Oyorooms IN

Monday, 20th February, 2017 4:19 AM

BREAKING NEWS

ಜಿಲ್ಲಾ ಸುದ್ದಿಗಳು

ಎಂ.ಜಿ.ರಸ್ತೆ ಹೊಸವರ್ಷ ಆಚರಣೆ: ಮಹಿಳಾ ಆಯೋಗದಿಂದ ಸುಮೋಟೋ ದೂರು

ತುಮಕೂರು: ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಆಚರಣೆ ವೇಳೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದವರ ಮೇಲೆ ಪೊಲೀಸ್ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಾಲಕ್ಷ್ಮೀಬಾಯಿ ಬೆಂಗಳೂರು ಕಮೀಷನರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಕಾಮಕರ ಕಣ್ಣಿಗೆ ಎಲ್ಲರೂ ಒಂದೇ ರೀತಿ ಕಾಣುತ್ತಾರೆ, ಹೊಸ ವರ್ಷದ ಆಚರಣೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾವಂತರೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಶೋಚನೀಯ ಸಂಗತಿ, ಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ಗಮನಿಸಿ ರಾಜ್ಯ ಮಹಿಳಾ ಆಯೋಗ ಸುಮೋಟೋವಾಗಿ ದೂರು ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರು ಕಮೀಷನರ್ ಅವರಿಗೆ ಸೂಚಿಸಲಾಗಿದ್ದು.

ವರದಿ ಬಂದ ನಂತರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು, ಪ್ರಕರಣ ನಡೆದ ಸ್ಥಳದಲ್ಲಿ 1500 ಪೊಲೀಸರು, ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿತ್ತು, ಯುವತಿಯರಿಗೆ ಕಿರುಕುಳ ನೀಡಿದವರನ್ನು ಪತ್ತೆ ಹಚ್ಚಲು ಇದು ಸುಲಭವಾಗಲಿದ್ದು, ಪಾನಮತ್ತರಾಗಿದ್ದ ಕೆಲವರು ಯುವತಿಯರಿಗೆ ತೊಂದರೆ ನೀಡಿದ್ದಾರೆ, ತೊಂದರೆಗೊಳಗಾದ ಯುವತಿಯರಿಗೆ ಅಲ್ಲಿಂದ ಕೆಲ ಸಾರ್ವಜನಿಕರು, ಪೊಲೀಸರು ಸಹಾಯಮಾಡಿದ್ದಾರೆ. ದುಷ್ಕೃತ್ಯದಲ್ಲಿ ಬಾಗಿಯಾದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

English summary: state women’s commission issue the notice about banglore new year

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...