Oyorooms IN

Sunday, 20th August, 2017 10:57 PM

BREAKING NEWS

ಪ್ರಮುಖ ಸುದ್ದಿಗಳು

ಸಿದ್ಧಗಂಗಾ ಮಠದ ಕಿರಿಯಶ್ರೀ ಗೌರಿಶಂಕರ ಸ್ವಾಮೀಜಿ ವಿಧಿವಶ

ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಗೌರಿಶಂಕರ ಸ್ವಾಮೀಜಿ ಅವರು ಬುಧವಾರ ವಿಧಿವಶರಾಗಿದ್ದಾರೆ.  ಹಲವು ದಿನಗಳಿಂದ ಪಾರ್ಶವಾಯುವಿನಿಂದ ಬಳಲುತ್ತಿದ್ದ ಗೌರಿಶಂಕರ ಸ್ವಾಮಿ ಅವರನ್ನು ಇತ್ತೀಚೆಗೆ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಪಾರ್ಶವಾಯುವಿನಿಂದಾಗಿ ರಕ್ತ ಹೆಪ್ಪುಗಟ್ಟಿದ್ದರಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೆ ಗೌರಿಶಂಕರ ಸ್ವಾಮಿ ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ 71 ವರ್ಷ ವಯಸ್ಸಿನಲ್ಲಿ ಗೌರಿಶಂಕರ ಸ್ವಾಮಿ ವಿಧಿವಶರಾಗಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ ಕಳೆದ ಹಲವು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಶ್ರೀಗಳು ತುಮಕೂರಿನ ಗುಬ್ಬಿ ತಾಲ್ಲೂಕಿನ ಗೊಲ್ಲಹಳ್ಳಿಯಲ್ಲಿ ಸಿದ್ಧಗಂಗಾ ಮಠ ಸ್ಥಾಪಿಸಿ ಅಲ್ಲಿಯೇ ವಾಸಿಸುತ್ತಿದ್ದರು.ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟದ ಕಾನೂನು ಹೋರಾಟ ಇನ್ನೂ ತುಮಕೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಸಿದ್ಧಗಂಗಾ ಶ್ರೀಗಳ ಭೇಟಿಗೆ ಆಗಮಿಸಿದ್ದ ಗೌರಿಶಂಕರ ಸ್ವಾಮೀಜಿ. ( ಸಂಗ್ರಹ ಚಿತ್ರ)

1987ರಲ್ಲಿ ಸಿದ್ದಗಂಗಾ ಮಠದಲ್ಲಿ ಸಲಿಂಕಾಮ ನಡೆಸಿದ ಆರೋಪದ ಮೇರೆಗೆ ಮಠದಿಂದ ಹೊರಹಾಕಿದ್ದ ಗೌರಿಶಂಕರ ಸ್ವಾಮಿ ಅವರು, ತಮ್ಮ ಗುರುಗಳಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯನ್ನು ನೋಡಲು ಬಯಸಿದ್ದರು. ಈ ಹಿಂದೆ ಅವರನ್ನು ನೋಡಲು ನಡೆಸಿದ ಹಲವು ಪ್ರಯತ್ನಗಳು ವಿಫಲವಾಗಿತ್ತು.

ಕೋರ್ಟ್ ಆದೇಶವನ್ನು ಪಡೆದು ಶಿವಕುಮಾರಶ್ರೀಗಳ ಭೇಟಿಗೆ ಸಿದ್ಧಗಂಗಾ ಮಠಕ್ಕೆ ಹೋಗಿದ್ದ ಗೌರಿಶಂಕರ ಸ್ವಾಮೀಜಿಗಳಿಗೆ, ಶಿವಕುಮಾರ ಸ್ವಾಮೀಜಿ ಭೇಟಿ ಮಾಡಲು ಇಷ್ಟವಿಲ್ಲ ಎಂದು ಪತ್ರವನ್ನು ಕಳುಹಿಸಿದ್ದರು, ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಅನಾರೋಗ್ಯಕ್ಕೆ ಗೌರಿಶಂಕರ ಸ್ವಾಮೀಜಿ ತುತ್ತಾಗಿದ್ದರು,  ಕನಿಷ್ಠ ಪಕ್ಷ ಅವರ ಕೊನೇ ಗಳಿಗೆಯಲ್ಲಾದರೂ ಶಿವಕುಮಾರ ಸ್ವಾಮೀಜಿಗಳು ಅವರನ್ನು ನೋಡಲು ಆಗಮಿಸುತ್ತಾರೆ ಎಂದು ಭಾವಿಸಿದ್ದರು.

ಗೌರಿಶಂಕರ ಸ್ವಾಮೀಜಿಗಳ ನಿಧನದ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು,  ಮಠಕ್ಕೆ ವಿವಿಧ ಮಠಾಧೀಶರು ಭೇಟಿ ನೀಡುತ್ತಿದ್ದಾರೆ. ಸಿದ್ಧಗಂಗಾ ಮಠದ ಕಿರಿಯಶ್ರೀಗಳಾಗಿ ಸೇವೆ ಸಲ್ಲಿಸಿದ್ದ ಗೌರಿಶಂಕರಸ್ವಾಮೀಜಿ ಅವರ ಅಂತ್ಯಸಂಸ್ಕಾರವನ್ನು ಮಠದಲ್ಲಿಯೇ ಮಾಡಬೇಕೆಂದು ಅವರ ಭಕ್ತರು ಆಶಿಸಿದ್ದು, ಭಕ್ತರ ಆಶಯಕ್ಕೆ ಶಿವಕುಮಾರಸ್ವಾಮೀಜಿ ಒಪ್ಪಿಗೆ ನೀಡಿಲ್ಲ, ಮಠದಲ್ಲಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಒದಗಿಸುವಂತೆ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಅವರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರಿಂದ ಮಠದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

English summary: Siddaganga matt gowri Shankar swamy passes away

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...