Oyorooms IN

Wednesday, 25th January, 2017 6:50 AM

BREAKING NEWS

ಪ್ರಮುಖ ಸುದ್ದಿಗಳು

ಈಕೆ 400 ಬೀದಿನಾಯಿಗಳ ತಾಯಿ..!!

DOG_WOMAN

ಮನುಷ್ಯನ ಸಂಬಂಧಗಳು ಯಾವಾಗ? ಯಾರೊಂದಿಗೆ ಹೇಗೆ ಶುರುವಾಗುತ್ತೇ ಅನ್ನೋದು ಊಹಿಸಲು ಸಾಧ್ಯವಿಲ್ಲ, ಪ್ರಪಂಚದಲ್ಲಿ ನನಗೆ ಯಾರು ಇಲ್ಲ ಅನ್ನೋ ಸಮಯದಲ್ಲಿಯೂ ಕೆಲ ಸಂಬಂಧಗಳು ಬೆಸದುಕೊಂಡು ಬಿಡುತ್ತವೆ.

ಕೆಲವರಿಗೆ ಸಾಕು ಪ್ರಾಣಿಗಳನ್ನು ಬಿಟ್ಟರೆ ಬೇರೆ ಪ್ರಪಂಚವಿಲ್ಲ, ಸಾಕು ಪ್ರಾಣಿಗಳ ವ್ಯಾಮೋಹದಿಂದ ಒಂದೆರೆಡು ಪ್ರಾಣಿಗಳನ್ನು ಸಾಕುವ ಜನರ ಮಧ್ಯೆ 400 ಬೀದಿನಾಯಿಗಳಿಗೆ ಆಶ್ರಯದಾತೆಯಾಗಿದ್ದಾರೆ ದೆಹಲಿ ಈ ಮಹಿಳೆ, ಹೆಸರು ಪ್ರತಿಮಾ ದೇವಿ.

DOG_WOMAN_

ಗಂಡ, ಮಕ್ಕಳು ಸಾವನ್ನಪ್ಪಿದಾಗ, ಬದುಕಲು, ಚಿಂದಿ ಹಾಯುವ ಕೆಲಸವನ್ನು ಆರಂಭಿಸಿದ ಪ್ರತಿಮಾದೇವಿ ಬದುಕಿಗೆ ಜೊತೆಯಾಗಿದ್ದು ಬೀದಿನಾಯಿಗಳು, ಒಂದರಿಂದ ಶುರುವಾದ ಈ ಅನುಬಂಧ ಈಗ 400 ನಾಯಿಗಳವರೆಗೆ ಮುಂದುವರೆದಿದೆ.

ಬೀದಿ ನಾಯಿಗಳಿಗೆ ಪ್ರತಿಮಾ ಪ್ರತಿದಿನ 12 ಕೆ.ಜಿ ಅನ್ನ,  5 ಕೆಜಿ ಮಾಂಸವನ್ನು ಹಾಕಿ ಪೋಷಣೆ ಮಾಡುತ್ತಿದ್ದಾಳೆ, ಪ್ರತಿದಿನ ಬೆಳಿಗ್ಗೆ 10 ಲೀಟರ್ ಹಾಲು ನಾಯಿಗಳಿಗಾಗಿ ತರಿಸಿಕೊಳ್ಳುತ್ತಾರೆ ಪ್ರತಿಮಾ, ಇದಕ್ಕೆಲ್ಲಾ ಹಣವನ್ನುಚಿಂದಿ ಹಾಯುವುದರಿಂದಲೇ ಸಂಪಾದನೆ ಮಾಡುತ್ತಾರಂತೆ.

ನೀವು ಇದೆನ್ನೆಲ್ಲಾ ಯಾಕೆ ಮಾಡ್ತೀರಾ ಅಂತ ಅವರನ್ನು ಪ್ರಶ್ನಿಸಿದರೆ ನಾನು ಕುಟುಂಬದೊಂದಿಗೆ ಇದ್ದಾಗಲೂ ನಾನು ಇಷ್ಟೊಂದು ಸಂತಸವಾಗಿರಲಿಲ್ಲ, ಈಗ ಅಷ್ಟೊಂದು ಸಂತಸವಾಗಿರುವೆ ಅದಕ್ಕಾಗಿ ಈ ನಾಯಿಗಳಿಗಾಗಿ ಏನು ಬೇಕಾದರೂ ಮಾಡುತ್ತೇನೆ ಎನ್ನುತ್ತಾರೆ.

DOG_WOMAN__

ನಾನಿಲ್ಲದೆ ಅವು ಏನನ್ನು ತಿನ್ನುವುದಿಲ್ಲ, ಕುಡಿಯುವುದಿಲ್ಲ, ನಾನಂದ್ರೆ ಅವಕ್ಕೆ ಅಷ್ಟು ಇಷ್ಟ, ನನಗೂ ಅಷ್ಟೇ ಅವಿಲ್ಲ ಅಂದ್ರೆ ಏನ್ಮಾಡ್ಬೇಕು ಅನ್ನೋದೇ ತೋಚೋದಿಲ್ಲ ಹೀಗೆ ನನ್ನ ಬದುಕಿನೊಂದಿಗೆ ನಾಯಿಗಳು ಸೇರಿಕೊಂಡಿವೆ ಅನ್ನುತ್ತಾರೆ ಪ್ರತಿಮಾ, ಏನೇ ಆಗಲಿ 400 ನಾಯಿಗಳನ್ನು ಸಾಯುವುದು ಅಂದರೆ ಸುಮ್ಮನೆ ಅಲ್ಲ ಬಿಡಿ.

English summary:  A Dog lady of newdelhi, pratima devi she loves dogs so much. Every day she takes the time to feed and care for over 400 stray dogs.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು