Oyorooms IN

Thursday, 17th August, 2017 5:00 PM

BREAKING NEWS

ರಾಜ್ಯ

ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಮಾತ್ರ ಬದಲಾವಣೆ: ಬಸವರಾಜ ಬೊಮ್ಮಾಯಿ

1

ರಾಯಚೂರು: ರಾಜ್ಯದಲ್ಲಿರುವ ಎಲ್ಲ ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾದಾಗ ಮಾತ್ರ ರೈತರ ಜೀವನದಲ್ಲಿ ಬದಲಾವಣೆ ಕಾಣಲು ಮತ್ತು ಅವರ ಮೊಗದಲ್ಲಿ ನಗುಮೂಡಲು ಸಾಧ್ಯ ಎಂದು ಜಲಸಂಪನ್ಮೂಲ ಮಾಜಿ ಸಚಿವರು ಆದ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ 82ನೇಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಜ್ಯದ ನೀರು-ನೀರಾವರಿ ಸಮಸ್ಯೆಗಳು ಮತ್ತು ಸವಾಲುಗಳ ಕುರಿತ ಗೋಷ್ಠಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸ್ವಾತಂತ್ರ್ಯ ನಂತರ ನಾವು ನೀರಿನ ಸಂಗ್ರಹಕ್ಕೆ ಒತ್ತು ಕೊಟ್ಟಿದ್ದೆವೆಯೇ ಹೊರತು ನೀರಿನ ನಿರ್ವಹಣೆಗೆ ಒತ್ತು ಕೊಟ್ಟಿಲ್ಲ ಇದರಿಂದಾಗಿ ಇಂದು ನಾವು ಅನೇಕ ಸಮಸ್ಯೆಗಳು ಎದುರಿಸುತ್ತಿದ್ದೇವೆ ಎಂದು ಹೇಳಿದ ಬೊಮ್ಮಾಯಿ ಅವರು, ನೀರಿನ ನಿರ್ವಹಣೆಗೆ ಹಿಂದೆಂದಿಗಿಂತಲೂ ಇಂದು ಒತ್ತು ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಪಶ್ಷಿಮಘಟ್ಟದಲ್ಲಿ ಹುಟ್ಟಿ ಪಶ್ಷಿಮ ದಿಕ್ಕಿನ ಅರಬ್ಬಿಸಮುದ್ರದ ಪಾಲಾಗುವ 2 ಸಾವಿರ ಟಿಎಂಸಿ ನೀರನ್ನು ನಾವು ಉಪಯೋಗಿಸುವ ಕೆಲಸವಾಗುತ್ತಿಲ್ಲ. ಪಶ್ಷಿಮಘಟ್ಟದಲ್ಲಿ ಹುಟ್ಟಿ ಬಂಗಾಳಕೊಲ್ಲಿಗೆ ಸೇರುವ ನದಿಗಳ ನೀರಿಗೆ ಮಾತ್ರ ನಾವು ಅಣೆಕಟ್ಟಿ ಕಟ್ಟಿ ನೀರು ಉಪಯೋಗಿಸುತ್ತಿದ್ದೇವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 105ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಗೆ ಯೋಗ್ಯವಿದೆ. ಅದರಲ್ಲಿ ೬೫ಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸಬಹುದಾಗಿದೆ ಎಂದು ಅಂಕಿ-ಸಂಖ್ಯೆಗಳ ಸಮೇತ ವಿವರಿಸಿದ ಬೊಮ್ಮಾಯಿ ಅವರು, 28ಲಕ್ಷ ಹೆಕ್ಟೇರ್ ಪ್ರದೇಶ ಬೃಹತ್ ನೀರಾವರಿಗಳಿಂದ, ಸಣ್ಣ ನೀರಾವರಿಗಳಿಂದ 10, ಕೊಳವೆ ಬಾವಿ ಹಾಗೂ ಇನ್ನೀತರ ಮೂಲಗಳಿಂದ 10 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲಾಗುತ್ತಿದ್ದು, ಇನ್ನೂ 17 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಬೇಕಿದೆ ಎಂದು ವಿವರಿಸಿದರು.
ಸದ್ಯ ಕಬ್ಬು ಮತ್ತು ಭತ್ತದ ಬೆಳೆಗೆ ಅತಿಹೆಚ್ಚು ನೀರು ಬೇಕಿದೆ ಎಂದು ಹೇಳಿದ ಅವರು, ಇವುಗಳನ್ನು ಹನಿ ನೀರಾವರಿ ಮೂಲಕ ಬೆಳೆಯುವುದಕ್ಕೆ ರೈತರು ಮುಂದಾಗಬೇಕು ಎಂದರು. ತುಂಗಾಭದ್ರಾ ನದಿಯಲ್ಲಿ 28 ಟಿಎಂಸಿ ಹೂಳು ತುಂಬಿರುವುದನ್ನು ಪ್ರಸ್ತಾಪಿಸಿದ ಅವರು ಈ ಮಣ್ಣು ಕಲ್ಲುಬಂಡೆಗಿಂತಲೂ ಕಠಿಣವಾಗಿರುವುದರಿಂದ ತೆಗೆಯುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ನವಿಲೆ ಬಳಿ ಸಮಾನಂತರ ಜಲಾಶಯ ನಿರ್ಮಿಸಲಾಗುತ್ತಿದೆ ಎಂದರು. ಸಮಾನಂತರ ಜಲಾಶಯ ಮತ್ತು ಎತ್ತರಮಟ್ಟದ ಪ್ರವಾಹ ಕಾಲುವೆ ನಿರ್ಮಾಣದಿಂದ ಮಾತ್ರ ಈ ಭಾಗದ ರೈತರ ಭೂಮಿಗಳಿಗೆ ನೀರುಣಿಸಲು ಸಾಧ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ, ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್, ಡಾ.ತಮಿಳ್ ಸೆಲ್ವಿ ಮತ್ತಿತರರು ಇದ್ದರು.

ರಾಜ್ಯ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...