ನು ಕಂಡಾಗಲೆ ಅಷ್ಟು ದಿನದಿಂದ ಕಟ್ಟೆ ಕಟ್ಟಿ ಬಂದಿಸಿದ್ದ ನನ್ನ ನೋವಿನ ಕಟ್ಟೆ ಹೊಡೆದಿತ್ತು ಮನಸು ಸಾಕೆನ್ನುವಷ್ಟು ಅತ್ತಿದ್ದೆ. ಸುಮ್ಮನೆ ನಿಂತು ನನ್ನನ್ನೇ ನೋಡುತಿದ್ದ ಅಪ್ಪನ ಕಂಗಳಲ್ಲಿ ಮೊದಲ ಬಾರಿಗೆ ಕಣ್ಣಿರನ್ನು ನೋಡಿದ್ದೆ. ಆದರೆ ಅವನ್ನು ಜಾರದಂತೆ ನೋಡಿಕೊಂಡಿದ್ದ ಅಪ್ಪ. “ಹೊದವಳು ಹೊಗಲಿ ಸೊತವನು ನೀನಲ್ಲ, ಅವಳು ಬಾ ಹೋಗೋಣ ಬದುಕು ಇಷ್ಟಕ್ಕೆ ಮುಗಿಯುವುದಿಲ್ಲ” ಎಂದು ನನ್ನನ್ನ ಬೆಂಗಳೂರು ಎಂಬ ಕ್ರೂರ ಜಗತ್ತಿನಿಂದ ಹೊರತಂದು ಇಂದಿಗೂ ಅತ್ತ ಹೋಗದಂತೆ ಕಾಯುತ್ತಿದ್ದಾನೆ.

ಸೋತು ನನ್ನೂರಿಗೆ ಹಿಂತಿರುಗಿದಾಗ ಸಂಬಂಧಿಸರೆನಿಸಿಕೊಂಡವರು ನನ್ನನ್ನ ಎಷ್ಟು ಅವಮಾನಿಸಿದರೆಂದರೆ ಅಷ್ಟೆಲ್ಲ ನೋವುಗಳಿಗಿಂತ ಇವರು ಕೊಡುತ್ತಿದ್ದ ಮಾತಿನ ಚಾಟಿ ಏಟಿಗೆ ನಲುಗಿ ಹೋಗಿದ್ದೆ. ಅಲ್ಲಿ ನನ್ನ ಜೊತೆ ಕೆಲಸ ಮಾಡುತ್ತಿದ್ದ ನನ್ನೂರಿನವರು ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುವ ನಮ್ಮೂರಿನವರು ಒಂದು ಕಥೆ ಕಟ್ಟಿದ್ದರು. ನಾನು ಪ್ರೀತಿಸಿ ಹುಡುಗಿಗೆ ಮೊದಲೆ ಮಧುವೆಯಾಗಿತ್ತು ಅವಳಿಗೆ ಇಬ್ಬರು ಮಕ್ಕಳಿಂದರೆಂದು ಈ ಕತೆ ನಮ್ಮೂರಿನ ಮೂರ್ಖರಮುಂದೆ ಎಷ್ಟೊಂದು ಅವಮಾನಿಸಿತೆಂದರೆ ಮನೆ ಬಿಟ್ಟು ವರ್ಷಗಟ್ಟಲೆ ಹೊರ ಹೊಗದಂತೆ ಬದುಕಿಬಿಟ್ಟೆ. ಆದರೆ ಎಲ್ಲವನ್ನು ಸಹಿಸಿಕೊಂಡು ಅವುಡುಗಚ್ಚಿ ವ್ಯೆವಸಾಯದ ಬೆನ್ನತ್ತಿದೆ. ಜೊತೆಗೆ ರವಿ ಬೆಳಗೆರೆಯವರು ನನ್ನ ಎಲ್ಲಾ ನೋವುಗಳಿಗೆ ಜೊತೆ ನಿಂತರು. ವ್ಯವಸಾಯದ ಜೊತೆ ರಾಶಿರಾಶಿ ಪುಸ್ತಕಗಳನ್ನು ತಂದು ಓದಲು ಆರಂಭಿಸಿದೆ. ಜೊತೆಗೆ ಎಸ್. ಎಲ್. ಬೈರಪ್ಪ. ಕುಂ. ವೀರಭದ್ರಪ್ಪ, ಚಂದ್ರಶೇಖರ್ ಕಂಬಾರು, ಅನೆಕ ಬರಹಗಾರರ ಪುಸ್ತಕಗಳ ಜೊತೆ ಸಾಗುತ್ತಿದೆ ಪಯಣ. ವ್ಯೆವಸಾಯ ಕೈ ಹಿಡಿದಿದೆ. ತಿಂಗಳಿಗೆ 30 ರಿಂದ 40 ಸಾವಿರ ಸಿಗುತ್ತದೆ. ಸಮಯ ಸಿಕ್ಕಾಗ ಓದುವುದು ಬರೆಯುವ ಹವ್ಯಾಸಗಳು ಬೆಳೆಸಿಕೊಂಡೆ.

