Oyorooms IN

Wednesday, 24th May, 2017 8:00 AM

BREAKING NEWS

ಪ್ರಮುಖ ಸುದ್ದಿಗಳು

ಮಂಗಳೂರು ಮೂಲದ ಬೆಂಗಳೂರು ಬೆಡಗಿಗೆ ಮಿಸ್ ಸುಪ್ರನ್ಯಾಷನಲ್ ಕಿರೀಟ

srinidi

ಬೆಂಗಳೂರು: ಬೆಂಗಳೂರಿನ ಮೋಹಕ ಬೆಡಗಿ ಶ್ರೀನಿಧಿ ಶೆಟ್ಟಿ ಮಿಸ್ ಸುಪ್ರನ್ಯಾಷನಲ್ ಗೌರವಕ್ಕೆ ಪಾತ್ರರಾಗಿದ್ದಾರೆ. ಪೊಲೆಂಡ್ನಲ್ಲಿ ನಡೆದ ಮಿಸ್ ಸುಪ್ರನ್ಯಾಷನಲ್-2016ರ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ಗೆಲುವಿನ ನಗೆ ಬೀರಿದರು.

ಯಮಹಾ ಫ್ರಾನ್ಸಿಸ್ಕೋ ಮಿಸ್ ದಿವಾ ಸುಪ್ರನ್ಯಾಷನಲ್ 2016 ಕಿರೀಟ ಧರಿಸಿದ ಶ್ರೀನಿಧಿ ರಮೇಶ್ ಶೆಟ್ಟಿ ಮಂಗಳೂರು ಮೂಲಕ ಬೆಂಗಳೂರು ಬಾಲೆ. ಶ್ರೀನಿಧಿ ಮಿಸ್ ಸುಪ್ರಇಂಟರ್ನ್ಯಾಷನಲ್ ವಿನ್ನರ್ ಆಗಿರುವ ಎರಡನೇ ಭಾರತೀಯ ರೂಪರಾಶಿ. 2014ರಲ್ಲಿ ಆಶಾ ಭಟ್ ಈ ಪ್ರತಿಷ್ಠಿತ ಕಿರೀಟ ತೊಟ್ಟಿದ್ದರು.

ರಾಜಧಾನಿ ವಾರ್ಸಾದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವೆನುಜುವೆಲಾದ ವಲೇರಿಯಾ ರೂಪಸಿ ವೆಸ್ಪೊಲಿ ಸುರಿನಾಮ್ ಚೆಲುವೆ ಜಾಲೀಸಾ ಪಿಗೋಟ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್-ಅಪ್ ಆದರು. ದ್ವೀಪರಾಷ್ಟ್ರ ಶ್ರೀಲಂಕಾದ ಆರ್ನಲ್ಲಾ ಮಾರಿಯಮ್ ಜಯಸಿರಿ ಗುಣಶೇಖರ ಮತ್ತು ಹಂಗೇರಿಯಾದ ಕೊರಿನ್ನಾ ಕೋಕ್ಸಿಸ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

English summary :   srinidhi shetty miss suprainternational

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...