Oyorooms IN

Wednesday, 25th January, 2017 6:48 AM

BREAKING NEWS

ಪ್ರಮುಖ ಸುದ್ದಿಗಳು

ಮೇಕೆಗಾಗಿ ಗಂಡು ಮಗುವನ್ನು ಮಾರಿದ ಮಹಾತಾಯಿ..!!!

CHILD

ಜಾರ್ಖಂಡ್ : ರಾಮ್ ಗಡ ಪ್ರಾಂತ್ಯದಲ್ಲಿರುವ ಗಿರಿಜನ ಮಹಿಳೆಯೊಬ್ಬಳು ತನ್ನ ಮೂರು ದಿನದ ಗಂಡ ಮಗುವನ್ನು ಕೇವಲ 2 ಸಾವಿರಕ್ಕೆ ಮಾರಾಟ ಮಾಡಿದ್ದಾಳೆ,  ಆ ದುಡ್ಡಿನಿಂದ 2 ಮೇಕೆಯನ್ನು ಕೊಂಡುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ದೇವಿ ಎನ್ನುವ ಗಿರಿಜನ ಮಹಿಳೆ ಮೂರು ದಿನದ ಹಿಂದಷ್ಟೇ ಗಂಡು ಮಗುವಿಗೆ ಜನ್ಮನೀಡಿದ್ದಾಳೆ, ಆ ಮಗುವನ್ನು ಮಾರಿ ಮೇಕೆಯನ್ನು ಕೊಂಡುಕೊಂಡಿದ್ದರ ಉದ್ದೇಶ ಊರಿನವರಿಗೆ ಊಟ ಹಾಕಿಸಲು ಅನ್ನುವುದೇ ವಿಶೇಷ.

ಕಳೆದ ಆರು ತಿಂಗಳ ಹಿಂದೆಯೇ ದೇವಿಯ ಗಂಡ ತೀರಿಕೊಂಡಿದ್ದಾನೆ, ಈಗಾಗಲೇ ನಾಲ್ವರು ಮಕ್ಕಳಿದ್ದಾರೆ, ಇನ್ನೊಂದು ಮಗುವನ್ನ ಸಾಕಲಾಗದೇ ಮಗುವನ್ನು ಮಾರಿದ್ದಾಗಿ, ದೇವಿ ಹೇಳಿಕೊಂಡಿದ್ದು, ಅಸಲಿಗೆ ಮಗು ಮಾರೋದಕ್ಕೆ ಇದು ಕಾರಣವಲ್ಲ ಎಂದು ತಿಳಿದು ಬಂದಿದೆ.

ದೇವಿ, ಬುಡಕಟ್ಟಿನ ಪ್ರಕಾರ ಗಂಡು ಮಗು ಹುಟ್ಟಿದ ಮನೆಯವರು, ವನ ದೇವತೆಗೆ ಮೇಕೆ ಬಲಿಕೊಟ್ಟು, ಊರಿನವರಿಗೆ ಬಾಡೂಟ ಹಾಕಿಸಬೇಕಂತೆ, ಹೀಗೆ ಮಾಡದಿದ್ದರೆ, ವನದೇವತೆ ಮುನಿಸಿಕೊಳ್ಳುತ್ತಾಳೆ ಅನ್ನುವುದು ಅವರ ನಂಬಿಕೆ.

ದೇವಿಗೆ ಗಂಡು ಮಗು ಹುಟ್ಟಿದ ವಿಷಯ ತಿಳಿದ ಮುಖಂಡರು ದೇವಿ ಮನೆಗೆ ಬಂದು 2 ಮೇಕೆಗಳನ್ನು ವನದೇವತೆಗೆ ಬಲಿ ನೀಡುವಂತೆ ಸೂಚಿಸಿದ್ದಾರೆ, ದುಡ್ಡಿಲ್ಲದೆ, ಮೇಕೆಯನ್ನು ತರುವುದಕ್ಕಾಗಿ ಮಗು ಮಾರಾಟ ಮಾಡಿ ಮೇಕೆ ತಂದು ಊರಿನವರಿಗೆ ಊಟ ಹಾಕಿಸೋದಕ್ಕಾಗಿ ಹೀಗೆ ಮಗು ಮಾರಾಟ ಮಾಡಲಾಗಿದೆ ಅಂತೆ.

ಮಗು ಮಾರಾಟ ಮಾಡಿದ ವಿಷಯ ತಿಳಿದ ಅಧಿಕಾರಿಗಳು ವಾಪಾಸ್ ದೇವಿ ಮಡಿಲಿಗೆ ಸೇರಿಸಿದ್ದಾರೆ, ಮಗು ಮಾರಾಟ ಮಾಡಿದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ದೇವಿ ವಿಚಾರಣೆ ನಡೆಸಿದ್ದಾರೆ.

English summary: A woman from birhor community, a primitive tribal group, reportedly sold her 3 days son for 2000 rs.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು