Oyorooms IN

Saturday, 21st January, 2017 7:36 AM

BREAKING NEWS

ರಾಜ್ಯ

ಖಾಸಗಿ ಬ್ಯಾನರ್‌ಗೆ ನಿರ್ಬಂಧ ಮೂರು ದಿನ ಮದ್ಯ ನಿಷೇಧ!

32

ರಾಯಚೂರು: 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ನಗರದಲ್ಲಿ ಪ್ರತ್ಯೇಕ ಬ್ಯಾನರ್ ಮತ್ತು ಮೂರು ದಿನ ಮುಖ್ಯ ರಸ್ತೆ ಬದಿಯಲ್ಲಿರುವ ಬಾರ್‌ಗಳನ್ನು ಬಂದ್ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

 ಜಿ.ಪಂ ಸಭಾಂಗಣದಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲೆಯ ಸಂಘಟನೆಗಳ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 6ದಶಕಗಳ ಬಳಿಕ ಸಮ್ಮೇಳನ ನಡೆಯುತ್ತಿದ್ದು, ಹೊರ ಜಿಲ್ಲೆಯಿಂದ ಬರುವ ಅತಿಥಿಗಳಿಗೆ ತೊಂದರೆಯಾಗದ ನಿಟ್ಟಿನಲ್ಲಿ ಸ್ವಾಗತಿಸಿ ವಸತಿ ಸೌಕರ್ಯಗಳನ್ನು ನೀಡಲಾಗುವುದು. ನಗರದಲ್ಲಿ ಸಂಘಟನೆಗಳು ಪ್ರತ್ಯೇಕ ಬ್ಯಾನರ್ ಹಾಕುವುದರಿಂದ ನಗರ ಸೌಂದರ್ಯಕ್ಕೆ ತೊಂದರೆಯಾಗುತ್ತದೆ. ಅಲಂಕಾರಗೊಳಿಸಲು ನಗರಸಭೆಗೆ ವಹಿಸಿಕೊಟ್ಟಿದ್ದು, ಈಗಾಗಲೇ ಗೋಡೆ ಬರಹ, ರಸ್ತೆ ದ್ವಿಭಜಕಗಳಿಗೆ ಬಣ್ಣ ಹಚ್ಚುವ ಕಾರ್ಯ ನಡೆದಿದೆ. ಯಾವುದೇ ಸಂಘಟನೆಗಳು ಪ್ರತ್ಯೇಕ ಬ್ಯಾನರ್‌ಗಳನ್ನು ಹಾಕುವಂತಿಲ್ಲ. ಕಸಾಪ ಮತ್ತು ಜಿಲ್ಲಾಡಳಿತ ವತಿಯಿಂದ ಬ್ಯಾನರ್ ವ್ಯವಸ್ಥೆ ಮಾಡಲಾಗಿದೆ. ಬಂದಂತಹ ಅತಿಥಿಗಳಿಗೆ ಮಾರ್ಗದರ್ಶನ ನೀಡಿದರೆ ಸಾಕು ಎಂದು ತಿಳಿಸಿದರು.

ಮೆರವಣಿಗೆಯು ಎಲ್ಲರ ಅಭಿಪ್ರಾಯದ ಮೇರೆಗೆ ಕರ್ನಾಟಕ ಸಂಘದಿಂದ ನಡೆಸಲಾಗುವುದು ಮತ್ತು ಸೂಕ್ತ ಭದ್ರತೆಯನ್ನು ಒದಗಿಸಲಾಗುವುದು ಎಂದರು.

ನಗರದಲ್ಲಿ ಸಣ್ಣಪುಟ್ಟ ಅಂಗಡಿ ಮತ್ತು ಪಾನ್‌ಶಾಪ್ ಅಂಗಡಿಗಳು ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗಬೇಕು, ಸಮ್ಮೇಳನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಂಡುಬಂದಲ್ಲಿ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದರು.ರಸ್ತೆ ಕಾರ್ಯ ಕೊನೆಯ ಹಂತದಲ್ಲಿದ್ದು, ಮೂರೂ ದಿನಗಳಂದು ಎಲ್ಲಾ ರಸ್ತೆಗಳಲ್ಲಿ ಧೂಳು ಬಾರದಂತೆ ನೀರು ಹಾಕುವ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವೇದಿಕೆಯಲ್ಲಿ ಸಿಇಓ ಕೂರ್ಮಾರಾವ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಚೇತನಸಿಂಗ್ ರಾಠೋಡ್ ಸೇರಿದಂತೆ ಕನ್ನಡ ಪರ ಸಂಘಟನೆಗಳು ಮಹಿಳಾ ಸಂಘಟನೆಗಳು, ದಲಿತಪರ ಸಂಘಟನೆಗಳು, ರೈತ ಸಂಘಟನೆಗಳು ಭಾಗವಹಿಸಿದ್ದವು.

ರಾಜ್ಯ ಇನ್ನಷ್ಟು

ಪ್ರಮುಖ ಸುದ್ದಿಗಳು