Oyorooms IN

Saturday, 22nd July, 2017 4:28 PM

BREAKING NEWS

ಕಥೆ

“ನನ್ನವರು ಯಾರು ಇಲ್ಲ ಯಾರಿಗೆ ಯಾರು ಇಲ್ಲ”

lover-boyಹಾಡು ಇಂಪಾಗಿದೆ ಕೇಳಿ ಬರುತ್ತಿದೆ. ಅಷ್ಟೇ ಚೆಂದವಾಗಿ ಕೂಡಿಕೊಂಡಿದೆ ಮನಸ್ಸಿನ ನೋವಿನ ವ್ಯಥೆ. ಕವಿ ಬಣ್ಣಿಸುವಾಗ ನೋವಲ್ಲಿರುತ್ತಾನೋ ಏನೋ ಸಮಯಕ್ಕೆ ತಕ್ಕಂತೆ ರಚಿಸುವ ಶಕ್ತಿ ಆತನಿಗಿರುತ್ತೆ ಎಂಬ ಮಾತುಗಳು ನಿಜ. ಅಷ್ಟೀಲ್ದೆ ಹೇಳಿದ್ದಾರೆಯೇ “ರವಿ ಕಾಣದ್ದನ್ನು ಕವಿ ಕಂಡನು” ಎಂದು.
ಅವನು ತನ್ನಷ್ಟಕ್ಕೇ ತಾನು ಮಾತನಾಡಿಕೊಳ್ಳುತ್ತಿದ್ದಾನೆ. ಬಿ.ಎಮ್.ಟಿ.ಸಿ ಬಸ್ಸು ವೇಗವಾಗಿ ರಸ್ತೆಯಲ್ಲಿ ಓಡುತ್ತಿದ್ದೆ. ಮೂಲೆಯಲ್ಲೇಲ್ಲೋ ನಿಂತ ಕಂಡಾಕ್ಟರ್ “ಟಿಕೇಟ್… ಟಿಕೇಟ್”… ಎಂದು ಅರಚಿಕೊಳ್ಳುತ್ತಿದ್ದಾನೆ. ತನ್ನ ಮೊಬೈಲ್ ನಲ್ಲಿ ಹಾಡಿನ ಶಬ್ದವನ್ನು ಜಾಸ್ತಿ ಮಾಡಿಕೊಂಡು ಕೇಳುತ್ತಿದ್ದ. ಈ ಹಾಡು ಅವನ ಫೇವರೇಟ್. ಪದೇ… ಪದೇ ಕೇಳುವ ಹಾಡು. ಇವನ ಹೆಸರು: ವಿವೇಕ್. ಸೈಲೆಂಟ್ ವ್ಯಕ್ತಿ ಎಂದರೆ ತಪ್ಪಾಗಲಾರದು. ಆಗ ತಾನೇ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿಕೊಂಡಿದ್ದ. ನೋಡೋಕ್ಕೆ ಸ್ವಲ್ಪ ಏಳೇಗೆಂಪು ಬಣ್ಣದವನು. ಮುಖದ ಲಕ್ಷಣ ಚೆನ್ನಾಗಿತ್ತು. ಹಳೇ ಸಿನಿಮಾಗಳಲ್ಲಿ ರಾಜ್ ಕುಮಾರ್ ಬಿಟ್ಟಿರುವಂತೆ ಇದೆ ಅವನ ತುಟಿಯಂಚಿನ ಮೀಸೆ. ಕೆನ್ನೆಗಳ ಮೇಲೆ ಅರಳಿನಿಂತ ಗಡ್ಡವನ್ನು ಟ್ರೀಮ್ ಮಾಡಿಕೊಂಡು ಬಸ್ಸು ಸ್ಟಾಂಡಿಗೆ ಬಂದ ಅಂದ್ರೆ ಎಲ್ಲರು ಇವನ ಕಡೆಗೆ ಒಮ್ಮೆಯಾದ್ರೂ ನೋಡಿರ್ತಾ ಇದ್ರೂ. ಹುಡ್ಗೇರಂತು ಕದ್ದು ಕದ್ದು ಏಷ್ಟು ಸಲ ನೋಡಿರ್ತಾರೋ ಅವರಿಗೆ ಗೊತ್ತು. ಅದ್ರೇ ಇವನು ಮಾತ್ರ ಯಾರ ಕಡೆಗೂ ನೋಡ್ತಾ ಇರ್ಲಿಲ್ಲ. ಅದಕ್ಕೆ ಕಾರಣ ಅವಳು, ಅವಳು ಎಂದರೇ ಅವಳೇ…?
ಅವನು ಇಷ್ಟಪಟ್ಟ ಮೊದಲ ಹುಡ್ಗಿ, ಕೊನೆಯ ಹುಡ್ಗಿ. ಅವಳೇ ಚಾರು! ಅವಳ ಪೂರ್ತಿ ಹೆಸರು ಚಾರಿತ್ರಿಕಾ. ಕಳೆದ ಏಳು ತಿಂಗಳ ಹಿಂದೆ ಮದುವೆಯಾಗಿ ಗಂಡನ ಜೊತೆ ಚೆನ್ನಾಗಿದ್ದಾಳೆ. ಇವನ ನೆನಪು ಮಾತ್ರವಲ್ಲ ಹೆಸರನ್ನು ಮರೆತು ಬಿಟ್ಟಿದ್ದಾಳೆ ಅಂದ್ರೆ ಅವಳ ಗಂಡ ಚಾರಿತ್ರಿಕಾಳನ್ನು ಇನ್ನೆಷ್ಟು ಚೆನ್ನಾಗಿ ನೋಡ್ಕೋಳ್ತಾ ಇರ್ಬೇಕು, ಇನ್ನೇಷ್ಟು ಪ್ರೀತಿ ಮಾಡ್ತೀರ್ಬೇಕು ಯೋಚ್ನೆ ಮಾಡ್ತೀದ್ದ. ಬಿ.ಎಮ್.ಟಿ.ಸಿ ಬಸ್ಸು ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದೆ. ಕಿಟಕಿಯ ಕಿಂಡಿಗಳಿಂದ ಗಾಳಿ ಒಳಗೆ ನುಗ್ಗುತ್ತಿದೆ. ಆ ಗಾಳಿಯ ರಭಸಕ್ಕೆ ಕಣ್ಣು ಮುಚ್ಚಿದ…!
****
ಈ ಪ್ರೀತಿ ಹುಟ್ಟಿದ್ದು ನಾಲ್ಕು ವರ್ಷಗಳ ಹಿಂದೆ. ಆಗ ತಾನೇ ಇಂಜೀನಿಯರಿಂಗ್ ಗೆ ಸೇರಿಕೊಂಡಿದ್ದ. ಚಾರಿತ್ರಿಕಾ ಕೂಡ ಅವನ ಬ್ಯಾಚ್ ನವಳೇ. ಇಬ್ಬರಿಗೂ ಪರಿಚಯವಿಲ್ಲ. ಹೀಗೆ ಸುಮಾರು ಆರು ತಿಂಗಳು ಪರಿಚಯನ್ನೇ ಇಲ್ಲದೇ ಇದ್ದವರು. ಅವತ್ತು ಆಗಸ್ಟ್ ತಿಂಗಳ ಮೊದಲನೇಯ ಭಾನುವಾರ “ಪ್ರೆಂಡ್ ಶಿಫ್ ಡೇ”!. ಕ್ಲಾಸ್ ನಲ್ಲಿ ಎಲ್ಲರು ಪ್ರೆಂಡ್ ಶೀಫ್ ಬ್ಯಾಂಡನ್ನು ಒಬ್ಬರಿಗೊಬ್ಬರು ಕಟ್ಟುತ್ತಿದ್ದಾರೆ. ಮೊದಲ ಬಾರಿಗೆ ಚಾರಿತ್ರಿಕಾ ಪ್ರೆಂಡ್ ಶೀಫ್ ಬ್ಯಾಂಡನ್ನು ಹಿಡಿದು ಅವನ ಮುಂದೆ ನಿಂತು “ಹ್ಯಾಪಿ ಪ್ರೆಂಡ್ ಶಿಫ್ ಡೇ” ಅಂದಳು. ಕೈಯಲ್ಲಿಡಿದ ಪುಸ್ತಕವನ್ನು ಕ್ಲೋಸ್ ಮಾಡಿ ಅವಳ ಕಡೆಗೆ ನೋಡಿದ.
“ಹ್ಯಾಪಿ ಪ್ರೆಂಡ್ ಶೀಪ್ ಡೇ” ಅವನನ್ನೇ ನೋಡುತ್ತಾ ಚಾರಿತ್ರಿಕಾ ಹೇಳಿದಳು.
ಏನು ಮಾತನಾಡದೇ ಅವನ ಬಲಗೈಯನ್ನು ಅವಳ ಮುಂದಕ್ಕೆ ಚಾಚಿದ.
ಅದನ್ನು ಕಂಡ ಚಾರಿತ್ರಿಕಾ ತಂದಿದ್ದ ಪ್ರೆಂಡ್ ಶಿಫ್ ಬ್ಯಾಂಡನ್ನು ಅವನ ಕೈಗೆ ಕಟ್ಟಿದಳು.
“ಥ್ಯಾಂಕ್ಯೂ” ಎಂದನಷ್ಟೇ. ಅಷ್ಟರಲ್ಲಿ ಅವನ ಕಣ್ಣಿಗೆ ಅವಳ ಎಡಭಾಗದ ಗಲ್ಲದ ಮೇಲೆ ಇದ್ದ ಕಪ್ಪು ಚುಕ್ಕಿ ಕಾಣಿಸಿತ್ತು. ಆಗ ಅವನ ಮನಸ್ಸಿನಲ್ಲಿ “ಯಾರಿಟ್ಟರೀ ಚುಕ್ಕಿ… ಯಾಕಿಟ್ಟರೀ ಚುಕ್ಕಿ… ಚುಕ್ಕಿ ಗಲ್ಲದ ಚುಕ್ಕಿ… ಚುಕ್ಕಿ…” ಎಂದು ಹೃದಯ ಹಾಡಿತ್ತು. ಆ ಹಾಡು ಯಾವಾಗ ಅವನ ಹೃದಯದಲ್ಲಿ ಶುರುವಾಯಿತ್ತೋ ಆಗಿನಿಂದ ದಿನಾಲೂ ಅವಳನ್ನು ನೋಡೋ ಕೆಲಸವಾಯ್ತು. ದಿನಾಲು ಅವಳನ್ನು ಫಾಲೋ ಮಾಡೋದು, ಅವಳ ಬಗ್ಗೆ ತಿಳಿದುಕೊಳ್ಳುವುದು, ಅವಳಿಗೆ ಏನ್ ಇಷ್ಟ? ಅವಳಿಗೆ ಯಾವ ಪುಸ್ತಕ ಇಷ್ಟವಾಗುತ್ತೆ ? ಯಾವ ಹೀರೋ ಇಷ್ಟ? ಅವಳು ಯಾರಾನ್ನಾದ್ರೂ ಇಷ್ಟ ಪಡ್ತಾ ಇದ್ದಾಳಾ ಅಥವಾ ಇಲ್ವಾ ಎಲ್ಲವನ್ನು ತಿಳಿದು ಕೊಂಡಿದ್ದ. ಅವಗಾಗ್ಲೆ ವಿವೇಕ್ ಗೆ ಚಾರಿತ್ರಿಕಾ ತುಂಬಾ ಇಷ್ಟವಾಗಿ ಬಿಟ್ಟಿದ್ಲೂ. ಯಾಕಂದ್ರೆ ಅವಳ ಹೃದಯಕ್ಕೆ ಇನ್ನೂ ಯಾರು ಕೂಡ ಲಗ್ಗೆ ಹಿಟ್ಟಿರಲಿಲ್ಲ. ಅವಳು ಕೂಡ ಅವಕಾಶ ಮಾಡಿಕೊಟ್ಟಿರಲಿಲ್ಲ. ಅವಳ ಲೆಕ್ಕಾಚಾರವೇ ಬೇರೆಯಾಗಿತ್ತು. ಪ್ರೀತಿ ಅಂದ್ರೆ ಅವಳ ಪ್ರಕಾರ ಬೋಗಸ್ ಅಂತ. ಯಾಕೋ ಅವಳಿಗೆ ಲವ್ ಅನ್ನೋ ಅಕ್ಷರದ ಬಗ್ಗೆ ನಂಬಿಕೆಯಿರಲಿಲ್ಲ. ಸಿನಿಮಾಗಳಲ್ಲಿ ನೋಡಿದಷ್ಟು, ಕತೆ-ಕಾದಂಬರಿಗಳಲ್ಲಿ ಓದಿದಷ್ಟು ಸುಂದರವಾಗಿರೋದಿಲ್ಲ ಅಂತ ತಿಳಿದುಕೊಂಡಿದಳು. ಚಾರಿತ್ರಿಕಾಳಿಗೆ ಯಾರಾದ್ರೂ ಪ್ರಪೋಸ್ ಮಾಡಿದರೇ ಹಿಂದೆ ಮುಂದೆ ನೋಡದೇ “ಅಣ್ಣಾ” ಎಂದು ಕರೆದು ಬಿಡುತ್ತಿದ್ದಳು. ಯಾರಾದ್ರೂ ಬಲವಂತ ಮಾಡಿದರೆ “ನೋಡಿ ಬ್ರದರ್ ನಿಜವಾಗ್ಲೂ ನೀವು ನನ್ನಣ್ಣನ ಥರಾನೇ ಇದ್ದೀರಾ. ನಿಮ್ಮನ್ನು ನೋಡಿದ್ರೆ ಆ ಥರಾ ಫಿಲ್ಲಿಂಗ್ಸ್ ಬರ್ತಾ ಇಲ್ಲ ಬ್ರದರ್ ಸಾರಿ…” ಹೇಳಿ ಜಾಣ್ಮೆಯಿಂದ ಜಾರಿಕೊಳ್ಳುತ್ತಿದ್ದಳು.
ಚಾರಿತ್ರಿಕಾಳಾ ಪ್ರತಿಯೊಂದು ಹೆಜ್ಜೆಯನ್ನು ಗಮನಿಸುತ್ತಿದ್ದ ವಿವೇಕ್ ಗೆ ಅವಳ ಭಾವನೆಗಳು ಏನೆಂಬುದನ್ನು ತಿಳಿದುಕೊಂಡಿದ್ದ. ಅವಳ ದಾರಿಯಲ್ಲೇ ಹೋಗಿ ಚಾರಿತ್ರಿಕಾಳನ್ನು ಪ್ರೀತಿ ಮಾಡಬೇಕೆಂದುಕೊಂಡಿದ್ದ. ಅದು ಹೇಗೆ? ಯಾವ ರೀತಿ? ತಲೆ ಬಿಸಿ ಮಾಡಿಕೊಂಡ. ಅವನ ಮನಸ್ಸಿನಲ್ಲಿ ಒಂದು ಭಯವಿತ್ತು. ಪ್ರಪೋಸ್ ಮಾಡುವ ಸಮಯದಲ್ಲಿ ‘ಅಣ್ಣಾ’ ಎಂದು ಎಲ್ಲಿ ಕರೆದು ಬಿಡುತ್ತಾಳೋ ಅನ್ನೋ ಅತಂಕವಿತ್ತು. ಹಾಗಾಗ್ಲೆ ಚಾರಿತ್ರಿಕಾಳ ಒಂದು ವಿಕ್ನೇಸ್ ತಿಳಿದುಕೊಂಡು ಬಿಟ್ಟಿದ್ದ. ಅವಳು ಪ್ರತಿ ಮಂಗಳವಾರ ತಪ್ಪದೇ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಸ್ವಲ್ಪ ದೂರದಲ್ಲೇ ಇರೋ ‘ಕೆಂದಾವಾರೆ ವೃದ್ಧಾಶ್ರಮ’ಕ್ಕೆ ಹೋಗ್ತಾ ಇದ್ಲೂ. ಅಲ್ಲಿರುವ ವಯಸ್ಸಾದ ಅಜ್ಜ-ಅಜ್ಜಿಯರ ಜೊತೆ ಕಾಲ ಕಳೆದು ಖುಷಿ ಖುಷಿಯಾಗಿ ದೇವಸ್ಥಾನದಿಂದ ತಂದಿದ್ದ ಪ್ರಸಾದವನ್ನು ಎಲ್ಲರಿಗೂ ಅಂಚಿ ಅಮೇಲೆ ಕಾಲೇಜ್ ಗೆ ಹೋಗ್ತಾ ಇದ್ಲೂ ಚಾರಿತ್ರಿಕಾ.
