Oyorooms IN

Monday, 24th July, 2017 10:02 PM

BREAKING NEWS

ಕಲಬುರಗಿ

ಕಲಬುರಗಿ : ಡಿ. ದೇವರಾಜ ಅರಸು ಸ್ತಬ್ಧಚಿತ್ರಗಳ ರಥಯಾತ್ರೆಗೆ ಅದ್ದೂರಿ ಸ್ವಾಗತ

ಕಲಬುರಗಿ ಡಿ. ದೇವರಾಜ ಅರಸು ಸ್ತಬ್ಧಚಿತ್ರಗಳ ರಥಯಾತ್ರೆಗೆ ಅದ್ದೂರಿ ಸ್ವಾಗತ

ಕಲಬುರಗಿ : ಡಿ.ದೇವರಾಜ ಅರಸು ಶತಮಾನೋತ್ಸವದ ಅಂಗವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಶತಮಾನೋತ್ಸವ ಸಮಿತಿ ಹಮ್ಮಿಕೊಂಡಿರುವ ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ ಯೋಜನೆಗಳ ಜಾಗೃತಿ ಮೂಡಿಸಲು ಹುಮನಾಬಾದ ಮಾರ್ಗವಾಗಿ ಮಂಗಳವಾರ ಕಲಬುರಗಿಗೆ ಆಗಮಿಸಿದ ಸ್ತಬ್ಧಚಿತ್ರಗಳ ರಥಯಾತ್ರೆಗೆ ಜಗತ್ ವೃತ್ತದಲ್ಲಿ ಕಲಾವಿದರ ನೃತ್ಯ, ಹಲಗೆ, ಡೊಳ್ಳುಕುಣಿತದೊಂದಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸ್ಗರ್ ಚುಲಬುಲ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ್ ಪಾಶಾ ಕಾರಟಗಿ, ಮುಖಂಡರಾದ ಭಾಗಣಗೌಡ ಸಂಕನೂರ, ತಿಪ್ಪಣಪ್ಪ ಕಮಕನೂರ, ವ್ಯವಸ್ಥಾಪಕ ಶಂಕರ ಬಿರಾದಾರ ಸೇರಿದಂತೆ ಹಲವು ಮುಖಂಡರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದು, ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತ ಕೋರಿದರು.

ರಥಯಾತ್ರೆಗಾಗಿ ವಿಶೇಷ ವಾಹನ ಸಿದ್ಧಪಡಿಸಲಾಗಿದ್ದು, ಇದರಲ್ಲಿ ಅರಸು ಅವರು ಜಾರಿಗೆ ತಂದಿರುವ ಹತ್ತು-ಹಲವು ಯೋಜನೆ ಮತ್ತು ಸಾಧನೆಗಳನ್ನು ಬಿಂಬಿಸುವ ಸ್ಲೈಡ್ ಸ್ಕ್ರೀನ್ ಅಳವಡಿಸಲಾಗಿದೆ. ಸೋಮವಾರ ಬೀದರ ಜಿಲ್ಲೆಯಿಂದ ಪ್ರಾರಂಭವಾದ ಈ ರಥಯಾತ್ರೆಯು ಕಲಬುರಗಿ ವಿಭಾಗದ ಬೀದರ, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಯ ಮಾರ್ಗವಾಗಿ ಆಗಸ್ಟ್ 17 ರಂದು ಬೆಂಗಳೂರಿಗೆ ತಲುಪಲಿದೆ. ಹೀಗೆ ಇನ್ನುಳಿದ ಮೂರು ವಿಭಾಗಗಳಿಂದ ಅಭಿಯಾನವು ಏಕಕಾಲದಲ್ಲಿ ಬೆಂಗಳೂರಿನಬಲ್ಲಿ ನಡೆಯುವ ಸಮಾರೋಪ ಸಮಾರಂಭಕ್ಕೆ ತಲುಪುವ ಮೂಲಕ ರಥಯಾತ್ರ ಕೊನೆಗೊಳ್ಳಲಿದೆ.

ಕಣ್ಮನ ಸೂರೆಗೊಂಡ ರಥಯಾತ್ರೆ: ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳ ಕುರಿತ ಜಾಗೃತಿ ಮೂಡಿಸಲು ಆಗಮಿಸಿರುವ ಸ್ತಬ್ಧಚಿತ್ರ ರಥಯಾತ್ರೆ ಕಲಬುರಗಿ ಜನರ ಕಣ್ಮನಗಳನ್ನು ಸೂರೆಗೊಂಡಿತು. ರಥಯಾತ್ರೆ ಆಗಮಿಸುತ್ತಿದಂತೆ ಸಣ್ಣನೆಯ ಮಳೆ ಸಿಂಚನ ಮೆರವಣಿಗೆಯಲ್ಲಿ ಪಾಲ್ಗೊಂಡವರ ಉಲ್ಲಾಸ ಹೆಚ್ಚಿಸಿತು. ರಥಯಾತ್ರೆಯೂ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಮಾರ್ಗವಾಗಿ ಡಾ.ಎಸ್.ಎಂ.ಪಂಡಿತ ರಂಗಮಂದಿರಕ್ಕೆ ಆಗಮಿಸಿತು. ನಂತರ “ಜನಮಿತ್ರ ಅರಸು” ನಾಟಕ ಪ್ರದರ್ಶಿಸಲಾಯಿತು. ಈ ರಥಯಾತ್ರೆಯು ಆಗಸ್ಟ್ 10ರಂದು ಜೇವರ್ಗಿ ಮಾರ್ಗವಾಗಿ ಯಾದಗಿರಿ ಜಿಲ್ಲೆಗೆ ಪ್ರವೇಶ ಮಾಡಲಿದೆ.

ಕಲಬುರಗಿ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...