Oyorooms IN

Friday, 23rd June, 2017 12:29 PM

BREAKING NEWS

ಪ್ರಮುಖ ಸುದ್ದಿಗಳು

ಎಚ್ಡಿಕೆ ವಿರುದ್ಧ ಶೋಭಾ ಕಿಡಿ, ಕೀಳುಮಟ್ಟದ ರಾಜಕಾರಣ

shoba

ಹಾಸನ: ವಿಧಾನಸೌಧದ ಬಳಿ ಪತ್ತೆಯಾದ ದಾಖಲೆಯಿಲ್ಲದ 1.97ಕೋಟಿ ಹಣದ ಬಗ್ಗೆ ಬಿಎಸ್ ಯಡಿಯೂರಪ್ಪ ಅವರನ್ನು ಕೇಳುವಂತೆ ಹೇಳಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದು. ಹಣಕ್ಕೂ ಬಿಎಸ್ ವೈ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಕೀಳು ಮಟ್ಟದ ರಾಜಕೀಯವನ್ನು ಮಾಡುತ್ತಿದ್ದಾರೆ. ಹಣಕ್ಕೂ ಬಿಎಸ್ ವೈಗೂ ಯಾವುದೇ ಸಂಬಂಧವಿಲ್ಲ, ವಿಧಾನಸೌಧ, ಬಿಬಿಎಂಪಿಯ ಅಧಿಕಾರ ಯಾರಬಳಿ ಇದೆ ಎನ್ನುವುದು  ಎಲ್ಲರಿಗೂ ಗೊತ್ತಿದೆ, ಪ್ರಕರಣದಲ್ಲಿ ಬಿಎಸ್ವೈ ಹೆಸರನ್ನು ಎಳೆದು ತರಲಾಗುತ್ತಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದಿದ್ದಾರೆ.

ಕ್ಷುಲ್ಲಕ ಆರೋಪಗಳನ್ನು ಪ್ರಚಾರಕ್ಕಾಗಿ ಮಾಡುವುದನ್ನು ಬಿಡಿ, ಬಿಬಿಎಂಪಿಯಲ್ಲಿ ಎಲ್ಲವೂ ಕಮೀಷನ್ ವ್ಯವಹಾರ, ಬೆಣ್ಣೆ ತಿಂದು ಇನ್ನೊಬ್ಬರ ಮುಖಕ್ಕೆ ಒರೆಸುವುದನ್ನು ಬಿಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಸನಾಂಬೆಯ ದರ್ಶನ ಪಡೆದರು. ವಿಧಾನಸೌಧದ ಬಳಿ ದೊರೆತ ಹಣ ಎಲ್ಲಿಯದು, ಎಲ್ಲಿಗೆ ಹೋಗುತ್ತಿತ್ತು ಎನ್ನುವುದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಚೆನ್ನಾಗಿಯೇ ಗೊತ್ತಿದೆ, ಬೇರೆಯವರನ್ನು ವಿಚಾರಿಸುವ ಅಗತ್ಯವೇ ಇಲ್ಲ ಎಂದು ಕುಮಾರ ಸ್ವಾಮಿ ಆರೋಪಿಸಿದ್ದರು.

English summary:  shoba salam hd kumaraswamy reaction about unknown amount

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...