Oyorooms IN

Saturday, 22nd July, 2017 4:28 PM

BREAKING NEWS

ಕಥೆ

ಒಂದು ಗುಲಾಬಿಯ ಕಥೆ

ಅಂದು ಮುಂಜಾವಿನ ನವೋದಯದಲಿ ತಂಪು ಭೋರ್ಗರೆದು ಸುರಿಯುತಿದ್ದರೆ, ರವಿತೇಜನು ತನ್ನ ಮೃದು ಕಿರಣಗಳನ್ನು ಬೆಚ್ಚನೆಯ ಹಸಿರನೊದ್ದು ಮಲಗಿದ್ದ ವಸುಂಧರೆಯ ಮೈಗೆ ಹೂವಿನ ಬಾಣಗಳನ್ನು ಬಿಟ್ಟು ಜಗವನ್ನು ಎಬ್ಬಿಸುತ್ತಿದ್ದ. ಹಕ್ಕಿಪಕ್ಷಿಗಳ ಚಿಲಿಪಿಲಿ ಗಾನ ಮೋಳಗುತ್ತಿತ್ತು. ಮೂಡಣದೂರಿನ ಭಾನಂಗದಲ್ಲಿ ಕೆಂಬಣ್ಣದ ಹೋಕಳಿ ಚಿತ್ರವನ್ನ ಯಾವ ಚಿತ್ರಕಾರ ಚಿತ್ರಿಸಿದನೋ, ಭುವಿಯು ಸ್ವರ್ಗವನ್ನು ನಾಚುವಂತೆ ಹಸಿರುಡಿಗಡಯನುಟ್ಟು ಮಂಜಿನನಿಗಳ ಆಭಿಷೇಕದಲಿ ಮಿಂದು ಪ್ರಕೃತಿಯ ಮಡಿಲಿನಲಿ  ತೋಗುಯ್ಯಾಲೆಯನು ಕಟ್ಟಿ ರವಿತೇಜನನ ಹಾಗಮನದ ಹಾದಿಯನ್ನು ಕಾಯುತ್ತಿತ್ತು. ನೋಡಿದ ಕಣ್ಣುಗಳು ತೃಪ್ತ, ಮನಸ್ಸು ನಿದ್ದೆಯ ಮಬ್ಬಿನಿಂದ ರೆಕ್ಕೆ ಬಿಚ್ಚಿ ಹಾರಿಬಿಡುತಿತ್ತು. ಅತ್ತ ಪಾವನಿ ತುಂಬು ಯೌನದ ಸುಕನ್ಯೆ, ಸುಕೊಮಲ ಹಾಲ್ಬಣ್ಣದನ್ನೆ ತನ್ನದಾಗಿಸಿಕೊಂಡು ಕನಸಿನಲಿ ಕನಸನ್ನು ಮೇಳೈಸಿ ಮಗುವಿನ ನಗುವನ್ನೊತ್ತು ತನ್ನ ಮನೆಯ ರೂಮಿನಲ್ಲಿ ಬೆಚ್ಚನೆ ಹೊದ್ದು ಮಲಗಿದ್ದಳು. ದೂರದಲ್ಲೆಲ್ಲೊ ಸುಪ್ರಭಾತ ತೇರೆತೇರೆಯಾಗಿ ಬಂದು ಕಿವಿಯಲ್ಲಿ ನುಸುಳಿ ಮುಂಜಾವಿನ ಸಿಹಿ ಕನಸಿಗೆ ತೆರೆತೆರೆಯಾಗಿ ತಂಗಾಳಿಯಲಿ ತೆಲಿಬಂದು ತೊಂದರೆಯೊಡ್ಡಿ ಇವಳನ್ನು ನಿದ್ರಾದೇವಿ ಮಡಿಲಿನಿಂದ ಹೊರ ಎಳೆಯುವ ಪ್ರಯತ್ನ ಮಾಡುತ್ತಲೇ ಇತ್ತು. ಅವಳು ಮತ್ತೆ ಮಡಿಲ ಸೇರಿ ನಿದ್ರೆಗೆ ಜಾರುತಿದ್ದಳು. ಅತ್ತ ಅಮ್ಮ ಮುಂಜಾವಿನ ಪೂಜೆ ಮುಗಿಸಿ ಬಂದು, ಇವಳನ್ನೆಬ್ಬಿಸಲು ಪ್ರಯತ್ನಿಸುತಿದ್ದಳು ಆದರೂ ಆ ಮೈ ಕೊರೆಯ ಚುಮುಚುಮು ಚಳಿಗೆ ಬೆಚ್ಚನೆಯ ಹೊದಿಕೆಯಲ್ಲಿ ಪುಟ್ಟ ಮಗುವಿನಂತೆ ಮುದುರಿಕೊಂಡು ಮಲಗುತಿದ್ದಳು. ಅಮ್ಮ ಮತ್ತೊಮ್ಮೆ ಬಂದು ಬೈಗುಳದ ಸುಪ್ರಭಾತ ಪ್ರರಂಭಿಸಿದಳು, ಆಗ ಪಾವನಿ ಎದ್ದು ನಿದ್ದೆಯ ಮಂಪರಿನಲ್ಲಿ ತನ್ನ ದಿನನಿತ್ಯದ ಕಾರ್ಯಗಳನ್ನು ಮುಗಿಸಿ ತನ್ನ ಕಾಲೆಜೀಗೆ ಹೊಡಲು ಸಿದ್ದಳಾದಳು, ಕಾಲೇಜು ಮುಗಿಸಿಕೊಂಡು ಹಾಗೆ ತನ್ನ ಅಕ್ಕನ ಊರಿಗೂ ಹೋಗಿ ಬರಬೇಕೆಂದು ತಾಯಿ ಹೇಳಿದಾಗ ತುಂಬಾ ಉತ್ಸಹಕದಿಂದ ರೇಡಿಯಾದಳು. ದಂತದ ಗೊಬ್ಬೆಯೇ ನಾಚುವಂತೆ ನೀಲಿ ಸೀರೆಯ ನೆರೆಗೆಯನೊದೆಯುತ್ತ ಬಸ್ ನಿಲ್ದಾಣಕ್ಕೆ ಪಾವನಿ ನಡೆದು ಬರುತ್ತಿದ್ದರೆ, ಕ್ಷೀರಸಾಗರ ಕೋಳದಿಂದ ಹಂಸವೆ ಮಿಂದು ಮೇಲೆದ್ದು ನಡೆದು ಬರುವಂತಿತ್ತು. ನೋಡುಔರ ಕಣ್ಣುಗಳು ಅವಳ ಸೀರೆಯ ನೆರಿಗೆಯಲಿ ಕುಸುರಿಮಾಡಿದ ನಕ್ಷತ್ರಗಳಾಗಿಬಿಡುತ್ತಿದ್ದರು. ಬಸ್ ತಂಗುದಾಣದಲ್ಲಿ ಸ್ವಲ್ಪ ಸಮಯದ ನಂತರ ಬಂದ ಬಸ್ಸನ್ನೆರಿ ತನ್ನ ಕಾಲೇಜಿನ ಕಡೆ ಪಯಣ ಬೆಳೆಸಿದಳು.

1231

ಹಿಮವಂತನೆಂಬ ಬಡ ಪ್ರೇಮಜ್ಯೋಗಿ ಪ್ರತಿ ನಿತ್ಯ ಪೇಟೆಯಿಂದ ತನ್ನ ಪ್ರೀತಿಯ ಮಡದಿಗಾಗಿ ಗುಲಾಬಿ ಹೂಗಳನ್ನು ತಂದು, ಅವಳಿಗೆ ಸಿಂಗರಿಸಿದ ಸಂತೋಷವನ್ನು ಅನುಭವಿಸುವ ಅತಭಾಗ್ಯಾದಾತ. ಪ್ರತಿನಿತ್ಯ ಪೇಟೆಯ ಸಂತೆ ಬೀದಿಗಳಲ್ಲಿ ಇವನು ಬಂದರೆ ಸಾಕು, ಹೂವಿನ ಅಂಗಡಿಯವರು ಇವನನ್ನ ಕರೆದು ‘ಹಣವನ್ನು ನಾಳೆ ಕೊಡು ಹೂ ನಮ್ಮ ಅಂಗಡಿಯಲ್ಲೆ ತೆಗೆದುಕೊಂಡು ಹೋಗು’ ಎನ್ನುತ್ತಿದ್ದರು. ಅವನು ಪ್ರತಿ ನಿತ್ಯ ಹೂ ಕೊಳ್ಳಲು ಬರುನೆಂಬ ನಂಬಿಕೆ ಅವರದು. ಆ ಸಂತೆಯಲ್ಲಿ ಜಿಗಿಜಿಗಿ ಜನಸಂದಣಿ, ಗದ್ದಲದಲ್ಲು ಮುಂದೆ ಸಾಗುತ್ತಿದ್ದ. ಅಂದು ಬೀದಿ ಬೀದಿಯಲ್ಲಿ ಬಗೆಬಗೆಯ ಹೂಗಳು ತನ್ನ ಮಕರಂದವನ್ನು ಎಲ್ಲೆಡೆ ಚಲ್ಲುತಾ, ಕೊಳ್ಳುವವರ ಮನ ಸೇಳೆಯುತಿದ್ದರೆ, ಯೌವನ ಹೊಸ್ತಿಲಲ್ಲಿರುವ ನಿಂತ ಯುವತಿಯರ ಮನ ಸೂರೆಗೊಳ್ಳುವಂತ ಬಣ್ಣಬಣ್ಣದ ಗುಲಾಬಿ ಹೂಗಳು ತಮ್ಮ ಸೌಂದರ್ಯವನ್ನು ಪ್ರದರ್ಶಿಸುತಿದ್ದವು.

            ಸೂರ್ಯನು ನೆತ್ತಿಯ ಮೇಲೇರಿ ಬರುತ್ತಲೇ ಇದ್ದ ಅವನಿಗೂ ಯೌವನದ ಬಯಕೆ ಮಿಂಚುತ್ತಿದ್ದ. ಅವನಿಗಲ್ಲಿ ಯಾರ ಅಡೆತಡೆಯಿಲ್ಲದೆ ಮೇಲೆಳುತ್ತಲೆ ಇದ್ದ. ಆದಷ್ಟು ಬೇಗ ಬಿಸಿಲೆರುವ ಮುನ್ನ ಹೂಗಳನ್ನು ಕೊಳ್ಳಬೆಕೆಂದುಕೊಂಡ. ಹಿಮವಂತನ ಮುಖದಲ್ಲಿ ಬಗೆಬಗೆಯ ಬಣ್ಣಬಣ್ಣದ ಹೂಗಳನ್ನು ನೋಡುತ್ತ ಮೈ ಮರೆತು ನಿಂತುಬಿಡುತಿದ್ದ. ಇವತ್ತು ನನ್ನವಳಿಗೆ ಗುಲಾಬಿ ಹೂಗಳನ್ನೆ ಕೊಂಡುಕೊಳ್ಳಬೆಕೆಂದು ಸಾಲುಸಾಲು ಅಂಗಡಿಗಳಲ್ಲಿ ಇಷ್ಟವಾದ ಹೂಗಳಿದ್ದರು ಇನ್ನು ಸುಂದವಾದ ಹೂಗಳಿ ಸಿಗಬಹುದೆಂದು ಮುಂದಿನ ಅಂಗಡಿಗೆ ಸಾಗುತಿದ್ದ. ಸಂತೆ ಬೀದಿಯ ತಿರುವಿನ ಅಂಗಡಿಯಲ್ಲಿ ಗೆಂಗುಲಾಬಿಗಳು ಬುಟ್ಟಿಯ ತಮ್ಮ ತುಂಬು ಯೌವನವನ್ನು ಬೆತ್ತಾಲಾಗಿ ಪ್ರದರ್ಶಿಸುತ್ತ ದಾರಿಹೂಕರನ್ನು ತಮ್ಮತ್ತ ಸೇಳೆಯುತ್ತಿದ್ದವು. ಹೂವಿನ ಧಳಗಳು ಮಿಂಚುವ ಕೆಂಬಣ್ಣಕ್ಕೆ ಮನಸೋಲದ ಮನಸ್ಸುಗಳೆ ಇರಲಿಲ್ಲ. ಅಂತಹ ಕೆಂಗುಲಾಬಿಯ ಹೂ ಗುಚ್ಚವನ್ನು ಖರೀದಿಸಿದ ಹಿಮವಂತ ‘ಇಂದು ನನ್ನವಳು ಈಂತಹ ಹೂಗಳನ್ನು ಮುಡಿದು ತುಂಬಾ ಸಂತೋಷಗೊಳ್ಳುತ್ತಾಳೆ’ ಎನ್ನುತ್ತ ಹೂ ಗುಚ್ಚವನ್ನು ಖರಿದಿಸುತ್ತಾನೆ. ಸಂಭ್ರಮದಿಂದಲೆ ಖರೀದಿಸಿ ಬಿಟ್ಟು ಬಂದ ಹಿಂದಿನ ಅಂಗಡಿಯ ಹೂಗಳಿನ್ನು ತಿರುಗಿ ನೋಡಿ ನೆಮ್ಮಿದಿಯ ನಿಟ್ಟುಸಿರನ್ನಿಟ್ಟು ಜನಸಂದಣಿಯ ಬಿಜಿಗುಡುವ ಸಂತೆಯ ಬೀದಿಯ ತಿರುವಿನಲ್ಲಿ ಮಾಯವಾಗುತ್ತಾನೆ.

