Oyorooms IN

Wednesday, 24th May, 2017 7:59 AM

BREAKING NEWS

ಜಿಲ್ಲಾ ಸುದ್ದಿಗಳು

ಶಿವಮೊಗ್ಗ : ಲಾಡ್ಜ್‌ನಲ್ಲಿ ಅನೈತಿಕ ಚಟುವಟಿಕೆಗೆ ಅವಕಾಶವಿಲ್ಲ, ಎಸ್ ಪಿ ರವಿ ಚೆನ್ನಣ್ಣನವರ್

ಶಿವಮೊಗ್ಗ : ಲಾಡ್ಜ್‌ನಲ್ಲಿ ಅನೈತಿಕ ಚಟುವಟಿಕೆಗೆ ಅವಕಾಶವಿಲ್ಲ, ಎಸ್ ಪಿ ರವಿ ಚೆನ್ನಣ್ಣನವರ್

ಶಿವಮೊಗ್ಗ : ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ಲಾಡ್ಜ್ ಹೋಟೆಲ್‌ಗಳ ಲೈಸೈನ್ಸ್ ರದ್ದುಗೊಳಿಸಲಾಗುವುದು., ಹಾಗೂ ಮಾಲಿಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ರವಿ ಡಿ. ಚೆನ್ನಣ್ಣವರ್ ಎಚ್ಚರಿಸಿದ್ದಾರೆ.

ವೇಶ್ಯಾವಾಟಿಕೆ ದಂಧೆಗೆ ಅವಕಾಶ ನೀಡುತ್ತಿದ್ದ ಆಪಾದನೆಯ ಮೇರೆಗೆ ನಗರದ ಲಾಡ್ಜ್ ಮಾಲಕರೋರ್ವರನ್ನು ಬಂಧಿಸಲಾಗಿದೆ. ಹಾಗೆಯೇ ಲಾಡ್ಜ್‌ನ ಲೈಸೈನ್ಸ್ ರದ್ದುಗೊಳಿಸಲು ಕೂಡ ಕ್ರಮಕೈಗೊಳ್ಳಲಾಗಿದೆ.

ಯಾವುದೇ ಕಾರಣಕ್ಕೂ ಲಾಡ್ಜ್ – ಹೋಟೆಲ್‌ಗಳಲ್ಲಿ ವೇಶ್ಯಾವಾಟಿಕೆ ಹಾಗೂ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ಕಲ್ಪಿಸಬಾರದು. ಈ ನಿಟ್ಟಿನಲ್ಲಿ ಮಾಲಕರು ಎಚ್ಚರವಹಿಸಬೇಕು. ಪೊಲೀಸ್ ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಬಂಧನ: ಇತ್ತೀಚೆಗೆ ನೆಹರೂ ರಸ್ತೆಯ ಕೆಂಚಾಂಬಾ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ಹಲವರನ್ನು ಬಂಧಿಸಿದ್ದರು. ಈ ಲಾಡ್ಜ್‌ನಲ್ಲಿ ಕಳೆದ ಹಲವು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು. ಹಲವು ಬಾರಿ ಪೊಲೀಸರು ಕೂಡ ಲಾಡ್ಜ್ ಮೇಲೆ ದಾಳಿ ನಡೆಸಿ, ಕೇಸ್ ದಾಖಲಿಸಿದ್ದರು. ಹಾಗೆಯೇ ಮಾಲಕನಿಗೆ ನೋಟೀಸ್ ಕೂಡ ಜಾರಿಗೊಳಿಸಿದ್ದರು.

ಇತ್ತೀಚೆಗೆ ಲಾಡ್ಜ್‌ನಲ್ಲಿ ಮತ್ತೆ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಲಾಡ್ಜ್ ಮಾಲೀಕ ರವಿ ಎಂಬಾತನನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಹಾಗೆಯೇ ಲಾಡ್ಜ್‌ನ ಲೈಸೈನ್ಸ್ ರದ್ದುಗೊಳಿಸುವಂತೆ ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ.

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...