ಹಾಗಾಗ್ಲೆ ಪ್ರೇಮ ನಿವೇಧನೆಗೆ ದಿನಾಂಕ ನಿಗಧಿ ಮಾಡಿದ ವಿವೇಕ್. ಇವನು ಚಾರಿತ್ರಿಕಾಳನ್ನು ಸುಮಾರು ನಾಲ್ಕೈದು ತಿಂಗಳು ಅವಳ ಹಿಂದೆ ಅಲೆದು, ಅವಳ ಹೃದಯದ ಮೇಲೆ ಬಿಳಿ ಕೆಂದಾವರೆ ಹೂವನ್ನು ಬೆಳೆಸಲು ಮುಂದಾಗಿದ್ದ. ಆ ದಿನ ಬಂದೆ ಬಿಟ್ಟಿತ್ತು. ಅವತ್ತು ಅವನ ಬರ್ತ್ ಡೇ. ಅದು ಮಂಗಳವಾರವೇ ಬಂದಿದ್ದು ಮತ್ತೊಂದು ವಿಶೇಷ. ಅವತ್ತು ವಿವೇಕ್ ಚಾರಿತ್ರಿಕಾ ಹೋಗುವ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಹೋಗಿ. ಭಗವಂತನ ದರ್ಶನ ಮಾಡಿಕೊಂಡು ಪಕ್ಕದಲ್ಲೆ ಇದ್ದ ‘ಕೆಂದವಾರೆ ವೃದ್ಧಾಶ್ರಮ’ಕ್ಕೆ ಬಂದು ಕಾಯುತ್ತಿದ್ದ. ತುಂಬಾ ವೊತ್ತು ಕಾದ. ಸಮಯ ಉರುಳುತ್ತಿತ್ತು ಚಾರಿತ್ರಿಕಾಳ ದರ್ಶನ ಮಾತ್ರವಿಲ್ಲ. ಪ್ರತಿ ಮಂಗಳವಾರ ಒಂಬತ್ತಕ್ಕೆಲ್ಲಾ ಬರ್ತಾ ಇದ್ದ ಚಾರಿತ್ರಿಕಾ ಹನ್ನೊಂದಾದ್ರೂ ಬರದಿದ್ದನ್ನು ಕಂಡು ಬೇಸರದಿಂದ ಹೊರಡಬೇಕೆಂದುಕೊಂಡ. ಅಷ್ಟರಲ್ಲಿ ವೃದ್ಧಾಶ್ರಮದ ಬಾಗಿಲಿನ ಬಳಿ ನಿಂತು ಯಾರ ಜತೆನೋ ಮಾತಾಡ್ತಾ ಇದ್ಲೂ ಚಾರಿತ್ರಿಕಾ. ಅದನ್ನು ಕಂಡು ಖುಷಿ ಒಂದು ಕಡೆ. ಭಯ ಮತ್ತೊಂದು ಕಡೆ. “ಪ್ರೀತಿ ನಿವೇಧನೆಗೆ ಬಂದಿದ್ದೇನೆ ಒಪ್ಪದಿದ್ದರೆ ಏನು ಗತಿ?” ಅನ್ನೋ ಪ್ರಶ್ನೆ ಅವನನ್ನು ಕಾಡುತ್ತಿತ್ತು.
ಅಷ್ಟರಲ್ಲಿ ಅಲ್ಲಿಗೆ ಬಂದ ಚಾರಿತ್ರಿಕಾ “ಹಾಯ್ ನಿವೇನಿಲ್ಲಿ” ಕೇಳಿದಳು.
ಚಾರಿತ್ರಿಕಾ ನಗುತ್ತಾ ಅವನ ಬಳಿ ಕೇಳಿದಾಗ ಅವನ ಕಣ್ಣಿಗೆ ಅವಳ ತುಟಿಯಂಚಿನ ಕಪ್ಪು ಚುಕ್ಕಿ ಅವನನ್ನು ನೋಡಿ ನಾಚಿಕೆಯಿಂದ ನಗುವಂತೆ ಕಂಡಿತ್ತು.
“ಹಲೋ ನಿಮ್ಮನೇ ಕೇಳ್ತಾ ಇರೋದು. ನೀವೇನು ಇಲ್ಲಿ?” ಎಂದಳು ಚಾರಿತ್ರಿಕಾ.
“ನಾನು ಪ್ರತಿ ವರ್ಷ ಇಲ್ಲಿಗೆ ಬರ್ತೇನೆ” ವಿವೇಕ್ ಹೇಳಿದ.
“ಓಹೋ ನೀವು ವರ್ಷದವ್ರ… ನಾನು ವಾರದವಳು” ಎಂದಳು ಚಾರಿತ್ರಿಕಾ.
“ಅಂದ್ರೆ” ಅವನಿಗೆ ಅವಳಾಡಿದ ಮಾತುಗಳು ಅರ್ಥವಾಗಲಿಲ್ಲ.
“ಏನು ಅಂದ್ರೆ? ನಿಮ್ಮನ್ನು ಪಾಸ್ ಮಾಡಿದವರು ಯಾರು? ಅವರೆಲ್ಲೋ ನಿಮ್ಮಥರನ್ನೇ ದಡ್ರೀರಬೇಕು” ಎಂದಳು.
ಚಾರಿತ್ರಿಕಾ ಏನು ಹೇಳ್ತಾ ಇದ್ದಾಳೋ ಅವನಿಗೆ ಅರ್ಥ ಮಾಡ್ಕೋಳ್ಳೋ ಸ್ಥಿತಿಯಲ್ಲಿರಲಿಲ್ಲ. ಅವಳು ಮಾತಾನಾಡುತ್ತಿದ್ದರೆ. ಅವಳ ಮುದ್ದಾದ ಮಾತುಗಳು ಅವನ ಹಾರ್ಟ್ ಬೀಟ್ ನಲ್ಲಿ ರಂಗೋಲಿ ಬಿಡೋದಕ್ಕೆ ಚುಕ್ಕಿಗಳನ್ನಿಡುತ್ತಿದ್ದವು. ಅವಳ ಗಲ್ಲದ ಮೇಲಿದ್ದ ಚುಕ್ಕಿ ಅವನನ್ನು ಅಣಕಿಸುವಂತೆ ಕಂಡಿತ್ತು.
“ಇವತ್ತು ನನ್ನ ಬರ್ತ್ ಡೇ” ಹೇಳಿದ.
ಪಟ ಪಟ ಅಂತ ಮಾತಾನಾಡುತ್ತಿದ್ದ ಚಾರಿತ್ರಿಕಾ ಅವನಾಡಿದ ಮಾತು ಕೇಳಿ ಒಂದು ಕ್ಷಣ ಮೌನ ವಹಿಸಿದಳು. ಸ್ವಲ್ಪ ಸಮಯದ ನಂತರ “ಸಾರಿ… ಸೋ ಮೆನಿ ಮೆನಿ ಹ್ಯಾಪಿ ರೀರ್ಟನ್ಸ್ ಆಪ್ ದೀ ಡೇ” ಅಂದಳು.
“ಥ್ಯಾಂಕ್ಯೂ”… ಅಷ್ಟೇ ಹೇಳಿದ.
ಚಾರಿತ್ರಿಕಾ ಮಾತನಾಡಲಿಲ್ಲ.
ಮಾತು ಮುಂದುವರೆಸಿದ ವಿವೇಕ್. “ಸೋ…”
ಚಾರಿತ್ರಿಕಾ ಅವನ ಕಡೆಗೆ ನೋಡಿದಳು.
“ನಿಮ್ ಹೃದಯನ್ನಾ ನನಗೆ ಸೇಲ್ ಮಾಡ್ಬೀಡಿ. ತುಂಬಾ ಚೆನ್ನಾಗಿ ಮಗು ಥರಾ ಜೋಪಾನ ಮಾಡ್ತೀನಿ” ಅಂದ.
“ಸೇಲ್ ಮಾಡೋಕ್ಕೆ ಅದೇನು ಜಾತ್ರೆಯಲ್ಲಿ ಮಾರೋ ಕಡಲೇಪುರಿನಾ” ಎಂದಳು.
ಅವಳ ಮಾತುಗಳನ್ನು ಕೇಳಿ ಒಂದು ಕ್ಷಣ ಮೌನವಾಗಿದ್ದ. ವಿವೇಕನ ಮನಸ್ಸಿನಲ್ಲಿ ಅವಳು ನನ್ನ ಪ್ರೀತಿ ಒಪ್ಪೋದಿಲ್ಲಾ ಅಂತ ಕನ್ ಫರ್ಮ್ ಮಾಡಿಕೊಳ್ಳುತ್ತಿದ್ದ.
“ಯಾಕ್ ಸುಮ್ನೆ ಹಾಗ್ಬೀಟ್ರೀ” ಚಾರಿತ್ರಿಕಾ ಹೇಳಿದಳು.
ಏನು ಮಾತನಾಡಲಿಲ್ಲ. ಅವನಿಗೆ ಪ್ರೀತಿ ಸಿಗುವುದಿಲ್ಲ ಎಂಬಾ ಭಾವನೆ ಅವನ ಹೃದಯಕ್ಕೆ ಸರಪಳಿಯಂತೆ ಸುತ್ತುಕೊಳ್ಳುತ್ತಿದ್ದವು. ಯೋಚಿಸುತ್ತಾ “ನೋಡಿ ನಾನು ನಿಮ್ಮನ್ನು ತುಂಬಾ ಪ್ರೀತಿಸ್ತಾ ಇದ್ದೀನಿ. ಎಲ್ಲಾರು ಥರಾ ಅಲ್ಲ ನನ್ ಪ್ರೀತಿ. ನಂದು ಹುಚ್ಚು ಪ್ರೀತಿ ಅಲ್ಲ, ಬೆಸ್ಟ್ ಪ್ರೀತಿ, ನಾನು ನಿಮ್ಮನ್ನಲ್ಲ ನಿಮ್ಮ ನಗುವನ್ನು ಪ್ರೀತಿಸ್ತೀನಿ, ನಿಮ್ಮ ನಗುವನ್ನಲ್ಲ ಗಲ್ಲದ ಮೇಲಿರೋ ಚುಕ್ಕಿನ್ನಾ ಪ್ರೀತಿಸ್ತೀನಿ, ಆ ಚುಕ್ಕಿಯನ್ನಾಲ್ಲಾ ನಿಮ್ ತುಟಿಯಂಚಿನಲ್ಲಿ ಅರಳುವ ಕೋಮಲವಾದ ಮುಗ್ಧತೆಯನ್ನು ಪ್ರೀತಿಸ್ತೀನಿ, ಮುಗ್ಧತೆಯೊಂದನ್ನೆ ಅಲ್ಲಾ ಕಲ್ಮಶನ್ನೇ ಇಲ್ಲದಿರೋ ನಿಮ್ ಹೃದಯಾನ ಪ್ರೀತಿಸ್ತೀನಿ. ಆ ಹೃದಯಾನ ನಂಗೆ ಕೋಟ್ಬೀಡಿ ಪ್ಲೀಸ್. ಆ ಹೃದಯಾನ ಮಗು ಥರಾ ಪ್ರೀತಿಸ್ತೀನಿ” ಎಂದ.
