Oyorooms IN

Wednesday, 25th January, 2017 6:50 AM

BREAKING NEWS

ಪ್ರಮುಖ ಸುದ್ದಿಗಳು

ಫ್ಲೈಓವರ್ ಮೇಲೆ ರಾಬರಿ, ಸ್ಟೀಲ್ ವ್ಯಾಪಾರಿ ಬಳಿ 10 ಲಕ್ಷ ದೋಚಿದ ಕಳ್ಳರು.!!

robbary

ಬೆಂಗಳೂರು: ಬೈಕ್ನಲ್ಲಿ 10 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದ ಸ್ಟೀಲ್ ಅಂಗಡಿ ಮ್ಯಾನೇಜರ್ ಒಬ್ಬನಿಗೆ ಚಾಕುವಿನಿಂದ ಇರಿದು ಹಣವನ್ನು ದೋಚಿರುವ ಘಟನೆ ಚಾಮರಾಜಪೇಟೆ ಫ್ಲೈಓವರ್ ಮೇಲೆ ನಡೆದಿದೆ.

ಹೊಸಗುಡ್ಡದ ಹಳ್ಳಿಯ ದೀಪಕ್ ಜೈನ್ ಎನ್ನುವ ಸ್ಟೀಲ್ ವ್ಯಾಪಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಮೇಶ್, ವಿವಿಧ ಅಂಗಡಿಗಳಲ್ಲಿ ಬಾಕಿ ಉಳಿದಿದ್ದ 10 ಲಕ್ಷ ಹಣವನ್ನು ವಸೂಲಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾಗ, ಫ್ಲೈಓವರ್ ಬೈಕ್ ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು, ಚಾಕುವಿನಿಂದ ಇರಿದು ಹಣ ಕಸಿದಿದ್ದಾರೆ.

ಸ್ಥಳೀಯರ ಸಹಾಯದಿಂದ ರಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಚಾಮರಾಜಪೇಟೆಯ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

English summary: robbery in banglore

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು