Oyorooms IN

Saturday, 22nd July, 2017 4:28 PM

BREAKING NEWS

ಪ್ರಮುಖ ಸುದ್ದಿಗಳು

ಪಿತೃಪಕ್ಷ -ಮಹಾಲಯ ಅಮಾವಾಸ್ಯೆ ವಿಶೇಷತೆ

mna-1

ಇಂದು ಮಹಾಲಯ ಅಮಾವಾಸ್ಯೆ. ಇದನ್ನು ಭಾದ್ರಪದ ಕೃಷ್ಣ ಅಮಾವಾಸ್ಯೆ ಎಂದೂ, ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ಈ ದಿನದಂದು ನಮ್ಮನ್ನು ಅಗಲಿದ ಹಿರಿಯರಿಗೆ ವಂದಿಸಿ, ಅವರಿಗೆ ಇಷ್ಟವಾದ ಪದಾರ್ಥಗಳನ್ನು ಮಾಡಿ ತಿಲ ದರ್ಪಣವನ್ನು, ಜಲ ದರ್ಪಣವನ್ನು ಹಾಗೂ ಬಲಿಯನ್ನು, ಪಿಂಡವನ್ನು ನೀಡಲಾಗುವುದು. ಇದರಿಂದ ನಮ್ಮ ಪಿತೃಗಳು ತೃಪ್ತರಾಗಿ ಮುಂದಿನ ಪೀಳಿಗೆಗೆ ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂಬುವುದು ನಂಬಿಕೆ. ಮಹಾಲಯ ಅಮಾವಾಸ್ಯೆಯ ಪೌರಾಣಿಕ ಹಿನ್ನಲೆ: ಮಹಾಭಾರತ ಕತೆಯಲ್ಲಿ ಕುಂತಿ ಪುತ್ರನಾದ ಕರ್ಣನು, ಕೌರವರರ ಪಡೆಯ ಕಡೆ ನಿಂತು, ಪಾಂಡವರ ವಿರುದ್ಧ ಹೋರಾಡಿದನು. ಈ ಯುದ್ಧದಲ್ಲಿ ಕರ್ಣನು ಅರ್ಜುನನಿಂದ ಹತನಾದನು. ಹೀಗೆ ಹತನಾದ ಕರ್ಣನನ್ನು ದೇವದೂತರು ಸ್ವರ್ಗಕ್ಕೆ ಕರೆದು ಕೊಂಡು ಹೋಗುವಾಗ ಕರ್ಣನಿಗೆ ತುಂಬಾ ಹಸಿವಾಗುತ್ತದೆ. ಆದರೆ ಮಾರ್ಗ ಮಧ್ಯದಲ್ಲಿ ಕರ್ಣನಿಗೆ ತಿನ್ನಲು ಏನೂ ಸಿಗುವುದಿಲ್ಲ. ಅವನಿಗೆ ಎಲ್ಲೆಲ್ಲೂ ಬಂಗಾರ, ಬೆಳ್ಳಿ ಮುಂತಾದ ಆಭರಣಗಳೇ ಕಾಣುತ್ತವೆ. ಹಸಿವು ತಾಳಲಾರದೆ ಕರ್ಣನು ಯಮಧರ್ಮನನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಕರ್ಣನ ಪ್ರಾರ್ಥನೆಗೆ ಯಮನು ಪ್ರತ್ಯಕ್ಷನಾಗಿ ಭಾದ್ರಪದಮಾಸದ ಮಹಾಲಯ ಪಕ್ಷದ ದಿನಗಳಂದು ದಾನವನ್ನು ಮಾಡುವಂತೆ ಹೇಳುತ್ತಾನೆ. ಯಮನ ಆದೇಶದಂತೆ ಕರ್ಣನು ಮತ್ತೆ ಭೂಮಿಗೆ ಹಿಂತಿರುಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನಗಳಂದು ತನ್ನ ಹಿರಿಯರಿಗೆ ಹಾಗೂ ಬಡವರಿಗೆ ಅನ್ನ ಹಾಗು ವಸ್ತ್ರದಾನವನ್ನು ಮಾಡುತ್ತಾನೆ. ಇದರಿಂದ ಸಂತುಷ್ಟರಾದ ಪಿತೃಗಳು ಅವನನ್ನು ಹರಸುತ್ತಾರೆ. ಹಿರಿಯರ ಆರ್ಶೀವಾದ ಪಡೆದ ಕರ್ಣನು ಯಾವುದೇ ತೊಂದರೆಯಿಲ್ಲದೇ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಪುರಾಣಗಳಲ್ಲಿ ಹೇಳಿದೆ. ಈ ಕತೆಯ ಆಧಾರದ ಮೇಲೆ ಪ್ರತಿವರ್ಷವೂ ಮಹಾಲಯ ಅಮಾವಾಸ್ಯೆಗೆ ನಮ್ಮನ್ನು ಅಗಲಿದ ಹಿರಿಯರನ್ನು ತಪ್ತಿಪಡಿಸಲು ಅವರಿಗೆ ಇಷ್ಟವಾದ ಅಡುಗೆಗಳನ್ನು (ವೆಜ್ ಹಾಗೂ ನಾನ್ ವೆಜ್) ಹಾಗೂ ವಸ್ತ್ರಗಳನ್ನು ಇಟ್ಟು ಆರ್ಶೀವಾದ ಕೇಳುವ ಆಚರಣೆ ತಲಾತಲಾಂತರಗಳಿಂದ ಪಾಲಿಸಲಾಗುತ್ತಿದೆ.

