Oyorooms IN

Friday, 24th February, 2017 11:20 AM

BREAKING NEWS

ಪ್ರಮುಖ ಸುದ್ದಿಗಳು

ನಟಿ ರಮ್ಯಾಗೆ ನೀರಿಳಿಸಿದ ಮಂಡ್ಯ ಜನರು …!!??

ramya

ಮಂಡ್ಯ: ಮಾಜಿ ಸಂಸದೆ, ನಟಿ ರಮ್ಯಾ ನೋಟು ನಿಷೇಧದಿಂದ ಕಂಗೆಟ್ಟಿರುವ ಜನರ ಪರಿಸ್ಥಿತಿಯನ್ನು ವಿಚಾರಿಸಲು ಮಾರುಕಟ್ಟೆಗೆ ತೆರಳಿ ಮುಖಭಂಗ ಅನುಭವಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ, ಥೇಟು ಕಾಂಗ್ರೆಸ್ ಯುವರಾಜ ರಾಹುಲ್ ಅವರನ್ನೇ ಅನುಕರಣೆ ಮಾಡಲು ಹೋಗಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಮಾರುಕಟ್ಟೆಗೆ ರಮ್ಯಾ ಬರುತ್ತಿದ್ದಂತೆಯೇ ಕೆಲವರು ಮೋದಿಗೆ ಜೈಕಾರ ಕೂಗಿದ್ದರಿಂದ ರಮ್ಯಾ ತೀವ್ರ ಮುಜುಗರ ಅನುಭವಿಸಿದ್ದಲ್ಲದೆ, ಕಾವೇರಿ ಹೋರಾಟದ ವೇಳೆ ಮಂಡ್ಯಗೆ ಬಂದು ಹೋರಾಟದಲ್ಲಿ ಭಾಗವಹಿಸಿದವರು ಈಗೇಕೆ ಇಲ್ಲಿಗೆ ಬಂದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದರಿಂದ ಪರಿಸ್ಥಿತಿ ಹತೋಟಿ ತಪ್ಪಿದೆ.

ಇಲ್ಲಿಗೇಕೆ ಬಂದಿದ್ದೀರಿ ಎಂದು ನೇರವಾಗಿ ಯುವಕನೊಬ್ಬ ರಮ್ಯಾರನ್ನು ಪ್ರಶ್ನಿಸಿದ ಯುವಕನಿಗೆ, ಸುಪ್ರೀಂಕೋರ್ಟ್ ನಲ್ಲಿ ನಿಮ್ಮ ತಾತ ನಿಂತಿದ್ರ ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ, ಇದಕ್ಕೆ ಆ ಯುವಕ ಹೌದು ನಮ್ಮ ತಾತ ಮಾದೇಗೌಡರು ನಿಂತಿದ್ದರು ಎಂದು ರಮ್ಯಾಗೆ ತಿರುಗೇಟು ನೀಡಿದ್ದಲ್ಲದೆ, ರಮ್ಯಾ ಮಾರುಕಟ್ಟೆಗೆ ಬಂದಾಗಿನಿಂದ ಕಾಂಗ್ರೆಸ್ ಹಾಗೂ ರಮ್ಯಾ ವಿರುದ್ಧ ಘೋಷಣೆ ಕೂಗಿದ್ದಲ್ಲದೆ, ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಟ್ಟೀಟ್ ಮಾಡಿರುವ ರಮ್ಯಾ ಮಾರುಕಟ್ಟೆಯಲ್ಲಿ ಜನರೊಂದಿಗೆ ಮಾತನಾಡಿದಾಗ ಅವರು ಚೆನ್ನಾಗಿಯೇ ಪ್ರತಿಕ್ರಿಯಿಸಿದರು ಆದರೆ ಕೆಲವರು ಮಾತ್ರ ಈ ರೀತಿ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಬಲಪಂಥೀಯ ವಿಚಾರಧಾರೆಗಳಿಗೆ ಅಂಟಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

English summary: ramya embraced with public

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...