Oyorooms IN

Thursday, 27th July, 2017 4:09 AM

BREAKING NEWS

ಜಿಲ್ಲಾ ಸುದ್ದಿಗಳು

ಮೇಲಾಧಿಕಾರಿಗಳೊಂದಿಗೆ ಸಹಕರಿಸು ಎಂದ ರೈಲ್ವೆ ಅಧಿಕಾರಿ..!!?

railway_sexual_torture

ಅರಸೀಕೆರೆ: ರೈಲ್ವೆ ಹಿರಿಯ ಅಧಿಕಾರಿ ಲೈಂಗಿಕ ಕಿರುಕುಳ ನೀಡುತ್ತಿರುವುದಲ್ಲದೆ, ಹಣ ದುರುಪಯೋಗದ ಆರೋಪಿಸಿ ನನ್ನನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಹಿಳಾ ಅಧಿಕಾರಿಯೊಬ್ಬರು, ಹಿರಿಯ ಅಧಿಕಾರಿ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ಘಟನೆ ಅರಸೀಕೆರೆ ರೈಲ್ವೆ ಜಂಕ್ಷನ್ ನಲ್ಲಿ ನಡೆದಿದೆ.

ಹಾಸನ ಜಿಲ್ಲೆ ಅರಸೀಕೆರೆ ರೈಲ್ವೆ ಜಂಕ್ಷನ್ ನಲ್ಲಿ ಕಮರ್ಷಿಯಲ್ ಸೂಪರ್ ವೈಸರ್ ಆಗಿರುವ ಸುಮಲತಾ ಅವರಿಗೆ ರೈಲ್ವೆಯ ಹಿರಿಯ ಅಧಿಕಾರಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಕಳ್ಳತನದ ಆರೋಪ ಮಾಡಿ, ಸುಮಲತಾ ಅವರ ತೇಜೋವಧೆಗೆ ಯತ್ನಿಸಿದ್ದು ನ್ಯಾಯ ಕೊಡಿಸುಕೊಂಡುವಂತೆ ರೈಲ್ವೆ ಇಲಾಖೆ ಮುಂದೆ ಸುಮಲತಾ ಹೋರಾಟ ನಡೆಸುತ್ತಿದ್ದಾರೆ.

ಕಳೆದ 2 ವರ್ಷಗಳಿಂದಲೂ ಧನಶೇಖರ್ ಕಿರುಕುಳ ನೀಡುತ್ತಿದ್ದು, ಮಾನಸಿಕ ಹಿಂಸೆಯನ್ನು ನೀಡಿದ್ದ, ನಾನು ಹೇಳಿದ ಮೇಲಾಧಿಕಾರಿಗಳಿಗೆ ನೀನು ಸಹಕಾರ ನೀಡಿದ್ರೆ, ನಿನಗೆ ಬಡ್ತಿ ಕೊಡಿಸುತ್ತೇನೆ, ಇಲ್ಲ ಬೇರೆ ಕಡೆ ವರ್ಗಾವಣೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ಸುಮಲತಾ ಆರೋಪಿಸಿದ್ದು, ಒಂದು ವರ್ಷದ ಹಿಂದೆಯೇ ಸುಮಲತಾ ಸ್ಥಳೀಯ ಪೊಲೀಸರಿಗೆ ಧನಶೇಖರ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದರು. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸುಮಲತಾ ಆರೋಪಿಸಿದ್ದಾರೆ.

English summary: sexual torture form higer officer in arasikere railway juncation.

ಜಿಲ್ಲಾ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...