Oyorooms IN

Saturday, 22nd July, 2017 4:26 PM

BREAKING NEWS

ಪ್ರಮುಖ ಸುದ್ದಿಗಳು

ಚೆನ್ನಾಗಿ ನಿದ್ರೆ ಮಾಡಿ  ಸೌಂದರ್ಯ ಹೆಚ್ಚಿಸಿ

 %e0%b2%b8%e0%b2%b2%e0%b2%bf%e0%b2%aa%e0%b2%bf%e0%b2%a8%e0%b2%97

ಚೆನ್ನಾಗಿ ನಿದ್ರೆ ಮಾಡಿದರೆ ಮೈ ಮನಸ್ಸಿಗೆ ನೆಮ್ಮದಿ ಹಾಗೂ ಆರಾಮ ದೊರೆಯುತ್ತದೆ. ಆದರೆ ಇದರಿಂದ ಕೇವಲ ಆರಾಮ ಮಾತ್ರವಲ್ಲ ನಿಮ್ಮ ಮೂಡ್‌ನ್ನು ಬೂಸ್ಟ್‌ ಮಾಡುತ್ತದೆ ಹಾಗೂ ಡಾರ್ಕ್‌ ಸರ್ಕಲ್‌ ಸಮಸ್ಯೆ ನಿವಾರಣೆ ಮಾಡುತ್ತದೆ. ಚೆನ್ನಾಗಿ ನಿದ್ರೆ ಮಾಡುವುದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇಲ್ಲಿದೆ ನಿದ್ರೆ ಮಾಡುವುದರ ಹಿಂದೆ ಅಡಗಿರುವ ಬ್ಯೂಟಿ ಸೀಕ್ರೆಟ್‌.
ಮುಖದ ಎಲ್ಲಾ ಸಮಸ್ಯೆ ನಿವಾರಣೆ : ಬ್ಯೂಟಿ ಸ್ಲೀಪ್‌ ಎಂಬುದು ನಿಜ. ಚೆನ್ನಾಗಿ ನಿದ್ರೆ ಮಾಡಿದರೆ ಮಾತ್ರ ದಿನದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಸ್ಕಿನ್‌ ಫ್ರೆಶ್‌ ಆಗುತ್ತದೆ. ಚೆನ್ನಾಗಿ ನಿದ್ರೆ ಮಾಡಿ ಎದ್ದಾಗ ನಿಮಗೆ ಫ್ರೆಶ್‌ ಫೀಲ್‌ ಆಗೋದು ಇದೇ ಕಾರಣಕ್ಕೆ.

ಕಣ್ಣುಗಳುಚೆನ್ನಾಗಿ ನಿದ್ರೆ ಮಾಡುವುದರಿಂದ ಕಣ್ಣುಗಳಿಗೆ ಆರಾಮ ಸಿಗುತ್ತದೆ. ಉಬ್ಬಿದ ಕಣ್ಣುಗಳು ಹಾಗೂ ಸುತ್ತಲೂ ಡಾರ್ಕ್‌ ಸರ್ಕಲ್‌ ಇದ್ದರೆ ಮುಖದ ಅಂದವೇ ಕೆಡುತ್ತದೆ. ಇದೆಲ್ಲಾ ಆಗಬಾರದು ಎಂದಾದರೆ ಚೆನ್ನಾಗಿ ನಿದ್ರೆ ಮಾಡಲೇಬೇಕು.

ಕೂದಲು : ಚೆನ್ನಾಗಿ ನಿದ್ರೆ ಮಾಡುವುದರಿಂದ ಆರೋಗ್ಯಯುತ ಕೂದಲು ಪಡೆದುಕೊಳ್ಳಲು ಸಹಾಯವಾಗುತ್ತದೆ. ಅಲ್ಲದೇ ಕೆರೆತ, ತಲೆಹೊಟ್ಟು, ಡ್ಯಾಮೇಜ್‌ ಮೊದಲಾದ ಸಮಸ್ಯೆ ನಿವಾರಣೆಯಾಗಿ ಕೂದಲು ಬೇಗನೆ ಬೆಳೆಯುತ್ತದೆ.

ತುಂಬಾ ಆಕರ್ಷಕವಾಗಿ ಕಾಣುತ್ತೀರಿಚೆನ್ನಾಗಿ ನಿದ್ರೆ ಮಾಡುವುದರಿಂದ ನೀವು ಆರೋಗ್ಯಯುತವಾಗಿ ಕಾಣುತ್ತೀರಿ ಅಲ್ಲದೇ ಮುಖದ ಅಂದವೂ ಹೆಚ್ಚಾಗಿ ಆಕರ್ಷಕವಾಗಿ ಕಾಣಿಸಬಲ್ಲಿರಿ.

ಸುಕ್ಕುಗಳುನೀವು ನಿದ್ರೆ ಮಾಡುವ ಸಂದರ್ಭ ಶರೀರ ಹೆಚ್ಚು ಪ್ರೋಟೀನ್‌ ಬಿಡುಗಡೆ ಮಾಡುತ್ತದೆ. ಜೊತೆಗೆ ಸ್ಕಿನ್‌ ಮೇಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಎಂಟು ಗಂಟೆ ಚೆನ್ನಾಗಿ ನಿದ್ರೆ ಮಾಡಿದರೆ ಮುಖದ ಮೇಲೆ ಸೊಕ್ಕು ಕಾಣಿಸಿಕೊಳ್ಳುವುದಿಲ್ಲ.

ನಿದ್ರೆಯ ಲಾಭಗಳು
ಒಬ್ಬ ಆರೋಗ್ಯವಂತ ಮನುಷ್ಯನಿಗೆ ರಾತ್ರಿ ಸಾಮಾನ್ಯವಾಗಿ 7 ರಿಂದ 8 ತಾಸುಗಳಷ್ಟು ನಿದ್ರೆ ಅತ್ಯಗತ್ಯ. ಈ ಮಾಪನವು ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಮಕ್ಕಳಲ್ಲಿ ಯುವಕರಲ್ಲಿ ಹಾಗೂ ವೃದ್ಧಾಪ್ಯದಲ್ಲಿ ವ್ಯತ್ಯಾಸಗೊಳ್ಳುತ್ತದೆ.
1. ಸುಖಪೂರ್ವಕವಾಗಿ ನಿದ್ರಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ.
2. ಶರೀರದ ಪೋಷಣೆಯಾಗುತ್ತದೆ.
3. ಶರೀರದ ಬಲ ವೃದ್ಧಿಯಾಗುತ್ತದೆ.
4. ದೀರ್ಘವಾದ ಆಯುಸ್ಸನ್ನು ಒದಗಿಸುತ್ತದೆ.
5. ನಪುಂಸಕತೆಯನ್ನು ಹೋಗಲಾಡಿಸುತ್ತದೆ.
6. ದೇಹದ ಧಾತುಗಳು ಸಮ ಸ್ಥಿತಿಯಲ್ಲಿರುತ್ತವೆ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...