Oyorooms IN

Sunday, 28th May, 2017 12:09 AM

BREAKING NEWS

ದಕ್ಷಿಣ ಕನ್ನಡ

ಮಂಗಳೂರಿನಲ್ಲಿ ರಮ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣ , 8 ಮಂದಿ ಬಂಧನ

ಮಂಗಳೂರಿನಲ್ಲಿ ರಮ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣ , 8 ಮಂದಿ ಬಂಧನ

ಮಂಗಳೂರು : ಮಂಡ್ಯ ಮಾಜಿ ಸಂಸದೆ ಹಾಗೂ ಚಿತ್ರ ನಟಿ ರಮ್ಯ ಅವರು ಮಂಗಳೂರಿಗೆ ಆಗಮಿಸಿದ್ದ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಕದ್ರಿ ಪೋಲಿಸರು ೮ ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸಂದೀಪ್‌, ಪ್ರಶಾಂತ್‌, ಭರತ್‌, ಸುಭಾಷ್‌ ಪಡೀ‌ಲ್‌, ಹೇಮಚಂದ್ರ, ಸಂಜಯ್‌, ರಂಜಿತ್‌, ಪ್ರದೀಪ್‌ ಎಂದು ತಿಳಿದು ಬಂದಿದೆ. ಈ 8  ಮಂದಿ ಆರೋಪಿಗಳು ಇದೇ ಆಗಸ್ಟ್‌ 25  ರಂದು ಕದ್ರಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದ ರಮ್ಯ ಅವರ ಕಾರಿನ ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಇದಲ್ಲದೇ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿಸಲು ಯತ್ನಿಸಿರುವ ಘಟನೆ ನಡೆದಿತ್ತು.

ಪ್ರಕರಣ ಕದ್ರಿ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು, ಈ ಸಂಬಂಧ ನಿನ್ನೆ ಕಾರ್ಯಚರಣೆ ನಡೆಸಿದ ಕದ್ರಿ ಪೋಲಿಸರು ರಮ್ಯ ಅವರಿಗೆ ಮೊಟ್ಟೆ ಎಸೆತ ಮತ್ತು ಅವಾಚ್ಯ ನಿಂದಿಸಿದ್ದ ಪ್ರಕರಣ ದಾಖಲಾಗಿದೆ, ಈ ಸಂಬಂಧ 9 ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಸಿದ್ದಾರೆ, ಈ ಬಂಧಿತರ ಪೈಕಿ ಸುಭಾಷ್‌ ಪಡೀಲ್‌ ಹಾಗೂ ಇತರರ ಮೇಲೆ ಮೊಟ್ಟೆ ಎಸೆದ ಪ್ರಕರಣ ದಾಖಲಿಸಲಾಗಿದ್ದು, ಹೇಮಚಂದ್ರ, ಪ್ರದೀಪ್‌, ರಂಜೀತ್‌, ಸಂಜಯ್‌, ಸೇರಿತಂತೆ ಇತರರ ಮೇಲೆ ರಮ್ಯ ಅವರ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿದೆ.

ಪಾಕ್‌ನ ಬಗ್ಗೆ ಹೇಳಿಕೆ ಹಾಗೂ ಮಂಗಳೂರು ನರಕ ಸಂಬಂಧಪಟ್ಟಂತೆ, ರಮ್ಯ ಅವರ ಮೇಲೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆವರ ಮೇಲೆ ಹಿಂದೂ ಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

ದಕ್ಷಿಣ ಕನ್ನಡ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...