ಸಾಮಾನ್ಯವಾಗಿ ನಮ್ಮಲ್ಲಿ ಪಿತೃಗ ತೀರಿ ಹೋದ ದಿನವ ತಿಥಿ (ಶ್ರಾದ್ಧ) ಹೇಳಿ ಮಾಡುತ್ತವು .
ಒಂದು ವೇಳೆ ಶ್ರಾದ್ಧ ಮಾಡ್ಲೆ ಆಗದ್ದೆ ಇದ್ದಲ್ಲಿ ಅಥವಾ ಪ್ರಕೃತಿಯ ವಿಕೋಪಕ್ಕೋ, ಅಪಘಾತಕ್ಕೋ ತುತ್ತಾಗಿ ತೀರಿ ಹೋದವರ ದಿನ ಗೊಂತಾಗದ್ದೇ ಇದ್ದಲ್ಲಿ, ಮಹಾಲಯ ಅಮಾವಾಸ್ಯೆಯ ದಿನ ಅವರ ಹೆಸರಿಲಿ ಮಾಡುವ ದಾನಂಗ ಅವಕ್ಕೆ ನೇರವಾಗಿ ಸೇರುತ್ತು ಹೇಳಿ ಹೇಳ್ತವು ಬಟ್ಟಮಾವ..

ಪಿತೃಗ ತೀರಿಹೋದ ಮಾಸ-ದಿನಲ್ಲಿ ಶ್ರಾದ್ಧ ಮಾಡಿದರೂ ಪಿತೃ ಪಕ್ಷಲ್ಲಿ ಎಂಥಕೆ ನಮ್ಮಲ್ಲಿ ಅಷ್ಟಗೆ ಹೇಳಿ ಮಾಡ್ತವು?ಹೇಳುವ ಪ್ರಶ್ನೆ ಬಪ್ಪದು ಸಹಜ..
ಈ ದಿನಲ್ಲಿ ಪಿತೃದೇವತೆಗಳ ಹೆಸರಿಲಿ ಮಾಡಿದ ದಾನ ಅವಕ್ಕೆ ನೇರವಾಗಿ ತಲುಪಲಿ ಹೇಳಿ ಯಮ ವರ ಕೊಟ್ಟಿದಡ . ಭಾದ್ಯಸ್ಥರಿರಲಿ ಇಲ್ಲದಿರಲಿ, ಅವರ ಹೆಸರಿಲಿ ಮಹಾಲಯದಂದು ನಾವು ಮಾಡುವ ಅನ್ನದಾನ ಅವರ ಆತ್ಮಕ್ಕೆ ಶಾಂತಿಯ ಕೊಡುತ್ತು ಹೇಳುವ ನಂಬಿಕೆ. ಪಿತೃಕಾರ್ಯ ಬಹಳ ಶ್ರೇಷ್ಠ .