ಚಾರಿತ್ರಿಕಾ ಅವನಾಡುತ್ತಿದ್ದ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದಾಳೆ. ಅವನ ಮಾತುಗಳಿಗೆ ಮೌನವೇ ಉತ್ತರ ಎಂಬಂತೆ ನಿಂತಿದ್ದಾಳೆ.
ಅವಳ ಮೌನವನ್ನು ಕಂಡು. “ನೋಡಿ. ನನಗೆ ಯಾರು ಇಲ್ಲ? ಅಪ್ಪ, ಅಮ್ಮ, ಅಕ್ಕ, ಅಣ್ಣ, ತಮ್ಮ, ತಂಗಿ ಅನ್ನೋ ಸಂಬಂಧಗಳ ಬೆಲೆ ಗೊತ್ತಿಲ್ಲ. ಇನ್ನೂ ನಿಮ್ಮಗೆ ಆರ್ಥವಾಗೋ ಹಾಗೇ ಹೇಳಬೇಕಂದ್ರೆ ನಾನೊಬ್ಬ ಅನಾಥ” ಎಂದ ವಿವೇಕ್.
ಚಾರಿತ್ರಿಕಾ ಅವನ ಮಾತುಗಳನ್ನು ಕೇಳಿ ಅವನ ಕಡೆಗೆ ಅನುಕಂಪದಿಂದಲ್ಲೋ ಇಲ್ಲ ಅನುಮಾನದಿಂದಲ್ಲೋ ನೋಡಿದಳು. ಅವನ ಕಣ್ಣುಗಳಿಂದ ಹನಿಗಳು ಒಂದೊಂದಾಗಿ ಕೆಳಗೆ ಬಿದ್ದವು.
“ನೋಡಿ ಅಳೋದೆಲ್ಲಾ ಬೇಡ. ನಿಮ್ ಬರ್ತ್ ಡೇ ದಿನ ಕಣ್ಣೀರಾಕ್ಬೇಡಿ” ಅಂದಳು.
“ನನ್ ಬರ್ತ್ ಡೇ ಗೆ ನಿಮ್ ಹೃದಯಾನ ಗೀಪ್ಟ್ ಕೋಡ್ಬೀಡಿ ಪ್ಲೀಸ್” ವಿವೇಕ್ ಕೇಳಿಕೊಂಡ ಅವಳಲ್ಲಿ.
ಚಾರಿತ್ರಿಕಾ ಏನು ಮಾತಾನಾಡಲಿಲ್ಲ. ಮೌನಂ ಸಮ್ಮತೀ ಲಕ್ಷಣಂ ಎಂಬುದೇ ಅವಳ ನಿರ್ಧಾರ. ಮಾತು ಮುಂದುವರಿಸಿದಳು “ಪ್ಲೀಸ್ ನನ್ಗೆ ಅದೇಲ್ಲಾ ಇಷ್ಟ ಹಾಗೋಲ್ಲ. ಅದ್ರೆ ಇವತ್ತು ನಿಮ್ ಬರ್ತ್ ಡೇ! ನಿಮ್ ಮನಸ್ಸು ನೋಯಿಸೋಕ್ಕೆ ಇಷ್ಟವಿಲ್ಲ. ಯೋಚ್ನೆ ಮಾಡ್ತೀನಿ. ಅದ್ರೆ ಒಪ್ಕೋಳ್ತೀನಿ ಅಂತ ನಿರೀಕ್ಷಿಸ್ಬೇಡಿ” ಸ್ವಲ್ಪ ಸಮಯದ ನಂತರ ವಿವೇಕ್ ಗೆ ಹೇಳಿದಳು.
ಅವನು ಏನು ಮಾತನಾಡದೇ ನಂಬರ್ ಕೊಟ್ಟಾ!. ಚಾರಿತ್ರಿಕಾ ಅವನ ಕಡೆಗೂ ನೋಡದೇ ಅಲ್ಲಿಂದ ಹೊರಟಿ ಹೋದಳು.
ವಿವೇಕ್ ನ ಮನಸ್ಸಿನಲ್ಲಿ ಭಯ ಶುರುವಾಗಿತ್ತು ಹಾಗಾಗಲ್ಲೇ. ಅವಳ ಮಾತು ಚಾಟಿ ಏಟಿನಂತಿತ್ತು. ಇನ್ನು ನನ್ನ ಪ್ರೀತಿ ಚಾರಿತ್ರಿಕಾ ಒಪ್ಪುವುದಿಲ್ಲಾ ಎಂದು ಕನ್ ಫರ್ಮ್ ಆಗಿತ್ತು. ಅವಳ ಯೋಚ್ನೆಯಲ್ಲೇ ಕ್ಲಾಸ್ಗೆ ಹೋಗದೇ ಹಾಸ್ಟೆಲ್ ಸೇರಿದ. ಟೇಬಲ್ ಮೇಲೆ ಬ್ಯಾಗ್ ಬೀಸಾಕಿ ಅಂಗ್ತಾನ ಮಲಗಿದ್ದ. ತಿರುಗುತ್ತಿದ್ದ ಪ್ಯಾನ್ ಅವನ ಸೋಲನ್ನು ಕಂಡು ಬೀಗುತ್ತಿರುವಂತೆ ಕಂಡಿತ್ತು. ಪ್ಯಾನಿನ್ನ ರಭಸಕ್ಕೆ ಗಾಳಿ ರೂಂನಲ್ಲೆಲ್ಲಾ ಸಂಚಾರಿಸುತ್ತಿದ್ದರು ಅವನ ಮುಖದಲ್ಲಿ ಮಾತ್ರ ಬೆವರಿನ ಹನಿಗಳು ಮಾಯವಾಗದೇ ನಿಂತಿದ್ದವು. ಕಣ್ಮುಚ್ಚಿಕೊಂಡ! ಆಗ ಕಣ್ಣೀರು ಕಳ್ಳನಂತೆ ಅವನ ಕೆನ್ನೆಗಳಿಗೆ ಸ್ಪರ್ಶಿಸುತ್ತಾ ಜಾರಿದವು. ಹಾಗೆ ಮಲಗಿದ್ದಾನೆ. ಇತ್ತ ಸಮಯ ಉರುಳುತ್ತಿದೆ. ಅತ್ತ ನೆನಪುಗಳು ಕಾಡುತ್ತಿವೆ. ಸುಮಾರು ಆರು ತಾಸುಗಳಷ್ಟು ಸಮಯವಾಗಿದೆ ವಿವೇಕ್ ಹಾಗೆ ಮಲಗಿಕೊಂಡಿದ್ದಾನೆ ಕಣ್ಣೀರಿನ ಜೊತೆಯಲ್ಲಿ. ಮೊದಲ ಪ್ರೀತಿ ಕೈ ಕೊಟ್ಟಿತ್ತು ಅವನ ಹೃದಯ ಹೆಚ್ಚರಿಸಿತ್ತು. ಆಗ ರೇಡಿಯೋದಲ್ಲಿ “ನನ್ನವರು ಯಾರು ಇಲ್ಲ…. ಯಾರಿಗೆ ಯಾರು ಇಲ್ಲ…” ಹಾಡು ಬರುತ್ತಿತ್ತು. ಅವನ ಸ್ಥಿತಿಗೂ ಆ ಹಾಡು ಬಂದ ಸಮಯಕ್ಕೂ ಅವನ ಕಂಗಳು ಜಾಸ್ತೀನ್ನೇ ಒದ್ದೆಯಾಗಿದ್ದವು. ಅಷ್ಟರಲ್ಲಿ ಅವನ ಮೊಬೈಲ್ ಗೆ ಮೇಸೆಜ್ ವೊಂದು ಬಂತು. ಬೇಸರದಿಂದಲ್ಲೇ ಅದನ್ನು ನೋಡಿದ. ಅದು ಜಾರಿತ್ರಿಕಾಳ ಮೇಸೆಜ್. ಏನು ಟೈಪ್ ಮಾಡಿದ್ದಾಳೆ ಎಂದು ನೋಡೋ ಕುತೂಹಲ ಜಾಸ್ತಿಯಾಯಿತ್ತು ಅವನಿಗೆ. ಅದರಲ್ಲಿ ಚಾರಿತ್ರಿಕಾ ಹೀಗೆ ಟೈಪ್ ಮಾಡಿದಳು.
ಡಿಯರ್….
ಪ್ರೀತಿ ಅಂದ್ರೆ ನಂಗೆ ಇಷ್ಟವಿಲ್ಲ. ಅದರ ಬಗ್ಗೆ ನನಗೆ ಆಸಕ್ತಿಯು ಇಲ್ಲ. ಅದೊಂದು ಹುಚ್ಚು ವ್ಯಾಮೋಹವಷ್ಟೇ. ಅದಕ್ಕೆ ನಾವ್ಯಾಕೆ ಬಲಿಯಾಗಬೇಕು. ಹೀಗೆಲ್ಲಾ ನಿನ್ಗೆ ಹೇಳ್ಬೇಕು ಅನ್ಸುತ್ತೆ ಅದ್ರೆ ಆಗ್ತಾ ಇಲ್ಲ ಅದಕ್ಕೆ ಕಾರಣ ಕೂಡ ಗೊತ್ತಿಲ್ಲ. ನನ್ ಹೃದಯಾನ ಮಗು ಥರ ನೋಡ್ಕೋಂತ್ತೀನಿ ಅಂದೆಯಲ್ಲಾ ಅಷ್ಟೆ ಸಾಕು ಕಾಣೋ ನನ್ಗೆ. ನೀನ್ ಪ್ರೀತಿ ನಿಜ. ಯಾಕಂದ್ರೆ ನೀನ್ ಪ್ರೀತಿನಾ ಕೋಳ್ಳೋರು ಯಾರು ಇಲ್ಲ? ಬೇರೆ ಯಾಕೆ ನಾನೇ ನಿನ್ನ ಪ್ರೀತಿನಾ ಕೊಂಡುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಯಾಕೆ ಗೊತ್ತಾ ? ನನ್ನ ಹೃದಯನಾ ಬೇರೆ ಯಾರೋ ಸಂಪಾದಿಸಿಯಾಗಿದೆ. ನಿನಗೆ ಬೇಸರ ಮಾಡ್ಬೇಕು ಅಂತಾ ನಾನು ಹೇಳ್ತಾ ಇಲ್ಲ. ನಾನು ಹೀಗಾಗಲೇ ಬೇರೆಯವರ ಸ್ವತ್ತು. ನಿಜ ಹೇಳ್ತಾಯಿದ್ದೀನಿ ಕೇಳು ಇವತ್ತು ಬೆಳ್ಳಿಗೆ ನಿನ್ನ ಆಶ್ರಮದಲ್ಲಿ ನಿನ್ ಮುಂದೆ ನಿಂತು ಮಾತನಾಡುವಾಗ ಪ್ರೀತಿಯ ಬೆಲೆ ಏನೆಂಬುದು ತಿಳಿಯಿತ್ತು. ನಿನ್ನ ಪ್ರೀತಿನ್ನಾ ಪಡೆಯೋ ಯೋಗ್ಯತೆ ನನಗಿಲ್ಲ ಕ್ಷಮಿಸು. ಒಂದು ಮಾತು ನನ್ನ ನೆನಪುಗಳನ್ನು ಮರೆತುಬಿಡು.. ಯಾಕಂದ್ರೆ ನನ್ಗೆ ಮದುವೆ ಫಿಕ್ಸ್ ಆಗಿದೆ ಮೀಸ್ ಮಾಡ್ದೇ ಬಂದು ನನಗೆ ನಿನ್ನ ನೆನಪುಗಳನ್ನು ಗಿಪ್ಟ್ ಕೊಟ್ಟು ಹೋಗು ಅದು ಸ್ನೇಹಿತನಂತೆ. ನನ್ನ ಈ ಮಾತುಗಳಿಂದ ಬೇಸರವಾಗಿದ್ದರೆ ಕ್ಷಮೆ ಇರಲಿ. ನಿನ್ನ ಮನಸ್ಸನ್ನು ನೋಯಿಸಿದಕ್ಕೆ, ಆ ನಿನ್ನ ಪುಟ್ಟ ಹೃದಯಕ್ಕೆ ನೋವು ಕೋಟ್ಟಿದಕ್ಕೆ. ಹೆಚ್ಚಿಗೆ ಹೇಳೋದಿಲ್ಲ ಸ್ನೇಹಿತನಂತೆ ಬಂದು ನೆನಪುಗಳ ಗಿಪ್ಟ್ ಕೊಟ್ಟು ಆಶೀರ್ವಾದಿಸು ಗೆಳೆಯ.
ಇಂತಿ ನಿನ್ನ ನೆನಪುಗಳ ಕೊಂಡವಳು
ಚಾರಿತ್ರಿಕಾ
ಮೇಸೆಜನ್ನು ಓದಿದ ಮೇಲೆ ವಿವೇಕ್ ನಿಟ್ಟೂಸಿರು ಬಿಡುತ್ತಾ ಕಣ್ಣ್ ಮುಚ್ಚಿದ.
****
ಬಿ.ಎಂ.ಟಿ.ಸಿ ಬಸ್ಸು ಹಾಗಗಲ್ಲೇ ಮೆಜೇಸ್ಟಿಕ್ ಬಸ್ ನಿಲ್ದಾಣವನ್ನು ತಲುಪ್ಪಿತ್ತು. ಮುಚ್ಚಿದ್ದ ಕಣ್ಣು ತೆರೆದು ನೋಡಿದ ವಿವೇಕ್. ಆಗಾಗಲೇ ಅವಳು ಕಳುಹಿಸಿದ ಮೆಸೇಜನ್ನು ನೆನಪಿಸಿಕೊಂಡಿದ್ದ. ಮೂರು ವರ್ಷದ ನೆನಪು ಹೀಗ್ ಬಂದು ಹಾಗ್ ಹೋಯ್ತು ಮನಸ್ಸು ಹೆಚ್ಚರಿಸಿತ್ತು. ಮತ್ತೊಂದು ಬಸ್ಸು ಹತ್ತಿದ್ದ. ಆಗ ಮನಸ್ಸು ಹೇಳಿತ್ತು “ನಿನಗೆ ಮೊದಲ ಪುಟ ಅವಳು” ಎಂದು. ಯೋಚಿಸಿದ ಮೊದಲ ಪ್ರೀತಿ ಜೀವನಕ್ಕೆ, ನೆನಪಿಗೆ ಮೊದಲ ಪುಟ, ಮರೆಯಲಾಗದ ಪುಟ ಈ ಮೊದಲ ಪುಟ ಎಂದು. ಮತ್ತೊಂದು ಮನಸ್ಸು ಹೇಳಿತ್ತು ನಿನ್ನ ಹೃದಯದಲ್ಲಿರುವ ಪ್ರೀತಿ ಬೀಕಾರಿಯಾಗಿದೆ ಕೊಳ್ಳುವವರು ಯಾರು ಇಲ್ಲವೆಂದು? ಮುಗುಳ್ನಗುತ್ತಾ ಬಸ್ಸಿನ ಕಿಟಕಿಯ ಕಿಂಡಿಯಿಂದ ಬರುತ್ತಿದ್ದ ಗಾಳಿಗೆ ಕಣ್ಣು ಮುಚ್ಚಿ ಕುಳ್ಳಿತ್ತ ವಿವೇಕ್….!

ಮೊದಲ ಪುಟ ಅವಳು…!

ಶಿವಶಂಕರ್ ದೊಡ್ಡಬಳ್ಳಾಪುರ
ಶಿವಶಂಕರ್
ದೊಡ್ಡಬಳ್ಳಾಪುರ

ಕಥೆ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...