Oyorooms IN

Wednesday, 25th January, 2017 6:50 AM

BREAKING NEWS

ಕ್ರೀಡೆ

ರಿಯೋ ಸಾಧಕರಿಗೆ ಬಿಎಂಡಬ್ಲ್ಯೂ ಕಾರು ಹಸ್ತಾಂತರಿಸಿದ ಸಚಿನ್‌

ರಿಯೋ ಸಾಧಕರಿಗೆ ಬಿಎಂಡಬ್ಲ್ಯೂ ಕಾರು ಹಸ್ತಾಂತರಿಸಿದ ಸಚಿನ್‌

ಹೈದರಾಬಾದ್‌: ರಿಯೋ ಒಲಿಂಪಿಕ್‌ ನಲ್ಲಿ ದೇಶಕ್ಕೆ ಕೀರ್ತಿ ತಂದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಕುಸ್ತಿ ಪಟು ಸಾಕ್ಷಿ ಮಲಿಕ್‌ ಮತ್ತು ಜಿಮ್ನಾಸ್ಟಿಕ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ದೀಪಾ ಕರ್ಮಾಕರ್‌ ಹಾಗೂ ಸಿಂಧು ಅವರ ಕೋಚ್‌ ಪುಲ್ಲೆಲಾ ಗೋಪಿಚಂದ್ ಅವರಿಗೆ ಐಷಾರಾಮಿ ಬಿಎಂಡಬ್ಲ್ಯೂ ಕಾರುಗಳನ್ನು ನಿನ್ನೆ ಹಸ್ತಾಂತರಿಸಲಾಯಿತು.

ಸಮಾರಂಭದಲ್ಲಿ ಸಿಂಧು, ಸಾಕ್ಷಿ ಮಲಿಕ್‌ ಹಾಗೂ ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌ ಹಾಗೂ ಗೋಪಿಚಂದ್ ಅವರಿಗೆ ಖ್ಯಾತ ಕ್ರಿಕೆಟಿಗ ಹಾಗೂ ರಿಯೋ ಒಲಿಂಪಿಕ್‌ನ ಅಂಬಾಸಿಡರ್‌ ಸಚಿನ್‌‌ ತೆಂಡೂಲ್ಕರ್ ಅವರು ಬಿಎಂಡಬ್ಲ್ಯೂಕಾರಿನ ಕೀ ಹಸ್ತಾಂತರಿಸಿದರು.

ಗೋಪಿಚಂದ್ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ಇಂದು ನಡೆದ ಅದ್ದೂರಿ ಸಮಾರಂಭದಲ್ಲಿ ಬಿಎಂಡಬ್ಲ್ಯೂಕಾರುಗಳನ್ನು ಉಡುಗೊರೆಯಾಗಿ ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ, ಉದ್ಯಮಿ ವಿ.ಚಾಮುಂಡೇಶ್ವರನಾಥ್ ಅವರು ನೀಡಿದರು

ಕ್ರೀಡೆ ಇನ್ನಷ್ಟು

ಪ್ರಮುಖ ಸುದ್ದಿಗಳು