ಪಾವನಿ ಕಾಲೇಜು ಮುಗಿಸಿಕೊಂಡು ಬಸ್ ತಂಗುದಾಣಕ್ಕೆ ಬಂದು ತನ್ನಕ್ಕನ ಊರಿಗೋಗುವ ಬಸ್ಸನ್ನು ಹಿಡಿದು ಹತ್ತಿ ಕುರುತ್ತಾಳೆ. ಬಸ್ಸು ಜೀಗಿಜೀಗಿ ಎಂದು ಜನರಿಂದ ತುಂಬಿ ತುಳುಕುತ್ತಿರುತ್ತದೆ. ನಿಲ್ದಾಣವನ್ನು ಬಿಟ್ಟ ಬಸ್ಸು ಬೀದಿಯ ಸಂದಿಗೊಂದಿಗಳಲ್ಲಿ ತಿರುಗಿ ಮುಂದೆ ಸಾಗುತ್ತದೆ. ಎರಡು ಮೂರು ಹಳ್ಳಿ ಕ್ರಾಸ್ಗಳನ್ನ ದಾಟಿದನಂತರ ಬಸ್ಸಿನಲ್ಲಿ ಬೆರಳೆಣಿಯಯಷ್ಟೆ ಜನ ಇರುತ್ತಾರೆ. ಡ್ರೈವರ್ ಸೀಟಿನ ಹಿಂಬದಿಯಲ್ಲಿ ಕೈಯಲ್ಲಿ ಹೂ ಗುಚ್ಚವನ್ನಿಡಿದು ನನ್ನದು ಈ ಲೋಕವೇ ಅಲ್ಲವೆಂಬಂತೆ ಮೈಮರೆತು ಕುಳಿತಿರುತ್ತಾನೆ ಹಿಮವಂತ. ಹೂಸುಗಂಧ ಪುಸ್ಪದ ಸುವಾಸನೆ ಬಸ್ಸಿನ ಮೂಲೆ ಮೂಲೆ ತುಂಬಿ ಕಿಟಕಿಗಳ ಮೂಲಕ ಹೊರ ಸಾಗುತ್ತಿರುತ್ತದೆ. ಅತ್ತ ಎಡ ಭಾಗದ 5ನೇ ಸೀಟಿನ ತುದಿಯಲ್ಲಿ ಬೆಲೂರ ಸಿಲಾಬಾಲಿಕೆಯಂತ ಸುಂದರ ಚೆಲುವೆ ಪಾವನಿ ತನ್ನ ಕಾಲೇಜಿನ ಪುಸ್ತಕವನ್ನಿಡಿದು ಎತ್ತಲೋ ನೋಡುತ್ತ ಕುಳಿತವಳಿಗೆ ಹೂವಿನ ಮಕರಂದ ಸುಮಧುರ ಸುವಾಸನೆ ಮನ ಸೇಳೆಯುತ್ತದೆ. ಅತ್ತ ನೋಡುತ್ತಾಳೆ. ಯಾವುದೋ ಭ್ರಮಾ ಲೊದಲ್ಲಿ ತೇಲಿಹೋದ ಸುಂದರ ಸುದ್ರೂಪಿ ಅನಾಮಿಕ ವ್ಯೆಕ್ತಿಯ ಕೈಯಲ್ಲಿ ಕಪ್ಪು ಮಿಶ್ರಿತ ರಕ್ತವನ್ನೆ ಚಿಮ್ಮುವಂತ ಕೆಂಗುಲಾಬಿಗಳು.

