Oyorooms IN

Wednesday, 29th March, 2017 8:51 PM

BREAKING NEWS

ಜಿಲ್ಲಾ ಸುದ್ದಿಗಳು

ಮೊದಲ ಹೆಂಡತಿ ಇದ್ರು, ಎರಡನೇ ಮದುವೆಯಾದ : ಇದು ಪಿ.ಎಸ್‌ಐ ಪೋಲಿ ಆಟ!?

police 2nd marrage

ದಾವಣಗೆರೆ: ಪೋಲಿಸ್‌ ಅಧಿಕಾರಿಯೊಬ್ಬ ಮೊದಲ ಹೆಂಡತಿ ಬದುಕಿರುವ ಸಮಯದಲ್ಲೇ ಆಕೆಗೆ ಮೋಸ ಮಾಡಿ ಇನ್ನೊಬ್ಬ ಹುಡುಗಿಯನ್ನು ಮದುವೆಯಾಗಿ ಹೀರೋ ಹಾಗೇ ಬಿಲ್ಡಪ್‌ ನೀಡುತ್ತಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆ ಜಗಳೂರಿನ ಟಿ.ಮಂಜಪ್ಪ ಸದ್ಯ ಹಾವೇರಿ ಜಿಲ್ಲೆಯ ಹಾನಗಲ್‌ ಪೀಲಿಸ್‌ ಠಾಣೆಯಲ್ಲಿ ಎಸ್.ಐ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತನ್ನ ಗಂಡ ದೇವರ ದರ್ಶನಕ್ಕಾಗಿ ತಿರುಪತಿಗೆ ಹೋಗಿದ್ದರು, ಆದರೆ ಅವರು ಅಲ್ಲಿಗೆ ಹೋಗದೇ ಇನ್ನೊಂದು ಮದುವೆ ಮಾಡಿಕೊಂಡಿದ್ದಾರೆ ಎಂದು ಟಿ.ಮಂಜಪ್ಪ ಅವರ ಪತ್ನಿ ಸ್ವಪ್ನ ಅವರು ದೂರಿದ್ದಾರೆ.

ಮಂಜಪ್ಪ ಹಾಗೂ ಸ್ವಪ್ನ ಅವರೂ 2014 ರಲ್ಲಿ ಮದುವೆಯಾಗಿದ್ದು ದಂಪತಿಗಳಿಗೆ ಇಬ್ಬರಯ ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರ ದಾಂಪತ್ಯಕ್ಕೆ ಇನ್ನೊಬ್ಬ ಮಹಿಳೆ ಎಂಟ್ರಿಕೊಟ್ಟ ತಕ್ಷಣ ಟಿ,ಮಂಜಪ್ಪ ಸ್ವಪ್ನ ಅವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ.

ಈ ನಡುವೆ ಕೇಸ್‌ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದು, ಅಷ್ಟರಲ್ಲಿ ನನ್ನ ಗಂಡ ಇನ್ನೊಬ್ಬಳನ್ನು ಮದುವೆಯಾಗಿ ಫೋಟೋವನ್ನು ವಾಟ್ಸಫ್‌ನಲ್ಲಿ ಕಳುಹಿಸಿದ್ದಾರೆ ಎಂದು ಸ್ವಪ್ನ ಆರೋಪಿಸುತ್ತಿದ್ದಾರೆ,

ಘಟನೆ ಸಂಬಂಧ ನ್ಯಾಯಕ್ಕಾಗಿ ಎಸ್‌‌‌‌‌ಐ ಪತ್ನಿ ಸ್ವಪ್ನಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯರ್ಶಿ ಹಾಗೂ ಪೂರ್ವ ವಲಯ ಐಜಿಪಿ ಮತ್ತು ಹಾವೇರಿ ಎಸ್‌ಪಿಗೆ ದೂರು ನೀಡಿದ್ದಾರೆ.

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...