ಪಿತೃ ಪಕ್ಷವು ಚಾಲ್ತಿಗೆ ಬಪ್ಪ ಹಿಂದೆ ಒಂದು ಕಥೆ ಇದ್ದು.
ಮಹಾಭಾರತದ ದುರಂತ ನಾಯಕ ಕರ್ಣ ‘ದಾನ ಶೂರ’ ಹೇಳಿಯೇ ಪ್ರಸಿದ್ಧ .
ಇಹಲೋಕದ ಜೀವನ ಮುಗಿಸಿ ಹೋದ ಅವಂಗೆ ಪರಲೋಕಲ್ಲಿ ಅವ ಮಾಡಿದ ದಾನದ ನೂರು ಪಟ್ಟು ಕೊಟ್ಟವಡ .  ಅವಂಗೆ ಅಲ್ಲಿ ಸಿಕ್ಕಿದ್ದೆಲ್ಲಾ ಬರೀ ಚಿನ್ನ, ಬೆಳ್ಳಿ ಇತ್ಯಾದಿ. ಅಷ್ಟೈಶ್ವರ್ಯ ಅವನ ಮುಂದೆ ಇದ್ದರೂ ತಿಂಬಲೆ ಏವದೂ ಎಡಿಗಾಯಿದಿಲ್ಲೆ! ಎಂಥಕೆ ಹೇಳಿರೆ ಜೀವಿತ ಕಾಲಲ್ಲಿ ಅವ ಇಂತಹ ದಾನಂಗಳನ್ನೇ ಮಾಡಿದ್ದನೇ ಹೊರತು ಅನ್ನದಾನ ಮಾಡಿದ್ದಾ ಇಲ್ಲೆಡ !!

ತಿಂಬಲೆ ಹೊಟ್ಟೆಗಿಲ್ಲದ್ದ ಮೇಲೆ ಐಶ್ವರ್ಯ ಮಡಿಕ್ಕೊಂಡಾದರೂ ಎಂತ ಮಾಡ್ಳಕ್ಕು? ಹಾಂಗಾಗಿ ಕರ್ಣ, ಯಮನ ಪ್ರಾರ್ಥನೆ ಮಾಡಿ, ಹದಿನಾಲ್ಕು ದಿನದ ಕಾಲ ಭೂಮಿಗೆ ಹೋಗಿ ಬಪ್ಪಲೆ ಅನುಮತಿ ಬೇಡಿದ.
ಅನುಮತಿ ಸಿಕ್ಕ ಅವ, ಭೂಮಿಗೆ ಬಂದು,ಒಂದು ಮಾಸಲ್ಲಿ ಏವಾಗ ಎರಡು ಅಮಾವಾಸ್ಯೆ ಬತ್ತೋ ಆ ಹದಿನಾಲ್ಕು ದಿನಂಗಳ ಕಾಲ ವಿಪ್ರ ಭೋಜನ,ಪಾಪದವಕ್ಕೆ ಅಶನ -ನೀರು ದಾನ ಮಾಡಿ ಪುಣ್ಯ ಸಂಪಾದನೆ ಮಾಡಿ ಪರಲೋಕಕ್ಕೆ ಬಂದ . ಆ ಹದಿನಾಲ್ಕು ದಿನಂಗಳ ಸೇರ್ಸಿ ಮಹಾಲಯವೂ(ಅಮಾವಾಸ್ಯೆ) ಸೇರಿ ‘ಪಿತೃ ಪಕ್ಷ‘ಹೇಳಿ ಆತು..