ಅವಳನ್ನು ಸಂಪೂರ್ಣವಾಗಿ ಮರೆತೆನೆಂದುಕೊಂಡಾಗಲೆಲ್ಲಾ ಬರೆಯಲು ಕುರುವೆ ಆ ಬರಹದಲ್ಲಿ ಅವಳೆ ನರ್ತಿಸುತ್ತಾಳೆ. ಒಂದು ವರ್ಷಗಳಲ್ಲಿ ಎಷ್ಟೊಂದು ನೋವುಗಳನ್ನನುಭವಿಸಿದೆನೊ ಆ ನೆನಪುಗಳು ಮಾತ್ರ ಜೀವಂತವಾಗಿ ನನ್ನ ಮನೆಯಲ್ಲಿ ಸದಾ ನನ್ನ ಸುತ್ತ ಸುತ್ತುತ್ತಿರುತ್ತವೆ. ಅಂದಿನಿಂದ ಈ ನಾಗರ ಪಂಚಮಿ ನನ್ನ ಪಾಲಿನ ಕರಾಳ ದಿನವಾಗಿದೆ ಹಿಂದಿನವರ್ಷವು ಈ ಹಬ್ಬದಂದು ಮೊದಲ ಬಾರಿಗೆ ಪೋಲಿಸ್ ಸ್ಟೇಷನ್ ಮೆಟ್ಟಿಲೆತ್ತಿಸಿತ್ತು. ಈ ವರ್ಷ ಚನ್ನಾಗಿದೆ ಅನ್ನುಕೊಳ್ಳುವಷ್ಟರಲ್ಲಿ ನನ್ನ ಜೊತೆ ಮಾತನಾಡುತ್ತ ನಗುತ್ತಿದ್ದ ನನ್ನ ಗೆಳೆಯನಂತ ಗೆಳೆಯ ನನ್ನ ಅಜ್ಜನನ್ನು ಸಾವು ಸದ್ದಿಲ್ಲದೆ ನನ್ನ ಕಣ್ಣು ಮುಂದೆನೆ ಅವನತ್ಮವನ್ನು ದೊಚಿಕೊಂಡು ಹೊಗಿ ಇಂದಿಗೆವೆರಡೆ ದಿನಗಳಾಗಿವೆ. ಇದನ್ನ ಬರೆಯಲೇ ಬಾರದೆಂದುಕೊಂಡು ಎಷ್ಟೊ ಬಾರಿ ಸುಮ್ಮನಾಗಿದ್ದೆ. ಆದರೆ ಇವತ್ತು ಬರೆಯಲೇ ಬೇಕೆನಿಸಿತು. ಬರೆಯಲು ಕುಳಿತೆ ಕಣ್ಣೀರು ಜೊತೆಗೆ ಸಾಥ್ ನೀಡಿದವು..,

  -ಸಿದ್ದುಯಾದವ್ ಚಿರಿಬಿ
-ಸಿದ್ದುಯಾದವ್ ಚಿರಿಬಿ

                           

ಕಥೆ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...