Oyorooms IN

Saturday, 21st January, 2017 7:34 AM

BREAKING NEWS

ಜಿಲ್ಲಾ ಸುದ್ದಿಗಳು

ರಮ್ಯಾ ಪಾಕಿಸ್ತಾನ ಚೆನ್ನಾಗಿದ್ದರೆ ಅಲ್ಲಿಗೆ ಹೋಗಮ್ಮ, ಬಳ್ಳಾರಿ ಸಂಸದ ಶ್ರೀರಾಮುಲು

sri ramul told plze go to pak ramaya

ಬಳ್ಳಾರಿ : ರಮ್ಯಾ ಪಾಕಿಸ್ತಾನ ಚೆನ್ನಾಗಿದ್ದರೆ ಅಲ್ಲಿಗೆ ಹೋಗಮ್ಮ ಎಂದು ಬಳ್ಳಾರಿ ಸಂಸದ ಶ್ರೀರಾಮುಲು ಅವರು ನಟಿ ರಮ್ಯ ಅವರ ಹೇಳಿಕೆ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಅವರು ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಪಕ್ಷದ ಸಮಾರಂಭದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ನೂರಿಪ್ಪತ್ತು ಕೋಟಿ ಜನರಲ್ಲಿ ನೀನೊಬ್ಬಳು ಹೋದರೆ ನಮಗೇನು ನಷ್ಟ ಇಲ್ಲ ಎಂದು ಶ್ರೀ ರಾಮುಲು ಅವರು ಹೇಳಿದ್ದಾರೆ.

ಸಂಸತ್‌ ಚುನಾವನೆಯಲ್ಲಿ ಸೋತಿರುವ ರಮ್ಯಾ ಹೀಗೆ ಮಾತನಾಡಬಾರದು. ಕೆಲವರು ಪಬ್ಲಿಸಿಟಿ ಗಿಮಿಕ್‍ಗಾಗಿ ಹೀಗೆ ಮಾತನಾಡುತ್ತಾರೆ. ದೇಶ ವಿರೋಧಿಯಾಗಿ ಮಾತನಾಡಿದರೆ ಹೆಚ್ಚನ ಪ್ರಚಾರ ಸಿಗುತ್ತದೆಂದು ಮಾತನಾಡುವುದು ಸರಿಯಲ್ಲ ಎಂದರು..

ದೇಶದ ಪ್ರತಿಯೊಬ್ಬ ಪ್ರಜೆ ನಮ್ಮ ದೇಶದ ಬಗ್ಗೆ ಗೌರವ ಇಟ್ಟುಕೊಂಡಿರಬೇಕು. ಅದು ಬಿಟ್ಟು ನಮ್ಮ ಶತ್ರು ರಾಷ್ಟ್ರವಾಗಿರುವ, ನಮ್ಮ ದೇಶದ ಮೇಲೆ ಭಯೋತ್ಪಾದಕರ ದಾಳಿಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನ ದೇಶ ಚೆನ್ನಾಗಿದೆ. ಅಲ್ಲಿನ ಜನರು ಉತ್ತಮವಾಗಿದ್ದಾರೆ ಎಂದು ಹೋಗಳುವ ರಮ್ಯ ಅವರೇ ರಮ್ಯಾ ಅವರೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಕುಟಕಿದ್ದಾರೆ.

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು