Oyorooms IN

Sunday, 20th August, 2017 10:52 PM

BREAKING NEWS

ಧಾರವಾಡ

ತಂದೆಯನ್ನು ಹೊರಹಾಕಿದ ಮಕ್ಕಳು, ಹುಬ್ಬಳ್ಳಿ ವ್ಯಕ್ತಿಯ ಸಹಾಯಕ್ಕೆ ಮೋದಿ

ಧಾರವಾಡ: ಮುಪ್ಪಿನ ಕಾಲದಲ್ಲಿ ತಂದೆ ತಾಯಿಗಳಿಗೆ ಆಸರೆಯಾಗಬೇಕಾದ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ಸವೆಸುತ್ತಾರೆ, ಬೆಳೆದು ದೊಡ್ಡವರಾದ ಮಕ್ಕಳು ತಂದೆ-ತಾಯಿಗಳನ್ನು ಕಾಲಕಸಕ್ಕಿಂತ ನೋಡುವ ಮಕ್ಕಳ ಸಂಖ್ಯೆ ಕಡಿಮೆಯೇನಿಲ್ಲ, ಮಕ್ಕಳ ಭವಿಷ್ಯಕ್ಕಾಗಿ ಜೀವನ ಸವೆಸಿದ ತಂದೆಯೊಬ್ಬ ಈಗ ಬೀದಿಪಾಲಾಗಿದ್ದು, ಅಂತಹ ಅಸಹಾಯಕ ತಂದೆಯ ಸಹಾಯಕ್ಕೆ ಈಗ ದೇಶದ ಪ್ರಧಾನಿ ನರೇಂದ್ರ ಮೋದಿ ಧಾವಿಸಿದ್ದಾರೆ.

ಹುಬ್ಬಳ್ಳಿಯ ಗಾಮನಗಟ್ಟಿಯ ವೆಂಕಟರೆಡ್ಡಿ ಅವರು ಮೂಲತಃ ಕಾರವಾರದವರು, ಮೂರು ಮಕ್ಕಳ ತಂದೆಯಾದ ವೆಂಕಟರೆಡ್ಡಿ ಅವರು, ತಮ್ಮ ಗಂಡು ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಪಟ್ಟಿದ್ದಾರೆ, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿದ ವೆಂಕಟರೆಡ್ಡಿ ಅವರನ್ನು ಅನಾಥರನ್ನಾಗಿ ಮಾಡಿರುವ ಮಕ್ಕಳು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಉತ್ತಮ ನೌಕರಿಯಲ್ಲಿರುವ ಮಕ್ಕಳು ತಂದೆ-ತಾಯಿಯ ಜೀವನೋಪಾಯಕ್ಕಾಗಿ ಮೊದಮೊದಲು ಅಲ್ಪಸ್ವಲ್ಪ ಹಣವನ್ನು ಮಕ್ಕಳು ನೀಡುತ್ತಿದ್ದರು, ವೆಂಕಟರೆಡ್ಡಿ ಅವರ ಮೊದಲ ಪತ್ನಿ ಸಾವನ್ನಪ್ಪಿದ ಬಳಿಕ, ಬೈಪಾಸ್ ಸರ್ಜರಿಗೆ ಒಳಗಾದ ವೆಂಕಟರೆಡ್ಡಿ, ತಮ್ಮನ್ನು ನೋಡಿಕೊಳ್ಳಲು ವಿಧವೆಯಾದ ಸುಮಲತಾ ಅವರನ್ನು ಮರುಮದುವೆಯಾಗಿದ್ದಾರೆ, ತಂದೆ ಮರು ಮದುವೆಯಾಗಿದ್ದರಿಂದ ಮಕ್ಕಳು ತಂದೆಯನ್ನು ದೂರ ಮಾಡಿದ್ದಲ್ಲದೆ, ಹಣವನ್ನು ನೀಡುವುದನ್ನು ನಿಲ್ಲಿಸಿದ್ದಾರೆ, ಇದರಿಂದ ವೆಂಕಟರೆಡ್ಡಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಕಾರವಾರದ ಉಪವಿಭಾಗಾಧಿಕಾರಿ ಒಂದು ವರ್ಷದ ಹಿಂದೆಯೇ ಮಕ್ಕಳು ವೆಂಕಟರೆಡ್ಡಿ ಅವರಿಗೆ ಪ್ರತಿ ತಿಂಗಳು 20 ಸಾವಿರ ನೀಡುವಂತೆ ಆದೇಶ ಮಾಡಿದ್ದಾರೆ, ಆದರೆ ಮಕ್ಕಳು ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿಲ್ಲ, ನ್ಯಾಯಾಲಯದ ಆದೇಶವನ್ನು ಕಚೇರಿಗಳಿಗೆ ಅಲೆದರು, ಯಾವುದೇ ಪ್ರಯೋಜನವಾಗದೇ ಇರುವುದರಿಂದ  ವೆಂಕಟರೆಡ್ಡಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರವನ್ನು ಬರೆದಿದ್ದರು.

ವೆಂಕಟರೆಡ್ಡಿ ಅವರ ಪತ್ರಕ್ಕೆ ಮೋದಿ ಕಚೇರಿಯಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಾರವಾರ ಉಪವಿಭಾಗಾಧಿಕಾರಿಗೆ ಕ್ರಮ ತೆಗೆದುಕೊಳ್ಳುವಂತೆ ಪತ್ರ ಬಂದಿದೆ. ತಂದೆ-ಮಕ್ಕಳ ನಡುವಿನ ಜಗಳದಲ್ಲಿ ಮುನಿಸಿಕೊಂಡಿರುವ ಮಕ್ಕಳಿಂದ, ಅಸಹಾಯಕ ತಂದೆಗೆ ನ್ಯಾಯಕೊಡಿಸಲು ಪ್ರಧಾನಿಯವರು ಮಧ್ಯಪ್ರವೇಶಿಸಿದ್ದಾರೆ.

English summary:  sons refuse to give money for fathers livelihood pm modi intervenes

ಧಾರವಾಡ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...