Oyorooms IN

Sunday, 20th August, 2017 10:48 PM

BREAKING NEWS

ಪ್ರಮುಖ ಸುದ್ದಿಗಳು

ಪ್ರವಾಸ ವಿಶೇಷ ಲೇಖನ : ಹನುಮಾನ್ ಗುಂಡಿ, ಈಕೆ ಶಾಂತ ಸುಂದರಿ !

ಪ್ರವಾಸ ವಿಶೇಷ ಲೇಖನ : ಹನುಮಾನ್ ಗುಂಡಿ, ಈಕೆ ಶಾಂತ ಸುಂದರಿ !
ಸ್ಪೇಷಲ್ ಡೆಸ್ಕ್‌: ಮಲೆನಾಡಿನ ಮಡಿಲಲ್ಲಿ ಧುಮ್ಮಿಕ್ಕಿ ಹರಿಯುವ ಗುಪ್ತಗಾಮಿನಿ, ಸುಂದರ ಜಲಪಾತಗಳು, ಗಿರಿ ಶಿಖರಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ದಟ್ಟಾರಣ್ಯದ ನಡುವೆ ಎಲ್ಲೋ ಹುಟ್ಟಿ, ಎಲ್ಲೋ ಹರಿದು ಯಾರ ಕಣ್ಣಿಗೂ ಬೀಳದೆ ಸಾಗರಗಳನ್ನು ಸೇರಿಕೊಳ್ಳುವ ನದಿಗಳು, ಅಂಥಹ ನದಿಗಳು ಸೃಷ್ಠಿಸುವ ಜಲಪಾತಗಳ ಅಂದವೇ ಅಂದ ಬಿಡಿ. ಅವು ಸದಾ ಸುಂದರ, ಅವರೆಲ್ಲ ಒಂದು ರೀತಿಯಲ್ಲಿ ಶಾಂತ ಸುಂದರಿಯರು! ಇವಳೂ ಹಾಗೇ, ಕ್ಷಮಿಸಿ, ಇವನು ಹಾಗೇ, ಏಕೆಂದರೆ ಇವನು ಶಾಂತ ಸುಂದರ.

ಹೌದು, ಈ ಜಲಪಾತಕ್ಕೆ ಇರುವ ಹೆಸರು ಹನುಮಾನ್ ಗುಂಡಿ ಎಂದು. ದಟ್ಟ ಕಾನನದ ನಡುವೆ ಸುಮಾರು 100 ಅಡಿಯಿಂದ ಧುಮ್ಮಿಕ್ಕಿ ಹರಿಯುವ ಅವನ ಸೌಂದರ್ಯವನ್ನು ವರ್ಣಿಸವುದು ಅಸಾಧ್ಯ ಬಿಡಿ. ಮೇಲಿನಿಂದ ಬೀಳುವ ನೀರಿನ ಅಡಿಯಲ್ಲಿ ನಿಂತುಕೊಂಡರೆ ಮೈ, ಮನವೆಲ್ಲ ಕೂಲ್ ಕೂಲ್.

ಹೋಗುವುದು ಹೇಗೆ : ಶ್ರೀಕ್ಷೇತ್ರ ಹೊರನಾಡಿನ ಅನ್ನಪೂರ್ಣ ದೇವಸ್ಥಾನಕ್ಕೆ ಬರುವ ಭಕ್ತರು ಈ ಸ್ಥಳವನ್ನು ತಮ್ಮ ಪ್ರವಾಸ ಪಟ್ಟಿಗೆ ಸೇರಿಸಿಕೊಳ್ಳಬಹುದು. ಹೊರನಾಡು-ಕಳಸ-ಮಾರ್ಗವಾಗಿ ಕುದುರೆಮುಖಕ್ಕೆ ಹೋದರೆ, ಅಲ್ಲಿಂದ ಸುಮಾರು 15 ಕಿ.ಮೀ ನೇರವಾಗಿ ಸಾಗಬೇಕು. ಹೀಗೆ ಸಾಗುತ್ತ ಬರುವ ಸಮಯದಲ್ಲಿ ರಸ್ತೆಯ ಬಲ ಭಾಗದಲ್ಲಿ ತನ್ನ ದುಮ್ಮುಕ್ಕುವ ಸದ್ದಿನಿಂದಲೇ ನಿಮ್ಮನ್ನು ಕರೆಯುತ್ತದೆ. ಅಲ್ಲಿ ಪ್ರವೇಶ ಶುಲ್ಕ ತೆತ್ತು ಪ್ರವೇಶ ಮಾಡಬೇಕು. ಇನ್ನೂ ಕುದುರೆಮುಖದಿಂದ ನೀವು ಇಲ್ಲಿಗೆ ಬರುವ ಸಮಯದಲ್ಲಿ ಹೆಸರೇ ಇಡದೇ ಹತ್ತಾರೂ ಸಣ್ಣ ಸಣ್ಣ ಜಲಪಾತಗಳು. ಝರಿಗಳು ನಿಮ್ಮನ್ನು ಸ್ವಾಗತಿಸುತ್ತವೆ, ಇನ್ನೂ ಇಲ್ಲಿಗೆ ಸ್ವಂತ ವಾಹನದಲ್ಲಿ ತೆರಳಿದರೆ ಕ್ಷೇಮ.