mna

ಪಿತೃ ಪಕ್ಷಲ್ಲಿ ಪಿತೃಗ ಕಾಲವಾದ ದಿನಕ್ಕೆ ಅನುಗುಣವಾಗಿ ಜಲ/ತಿಲ ತರ್ಪಣ, ತಿಥಿ ಅಥವಾ ಶ್ರಾದ್ಧ ಮಾಡ್ತವು ಅಥವಾ ಅಮಾವಾಸ್ಯೆಯಂದೂ ಮಾಡ್ತವು. ಇದಕ್ಕೆ ಪಾರ್ವಣ ಶ್ರಾದ್ಧ ಹೇಳಿಯೂ ಹೇಳ್ತವು. ಜನನ-ಮರಣಕ್ಕೆ ಹೇಂಗೆ ಜಾತಿ ಭೇದ ಇಲ್ಲೆಯೋ ಹಾಂಗೆ ಪಿತೃ ಕಾರ್ಯಕ್ಕೂ ಜಾತಿ-ಭೇದ ಇಲ್ಲೆ . ಹಿಂದೂ ಮತಕ್ಕೆ ಸೇರಿದ ಎಲ್ಲೋರು ಪಿತೃಕಾರ್ಯ ಮಾಡ್ಲೆ ಅರ್ಹನಾದ ಪ್ರತಿಯೊಬ್ಬನೂ ಅವರದ್ದೇ ಆದ ಆಚಾರಂಗಳ ಮೂಲಕ ಪಿತೃಗಕ್ಕೆ ವಂದಿಸುತ್ತವು .
ಮಹಾಲಯದ ಅಷ್ಟಗೆಲಿ ಒಟ್ಟು ೪೮ ಜನಂಗೊಕ್ಕೆ ಪಿಂಡ ಪ್ರದಾನ ಮಾಡ್ಲೆ ಇದ್ದಡ. ಈ ಹದಿನೈದು ದಿನಂಗಳ ಸಮಯಲ್ಲಿ ಬೇರೆ ಯಾವ ಶುಭ ಕಾರ್ಯಂಗಳನ್ನೂ ಮಾಡ್ತ ಪದ್ಧತಿ ಇಲ್ಲೆ .

ಮಹಾಲಯ ಅಮಾವಾಸ್ಯೆಯ ದಿನ ಪಿತೃಗ ಪರಲೋಕಂದ ಇಹಲೋಕಕ್ಕೆ ಬಂದು ತಮ್ಮ ವಂಶಸ್ತರ ಮನಗೆ ಬತ್ತವು ಹೇಳುವ ನಂಬಿಕೆ..
ಪಿತೃಪಕ್ಷಲ್ಲಿ ಪಿತೃಗಕ್ಕೆ ಮಾಡುವ ಶ್ರಾದ್ಧ ‘ಗಯಾ’ಕ್ಷೇತ್ರಲ್ಲಿ ಮಾಡಿದಷ್ಟೇ ಪುಣ್ಯ ಹೇಳಿ ಹೇಳ್ತವು ಶಾಸ್ತ್ರಿ ಮಾವ..
ಎಲ್ಲ ದಾನಕ್ಕೂ ಅನ್ನದಾನ ಬಹಳ ಮುಖ್ಯ. ಜೀವನದ ಮೂಲ ಆಧಾರವೇ ಆಹಾರ. . ಹಸಿದ ಹೊಟ್ಟೆಯ ಮುಂದೆ ವೇದಾಂತ ಹೇಳಿರೆ ಪ್ರಯೋಜನ ಖಂಡಿತಾ ಇಲ್ಲೆ!!
ಪರಮಾತ್ಮನ ತಿಳಿವಲೆ ದೇಹ ಬೇಕು. ಆ ದೇಹವ ಕಾಪಾಡ್ಲೆ ಆಹಾರ ಬೇಕು. ಭಗವಂತ ನವಗೆ ಕೊಟ್ಟ ಆಹಾರವ ಇನ್ನೊಬ್ಬರಿಂಗೂ ಹಂಚಿತಿಂಬ .ಅನ್ನದಾನದ ಪುಣ್ಯ ಇಹಲೋಕಲ್ಲೂ, ಪರಲೋಕಲ್ಲೂ ಅದರ ಫಲ ಸಿಕ್ಕುತ್ತು ಹೇಳಿ ಒಂದು ಶ್ಲೋಕವ ಬಟ್ಟಮಾವ ಹೇಳಿದವು.

ಆಹಾರಾರ್ಥಂ ಕರ್ಮ ಕುರ್ಯಾದನಿದ್ಯಂ
ಕುರ್ಯಾದಾಹಾರಂ ಪ್ರಾಣಸಂರಕ್ಷಣಾರ್ಥಂ
ಪ್ರಾಣ ರಕ್ಷ್ಯಾಸ್ತತ್ವ ಜಿಜ್ಞಾಸನಾರ್ಥಂ
ತತ್ವಂ ಜಿಜ್ಞಾಸ್ಯಂ ಯೇನ ಭೂಯೋನ ದು:ಖಂ

 ಈ ಅಮಾವಾಸ್ಯೆಯ ಮಾರನೆ ದಿನದಿಂದ ನಾಡಹಬ್ಬ ದಸರಾದ ಹಬ್ಬದ ಸಡಗರ ಪ್ರಾರಂಭವಾಗುವುದು.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...