Oyorooms IN

Saturday, 22nd July, 2017 4:27 PM

BREAKING NEWS

ಕೊಡಗು

ಕಾರು ಬೇಗ ವಾಷ್ ಮಾಡಲು ಹೇಳಿದ್ದಕ್ಕೆ ಗುಂಡೇಟು

gun

ಕೊಡಗು: ಆಯುಧ ಪೂಜೆ ಹಿನ್ನೆಲೆಯಲ್ಲಿ ಕಾರನ್ನು ಬೇಗ ವಾಷ್ ಮಾಡಿಕೊಡುವಂತೆ ಸರ್ವೀಸ್ ಸ್ಟೇಷನ್ ಮಾಲೀಕನಿಗೆ ಹೇಳಿದ್ದಕ್ಕೆ ಸರ್ವೀಸ್ ಸ್ಟೇಷನ್ ಮಾಲೀಕ ಕಾರಿನ ಮಾಲೀಕನಿಗೆ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿಯ ಶನಿವಾರ ಸಂತೆಯ ಶೇಖರ್ (45) ಹಬ್ಬದ ಪ್ರಯುಕ್ತ ಕಾರನ್ನು ಇಂದು ಬೆಳಿಗ್ಗೆ ಸರ್ವೀಸ್ ಮಾಡಲು ಬಿಟ್ಟು ಹೋಗಿದ್ದರು, ನಂತರ ಬಂದಾಗ ಶೇಖರ್ ಕಾರಿನ ಬದಲಾಗಿ ಬೇರೆ ಕಾರನ್ನು ಸರ್ವೀಸ್ ಮಾಡುತ್ತಿದ್ದರಿಂದ ಶೇಖರ್ ಸರ್ವೀಸ್ ಸ್ಟೇಷನ್ ಮಾಲೀಕನ ಜೊತೆ ಜಗಳವಾಡಿದ್ದಾರೆ.

ಶೇಖರ್ ಜೊತೆಗಿನ ಜಗಳದಿಂದ ಕೋಪಗೊಂಡ ಸರ್ವೀಸ್ ಸ್ಟೇಷನ್ ಮಾಲೀಕ ಅಬ್ದುಲ್ ರುಬ್ಜು ಮನೆಗೆ ಹೋಗಿ ಗನ್ ತಂದು ಶೇಖರ್ ಮೇಲೆ ಗುಂಡು ಹಾರಿಸಿದ್ದಾನೆ, ಶೇಖರ್ ನನ್ನು ಆಸ್ಪತ್ರೆಗೆ ಸಾಗಿಸಿದರು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಶೇಖರ್ ಸ್ನೇಹಿತರು ಕುಟುಂಬಸ್ಥರು ಸರ್ವೀಸ್ ಸ್ಟೇಷನ್ ಮೇಲೆ ದಾಂಧಲೆ ನಡೆಸಿದ್ದಾರೆ. ಪೊಲೀಸರು ಅಬ್ದುಲ್ ರುಬ್ಜು ಅವರನ್ನು ಬಂಧಿಸಿದ್ದಾರೆ.

English summary: shotout in kodagu, one dead

ಕೊಡಗು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...