Oyorooms IN

Monday, 26th June, 2017 4:07 PM

BREAKING NEWS

ಪ್ರಮುಖ ಸುದ್ದಿಗಳು

ಜಾರ್ಜ್ ರಾಜಿನಾಮೆ ನೀಡುವ ಬಗ್ಗೆ ಸಿಎಂ ಮನವೊಲಿಸಿದವರು ಇವರು!?

ಜಾರ್ಜ್ ಅವರ ರಾಜಿನಾಮೆ ಸಿಎಂ ಮನವೊಲಿಸಿದವರು ಇವರು!?

ಬೆಂಗಳೂರು: ರಾಜ್ಯದಲ್ಲಿ ತ್ರೀವ ಚರ್ಚೆಯಾಗುತ್ತಿರುವ ಮಂಗಳೂರು ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಡಿಕೇರಿಯ ಸೆಷನ್‌ ಕೋರ್ಟ್‌ ಶಾಸಕ ಜಾರ್ಜ್ ಸೇರಿದಂತೆ ಒಟ್ಟು ಮೂವರ ವಿರುದ್ದ ಎಫ್‌ಐರ್‌ ದಾಖಲಿಸಿ ಕೊಳ್ಳುವಂತೆ ಸೂಚನೆ ನೀಡಿತ್ತು.

ಅದರ ಬೆನ್ನಲೆ ಸಿಎಂ ಅವರು ನಿನ್ನೆ ಹಿರಿಯ ಸಚಿವರ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದರು.  ಆದರೆ ಹಿರಿಯ ಸಚಿವರು ಜಾರ್ಜ್‌ ಅವರು ರಾಜಿನಾಮೇ ನೀಡಲೇ ಬೇಕು ಇಲ್ಲವಾದರೇ ಪಕ್ಷಕ್ಕೆ ಇದರಿಂದ ನಷ್ಟವಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಇದಾವುದಕ್ಕು ತಲೆ ಕೆಡಿಸಿಕೊಳ್ಳದ ಸಿಎಂ ಸಿದ್ದರಾಮಯ್ಯ ಅವರು ಜಅಗತ್ಯ ಇಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆ ಆರೋಗ್ಯ ಸಚಿವ ಎಸ್‌. ರಮೇಶ್ ಅವರು ಮಧ್ಯಪ್ರವೇಶ ಮಾಡಿ. ಒಂದು ವೇಳೆ ಈ ಸಮಯದಲ್ಲಿ ಜಾರ್ಜ್ ಅವರ ರಾಜಿನಾಮೆಯನ್ನು ಪಡೆಯದೇ ಹೋದರೆ, ಸರ್ಕಾರ ಜನರ ಮುಂದೆ ಕೆಟ್ಟದಾಗಿ ಚಿತ್ರಿತವಾಗುತ್ತದೆ. ಇದಲ್ಲದೇ ಜನ ನಿಮ್ಮನ್ನು ಎರಡನೇ ಅರಸು ಎನ್ನುವ ಹಾಗೇ ನಿಮ್ಮನು ನೋಡುತ್ತಿದ್ದಾರೆ.

ಈ ಎಲ್ಲಾದರ ನಡುವೆ ಮತ್ತೆ ಜನ ವಿರೋಧಿ ಸರ್ಕಾರ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳ ಬೇಕಾದ ಸನ್ನೀವೇಶ ನಿರ್ಮಾಣವಾಗುತ್ತದೆ. ಹಾಗಾಗಿ ಜಾರ್ಜ್ ಅವರ ರಾಜಿನಾಮೆ ಪಡೆದುಕೊಳ್ಳುವುದು ಒಳ್ಳೆಯದೇ. ಮಾಜಿ ಮುಖ್ಯಮಂತ್ರಿ ದೇವರಾಜು ಅರಸ್‌ ಅವರ ಕಾಲದಲ್ಲಿ ಅಂದಿನ ಸಚಿವ ಆರ್‌ಡಿ ಕಿತ್ತೂರ್‌ ವಿರುದ್ದ ಮಹಿಳೆಯೊಬ್ಬರು ಆರೋಪ ಮಾಡಿದ ತಕ್ಷಣ ಅರಸು ಅವರು ರಾಜಿನಾಮೆ ಪಡೆದುಕೊಂಡಿದ್ದರು ಎಂದು ನೆನಪಿಸಿದ್ದಾರೆ. ಇದೇ ರೀತಿ ಅನೇಕ ಉದಾಹರಣೆಯನ್ನು ರಮೇಶ್‌ ಕುಮಾರ್‍ ಅವರು ಸಿಎಂಗೆ ನೀಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಸಿಎಂ ಅವರು ಎರಡು ಬಾರಿ ಹಿರಿಯ ಸಚಿವರ ಜೊತೆಗೆ ಸಭೆ ನಡೆಸಿ ನಂತರ ಜಾರ್ಜ್‌ ಅವರ ರಾಜಿನಾಮೆ ಪಡೆಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...