ಹನುಮಾನ್ ಗುಂಡಿ ಇರುವುದು ಕುದುರೆಮುಖದಿಂದ ಸುಮಾರು 15 ಕಿ.ಮಿ ದೂರದಲ್ಲಿ, ನೂರಾರು ಸಣ್ಣ ಸಣ್ಣ ಝರಿಗಳಿಂದ ನಿರ್ಮಾಣವಾಗಿರುವುದೇ ಈ ಜಲಪಾತ. ಎತ್ತರದಿಂದ ಬಳಕುತ್ತ ಇಳಿಯುವ, ಬೇಸಿಗೆಯಲ್ಲಿ ಬಸವಳಿಯದ ಈ ಜಲದಾರೆಯ ಸೊಬಗು ಕಣ್ಣಿಗೆ ಹಬ್ಬ.

ನೀವು ಇಲ್ಲಿ ಶುಲ್ಕಪಾವತಿ ಮಾಡಿದ ನಂತರ, ಇಲ್ಲಿ 250  ಮೆಟ್ಟಿಲುಗಳನ್ನು ಇಳಿದು ಕೆಳಗೆ ಹೋಗಬೇಕು. ಮಳೆಗಾಲದಲ್ಲಿ ನೀವು ಇಲ್ಲಿಗೆ ಭೇಟಿ ನೀಡಿದರೆ ಅದರ ಅನುಭವೇ ಬೇರೆ. ಈ ಕಾಡಿನಲ್ಲಿ ಹಾವುಗಳು ಇರುವುದರಿಂದ ಕೊಂಚ ಎಚ್ಚರ ಅಗತ್ಯ, ಜಲಪಾತ ಕೆಳಗೆ ನಿಂತುಕೊಳ್ಳುವ ಮುನ್ನ ತುಂಬ ಎಚ್ಚರದಿಂದ ಇರಬೇಕು.

ಯಾವ ಕಾಲ ಭೇಟಿಗೆ ಸೂಕ್ತ?
ಸಾಮಾನ್ಯವಾಗಿ ಜಲಪಾತಗಳ ಸೊಬಗು ಹೆಚ್ಚಾಗುವು ಮಳೆಗಾದಲ್ಲಿ, ಚಳಿಗಾಲದಲ್ಲಿ. ಅದರೆ ಇಲ್ಲಿಗೆ ನೀವು ಮೂರು ಕಾಲದಲ್ಲಿಯೂ ಭೇಟಿ ನೀಡಬಹುದು. ದಟ್ಟ ಕಾನನದ ನಡುವೆ ಇರುವ ಈ ಜಲಪಾತವಿದ್ದು ಇಲ್ಲಿ ಯಾವ ಊರು ಸಹ ಇಲ್ಲ. ಸ ಹೀಗಾಗಿ ಇಲ್ಲಿಗೆ ಬರಲು ಬೇಗ ಹೊರಟು ಈ ಇಲ್ಲಿಂದ ಕತ್ತಲಾಗುವ ಮುನ್ನ ನಿರ್ಗಮಿಸಿದರೇ ಕ್ಷೇಮ. ಶೃಂಗರಿ ಮತ್ತು ಕಾರ್ಕಳ ಇಲ್ಲಿನ ಹತ್ತಿರದ ಊರುಗಳು.

ಊಟ ತಿಂಡಿ?
ಇಲ್ಲಿ ಯಾವುದೇ ಹೋಟೆಲ್, ಉಪಾಹಾರ ಮಂದಿರ ಇಲ್ಲ. ಕೆಲ ಸಣ್ಣ ಪುಟ್ಟ ಅಂಗಡಿಗಳಿದ್ದು ಕುರುಕಲು ತಿಂಡಿ ಅಷ್ಟೆ ಲಭ್ಯವಾಗುತ್ತದೆ. ಹೊರನಾಡು, ಕಳಸದಿಂದ ನೀವು ಬಂದರೇ ಅಲ್ಲಿರುವ ಹೋಟೆಲ್ ನಲ್ಲಿ ತಿಂಡಿ, ಊಟವನ್ನು ಕಟ್ಟಿಸಿಕೊಂಡು ಬಂದೇ ಸೂಕ್ತ.

ಸೂಕ್ತ ವ್ಯವಸ್ಥೆ ಕಲ್ಪಿಸಿ
ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನೂಕುಲವಾಗುಂತಹ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಿ,
ರಘು ಏ.ಏನ್-ಪ್ರವಾಸಿಗ

ಪ್ರವಾಸಿ ತಾಣವನ್ನಾಗಿ ಮಾಡಿ
ಇಷ್ಟು ಸುಂದರವಾಗಿರುವ ಈ ಜಲಪಾತವನ್ನು ಇನಷ್ಟು ಪ್ರವಾಸಿಗರು ಇಲ್ಲಿಗೆ ಬರುವಂತೆ ಮಾಡಲು ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು
ಮಹೇಶ್ ಕುಮಾರ್‍,ಪ್ರವಾಸಿಗ

ಚಿತ್ರ, ಬರಹ : ಅವಿನಾಶ್ ತಾಳ್ಯ

Suthanabbe Falls or Hanumanagundi Falls is in located in the hilly surroundings of the Kudremukh National Park in the Chikkamagaluru district  Karnataka

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...