1232

                         ತುಂಬು ಯೌನದ ನೋರಾರು ಬಯಕೆ, ಕನಸು, ಆಸೆಳನ್ನ ಕಟ್ಟಿಕೊಂಡ ಪಾವನಿ ಆ ಗುಲಾಬಿಗಳ ಮೇಲೆ ಆಸೆಗಣ್ಣನ್ನು ನೆಟ್ಟು ತದೆಕ ಚಿತ್ತದಿಂದ ನೊಡುತ್ತಿರುತ್ತಳೆ. ಬಸ್ಸು ತನ್ನ ವೇಗವನ್ನು ಹಿಮ್ಮಡಿಗೊಳಿಸುತ್ತ ಸಾಗುತ್ತಿರುವ ಸಮಯಕೆ ಕಾರಣವಿಲ್ಲದೆ ಬಸ್ಸು ಒಮ್ಮೆಲೆ ನಿಂತಂತಾಗಿ ಮುಂದೆ ಸಾಗುವಾಗ ಹಿಮವಂತ ವಾಸ್ತವಕ್ಕೆ ಹಿಂದಿರುಗುತ್ತಾನೆ. ಹಾಗ ಒಮ್ಮೆ ಏನಾಹಿತೇನೊ ಎಂದು ಹಿಂದಲಕ್ಕೆ ತಿರುಗಿದಾಗ ಬಟ್ಟಲುಗಣ್ಣಿನ, ಕಾದ ಹೆಣ್ಣೆಯ ಬಣ್ಣದ, ಆ ಭಾನೆ ಧರೆಗಿಳುದು ಬಂದಿದೆ ಏನೋ! ಎನ್ನುವಂತೆ ನೀಲಿ ಸೀರೆಯನುಟ್ಟ ಪಾವನಿಯನ್ನು ನೋಡುತ್ತಾನೆ, ಅವಳ ಕಣ್ಣಿನ ಆಸೇಗಳನ್ನು ಕಂಡು ಹುಸಿನಗುತ್ತಾನೆ. ಇವನು ಹಿಂದೆ ತಿರುಗಿ ನೋಡಿದ್ದೆ ತಡ ಗುಲಾಬಿ ಹೂಗಳ ಮೇಲೆ ನೆಟ್ಟದ್ದ ಕಣ್ಗಳನ್ನು ಬೇರೆಡೆ ನೆಟ್ಟು ಸುಮ್ಮನಾಗುತ್ತಾಳೆ ಪಾವನಿ. ಆದರೆ ಗುಲಾಬಿ ಹೂವಿನ ಆಸೆ ಅವಳನ್ನು ಮತ್ತೆ ಆ ಕಡೆ ನೋಡುವಂತೆ ಪ್ರೇರೆಪಣೆ ಮಾಡುತ್ತಿತ್ತು. ಅದೆ ಸಮಯಕೆ ಹಿಮವಂತನು ಪಾವನಿಯನ್ನು ನೋಡುತಿದ್ದ ಕಣ್ಣಲ್ಲೆ ಏನು? ಎಂದು ಕೇಳುತಿದ್ದ. ಬಸ್ಸು ಸಾಗುತಲೆ ಇತ್ತು. ಹೀಗೆ ನಡೆಯುತ್ತರುವಾಗ ಪಾವನಿಗೆ ಅವನನ್ನು ನೋಡಿ ಸಿಡಿಮಿಡಿಗೊಳ್ಳಿತ್ತಾಳೆ. ಅವನ ನಿಸ್ಕಲ್ಮಶ ನೋಡವನ್ನ ಕಂಡು ಅನುಮಾನಿಸಿ ಮನಸ್ಸಿನಲ್ಲೇ ಬೈಯ್ಯಲು ಸುರಿವಿಟ್ಟ್ಕೊಂಡಳು. ಮನಸ್ಸಿಗೆ ಸಂಕಟವಾದಂತೆ ‘ಯಾರೂ ಇವನು ಯಾಕೆ ಈಗೆ ನೋಡುತ್ತಿದ್ದಾನೆ, ಹೆಣ್ಣು ಮಕ್ಕಳನ್ನು ಎಂದೂ ನೋಡೇ ಇಲ್ಲವಾ?’ ಎಂದು ಶಪಿಸುತ್ತಾಳೆ.

