Oyorooms IN

Friday, 23rd June, 2017 12:27 PM

BREAKING NEWS

Uncategorized

ರಾಮನಗರ : ಎದುರಾಳಿ ಸದೆಬಡಿಯಲು ಸೈನಿಕರಿಗೆ ರೋಬೋಟ್ ಸಿದ್ದಪಡಿಸಿದ ಕನ್ನಡಿಗ

ರಾಮನಗರ : ಎದುರಾಳಿ ಸದೆಬಡಿಯಲು ಸೈನಿಕರಿಗೆ ರೋಬೋಟ್ ಸಿದ್ದಪಡಿಸಿದ ಕನ್ನಡಿಗ

ರಾಮನಗರ: ನೆರೆಯ ದೇಶಗಳ ಉಪಟಳ ಮತ್ತು ಭಯೋತ್ಪಾಧಕರ ದಾಳಿಗೆ ಬಲಿಯಾಗುತ್ತಿರುವ ಸೈನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೋಬೋಟ್ ಸಿದ್ದಗೊಂಡಿದೆ.

ಇಲ್ಲಿನ ಗೌಸಿಯಾ ಎಂಜನಿಯರಿಂಗ್ ಕಾಲೇಜು ಮೆಕ್ಯಾನಿಕಲ್ ಅಂತಿಮ ವರ್ಷದ ವಿದ್ಯಾರ್ಥಿ ದರ್ಶನ್ ಈ ರೋಬೋಟ್ ತಯಾರಿಸಿದ್ದಾನೆ.ಯುದ್ಧ ಸಂದರ್ಭಗಳಲ್ಲಿ ದೂರದಲ್ಲಿಯೇ ಕುಳಿತು ಶತ್ರುಗಳನ್ನು ಸದೆಬಡಿಯುವಂತಹ ತಂತ್ರಜ್ಞಾನ ಇದಾಗಿದೆ.

360 ಡಿಗ್ರಿಯಲ್ಲಿ ಸಂಚರಿಸಿ ಹೇಗೆ, ಎಲ್ಲಿಗೆ ಬೇಕೋ ಅಲ್ಲಿಗೆಲ್ಲವೂ ಸಹ ಓಡಾಡುತ್ತೆ. ಕೆಲವು ವೇಳೆ ಗನ್ ಬದಲು ಮಿಸೈಲ್‌ಗಳನ್ನು ಕೂಡಾ ಈ ರೋಬೋಟ್‌ನಲ್ಲಿ ಬಳಸಬಹುದಾಗಿದೆ. ಹಗಲು ರಾತ್ರಿ ಎನ್ನದೇ ಕೈಯಲ್ಲಿ ಗನ್ ಹಿಡಿದು ದೇಶದ ರಕ್ಷಣೆ ಮಾಡ್ತಾ ಇರೋ ಸೈನಿಕರಿಗೆ ಈ ರೋಬೋಟ್ ವರವಾಗಲಿದೆ.

ತನ್ನ ಶೈಕ್ಷಣಿಕ ವರ್ಷದ ಪ್ರಾಜೆಕ್ಟ್ ನಲ್ಲಿ ಈ ತಂತ್ರಜ್ಞಾನ ತಯಾರಿಕೆಗೆ ಮುಂದಾದ ದರ್ಶನ್ ರೋಬೋಟ್ ತಯಾರಿಯಿಂದ ಸೈನಿಕರಿಗೆ ಸಾಕಷ್ಟು ಒಳಿತಾಗಲಿದೆ.ಇದರ ಖರ್ಚು ಕೂಡಾ ಸಾಕಷ್ಟು ಕಡಿಮೆ ಆಗಿದ್ದು, ಕೇವಲ 30 ಸಾವಿರಕ್ಕೆ ರೋಬೋಟ್ ತಯಾರಿಸಬಹುದು ಅಂತಾರೇ ರೋಬೋಟ್ ಸಂಶೋಧಕ ದರ್ಶನ್.

Uncategorized ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...