ಸ್ವಲ್ಪ ಸಮಯದ ನಂತರ ಅವನು ನಿಧಾನವಾಗಿ ಪಾವನಿಯ ಕಡೆ ಮೆಲ್ಲಗೆ ಮೆಲ್ಲನೆ ನಡೆದು ಬರುತ್ತಿದ್ದರೆ ಬಸ್ಸಿನ ವೇಗಕ್ಕೆ ಇವನು ಕುಡಿದವರಂತೆ ವಾಲಾಡುವದನು ಕಂಡ ಪಾವನಿ ಬಯಬೀತಳಾಗಿ ಸುತ್ತಲು ಯಾರಾದರು ನನ್ನ ಸಹಾಯಕ್ಕೆ ಬರುವವರೆ, ಎಂದು ನೋಡಿಕೊಳ್ಳುವಷ್ಟರಲ್ಲಿ, ಹಿಮವಂತ ಗುಲಾಬಿ ಹೂಗುಚ್ಚವನ್ನು ಮುಂದೆ ಚಾಚಿ ‘ತಗೊಳ್ಳಿ’ ಎಂದಾಗ, ಪಾವನಿಯ ಮೈಯಲ್ಲಾ ಜೀರಲೆ ಹೋಡಾದಿದಂತಾಗಿ ಕೋಪ ಮುಗ್ಗರಿಸಿತು, ಎನ್ನವಷ್ಟರಲ್ಲಿ ‘ ಈ ಹೂಗಳನ್ನು ನನ್ನ ಮನದ ದೇವತೆ ಹೃದಯೇಶ್ವರಿ, ನನ್ನ ಪ್ರೀತಿಯ ಮಡದಿಗಾಗಿ ತೇಗೆದುಕೊಂಡಿರುವೇ, ಅವಳಿಗೆ ಹೂಗಳೆಂದರೆ ತುಂಬಾ ಇಷ್ಟ. ಆದರೆ ನಿಮ್ಮ ಕಣ್ಣುಗಳು ಈ ಹೂಗಳನ್ನು ಬಯಸುತ್ತಿವೆ ಸಂಕೊಚ ಪಟ್ಟುಕೊಂಡು ಬೇಡ, ತೇಗೆದುಕೊ. ಈ ಹೂಗಳನ್ನು ನಿನಗೆ ಕೊಟ್ಟೆ ಎಂದು ನನ್ನವಳಿಗೆ ಹೇಳಿದರೆ ಅವಳು ತುಂಬಾ ಸಂತೋಷ ಪಡುತ್ತಾಳೆ’ ಎಂದು ನಮ್ರಯವಾಗಿ ಹೂ ಗುಚ್ಚವನ್ನು ಕೊಡಲು ಮುಂದಾದಾಗ ಪಾವನಿ ಬಯದಿಂದಲೆ ತೆಗೆದುಕೊಳ್ಳುತ್ತಾಳೆ. ಅದು ಏನಾದರು ಮಾಡಿಬಿಡಬಹುದು ತೆಗೆದುಕೊಳ್ಳದಿದ್ದರೆ! ಎಂಬ ಬಯದಿಂದಲೆ ಹುಗುಚ್ಚವನ್ನು ಪಡೆದುಕೊಂಡು ಅವನ ಕಣ್ಣುಗಳನ್ನು ನೋಡುತ್ತಾಳೆ. ಆಶ್ಚರ್ಯ ಆ ವಜ್ರದಂತೆ ಹೊಳೆವ ನಯನಗಳಲಿ ಕಣ್ಣಿರಿನ ಮೋಡ ಸರಿದಾಡುವನು ಕಂಡು ದಿಗ್ಬ್ರಾಂತಾಳಾಗಿ ನಿಲ್ಲುತಾಳೆ.

                 ಬಸ್ಸು ಯಾವೂದೊ ಒಂದು ಕಾಂಪೋಂಡಿನ ಮುಂದೆ ನಿಲ್ಲುತ್ತದೆ. ನೆಮ್ಮದಿಯ ನಿಟ್ಟುಸಿರನ್ನಿಟ್ಟು ಹಿಮವಂತ ಬಸ್ಸನ್ನು ಇಳಿದು ತಿರುಗಿಯೂ ನೋಡದೆ ಸಾಗಿಬಿಡುತ್ತಾನೆ. ಹತ್ತುವ ಇಳುಯುವ ಜನರು ಅಲ್ಲಿ ತುಂಬಾ ಇದ್ದರು ಮತ್ತು ಮಧ್ಯಾನ್ನದ ಸಮಯವಾದ್ದರಿಂದ ಸ್ವಲ್ಪ ಸಮಯ ಬಸ್ಸನ್ನು ಅಲ್ಲೆ ನಿಲ್ಲಿಸಿದ್ದರು. ಹೂಗುಚ್ಚವನ್ನು ಪಡೆದ ಪಾವನಿಯ ಮನಸ್ಸು ಒಳಗೊಳಗೇ ನರ್ತಿಸುತ್ತಿದ್ದರೆ ಪಾವನಿಯ ತಲೆಯಲ್ಲಿ ಅನೇಕ ಪ್ರೇಶ್ನೆಗಳು ಬಿಸಿಲುಗುದುರೆಯಂತ ಓಟಕ್ಕಿಟ್ಟಿದ್ದವು. “ಯಾರೀವನು?, ಹೀಗೆ ಸಂಬಂಧವೇ ಇಲ್ಲದ ವ್ಯಕ್ತಿ ಇಷ್ಟೊಂದು ಹೂಗಳನ್ನು ನಾ ಕೇಳದಿದ್ದರು ಕೊಟ್ಟುಬಿಟ್ಟನಲ್ಲಾ? ಛ್ಛೇ ಅವನಿಗೊಂದು ಥ್ಯಾಕ್ಸ್ ಆದರು ಹೇಳಬೇಕಿತ್ತು.” ಎಂದು ಯೋಚಿಸುವಷ್ಟರಲ್ಲಿ ಬಸ್ಸು ಮತ್ತೆ ಸಾಗಲು ಅಣಿಯಾಯಿತು. ಹೋಗಲಿ ಯಾರವನು ಎಂದು ಮತ್ತೊಮ್ಮೆ ಅವನು ಹೊಕ್ಕ ಆ ಕಾಂಪೋಂಡಿನ್ನು ನೋಡುತ್ತಾಳೆ. ಒಳಗೆ ಯಾರು ಇಲ್ಲ, ಇವನೊಬ್ಬನೆ ಅಲ್ಲಿ ನಿಂತು ಏನನ್ನು ಹೇಳುತಿದ್ದಾನೆ. ಯಾರ ಜೋತೆ ಮಾತನಾಡುತಿದ್ದಾನೆ, ಹುಚ್ಚನಿರಬೇಕು ಇವನು ಒಬ್ಬನೆ ಮಾತನಾಡುತಿದ್ದಾನಲ್ಲಾ? ಎಂದುಕೊಂಡು ಆ ಕಾಂಪೊಂಡಿನ ಭೊರ್ಡನ್ನೊಮ್ಮೆ ನೋಡಿ ದಿಗ್ಬ್ರಾಂತಳಾಗಗುತ್ತಳೆ, ಆ ಕಾಂಪೋಡಿನ ಗೇಟಿನ ಮೇಲ್ಗಡೆ “ರುದ್ರಭೂಮಿ”(ಸ್ಮಶಣ) ಎಂಬ ನಾಮಫಲಕವನ್ನು ಕಂಡು. ಒಮ್ಮೆಲೆ ದುಃಖ ಮುಕ್ಕಳಿಸಿಬಿಡುತ್ತದೆ. ಆ ಹೂಗುಚ್ಚವನ್ನು ನೋಡಿದ ತಕ್ಷಣವೆ ಅವಳಿಗರಿವಿಲ್ಲದಂತೆ ಕಣ್ಣೀರು ಹೂದಳಗಳ ಮೆಳೆ ಇಬ್ಬನಿಯಾಗಿಬಿಡುತ್ತವೆ…..,

  -ಸಿದ್ದುಯಾದವ್ ಚಿರಿಬಿ
-ಸಿದ್ದುಯಾದವ್ ಚಿರಿಬಿ

ಕಥೆ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...